27.6 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬೃಹತ್ ಸೀರೆ ಮೇಳಕ್ಕೆ ಚಾಲನೆ: ಅ. 16ರಿಂದ 21ರವರೆಗೆ ಆಯ್ದ ಸೀರೆಗಳ ಮೇಲೆ ಶೇ. 10ರಿಂದ 50ರವರೆಗೆ ವಿಶೇಷ ರಿಯಾಯಿತಿ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಕಲ್ಲೇರಿಯ ಉನ್ನತಿ ಕಟ್ಟಡದಲ್ಲಿರುವ ಸುನಿಲ್ ಸಿಲ್ಕ್ಸ್ ಸಾರೀಸ್ ಮಳಿಗೆಯಲ್ಲಿ ಆಯೋಜಿಸಲಾಗಿರುವ ಬೃಹತ್ ಸೀರೆ ಮೇಳಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಶ್ರೀ ಎ.ವಿ. ಶೆಟ್ಟಿ ಹಾಗೂ ಉದ್ಯಮಿ ಶ್ರೀಮತಿ ಸುಜಾತ ಆರಿಗ ಅವರು ಚಾಲನೆ ನೀಡಿದರು.

ಅಕ್ಟೋಬರ್ 16ರಿಂದ 21ರವರೆಗೆ ನಡೆಯಲಿರುವ ಈ ವಿಶೇಷ ಸೀರೆ ಮೇಳದಲ್ಲಿ ಗ್ರಾಹಕರಿಗಾಗಿ ವೈವಿಧ್ಯಮಯ ವಿನ್ಯಾಸದ ಆಕರ್ಷಕ ಸೀರೆಗಳ ಸಂಗ್ರಹವನ್ನು ಒದಗಿಸಲಾಗಿದ್ದು, ಆಯ್ದ ಸೀರೆಗಳ ಮೇಲೆ ಶೇ. 10ರಿಂದ 50ರವರೆಗೆ ವಿಶೇಷ ರಿಯಾಯಿತಿ ಘೋಷಿಸಲಾಗಿದೆ.

ಮಹಿಳೆಯರ ಅಭಿರುಚಿ ಹಾಗೂ ಅಗತ್ಯಗಳಿಗೆ ಅನುಗುಣವಾಗಿ ಸೀರೆಗಳ ವಿಶಿಷ್ಟ ಸಂಗ್ರಹವನ್ನು ಹೊಂದಿರುವ ಈ ಮಳಿಗೆಯಲ್ಲಿ ಕಲಂಕಾರಿ, ಮಹೇಶ್ವರಿ ಸಿಲ್ಕ್ ಕಾಟನ್, ಇಳಕಲ್, ಧಾರವಾಡ ಕಸೂತಿ, ಮಸರಾಯಿ ಕಾಟನ್, ಸೆಮಿ ಮೈಸೂರು ಸಿಲ್ಕ್ ಕ್ರೇಪ್, ಮಂಗಳಗಿರಿ, ಜಪಾನ್ ಕ್ರೇಪ್, ಡೋಲಾ ಸಿಲ್ಕ್, ಮಲ್‌ಮಲ್ ಸಿಲ್ಕ್, ಜೂಟ್ ಕಾಟನ್, ವಾಯಿಲ್, ಫ್ಯಾನ್ಸಿ ಹಾಗೂ ಯೂನಿಫಾರಂ ಸೀರೆಗಳು ಸೇರಿದಂತೆ ಹಲವು ಬಗೆಯ ಸೀರೆಗಳು ಲಭ್ಯವಿವೆ. ಇದರೊಂದಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿರುವ ನೂತನ ವಿನ್ಯಾಸದ ಟ್ರೆಂಡಿ ಸೀರೆಗಳೂ ಗ್ರಾಹಕರ ಗಮನ ಸೆಳೆಯುತ್ತಿವೆ.

ಸಾಂಪ್ರದಾಯಿಕ ಸೊಬಗು ಹಾಗೂ ಆಧುನಿಕ ವಿನ್ಯಾಸಗಳ ಸಮ್ಮಿಲನದೊಂದಿಗೆ ಆಯೋಜಿಸಿರುವ ಈ ಸೀರೆ ಮೇಳವು ಮಹಿಳೆಯರಿಗೆ ತಮ್ಮ ಇಷ್ಟದ ಸೀರೆಗಳನ್ನು ವಿಶೇಷ ರಿಯಾಯಿತಿಯಲ್ಲಿ ಖರೀದಿಸಲು ಉತ್ತಮ ಅವಕಾಶ ಕಲ್ಪಿಸಿದೆ.

ಈ ಸಂದರ್ಭದಲ್ಲಿ ಸುನಿಲ್ ಸಿಲ್ಕ್ಸ್ ಸಾರೀಸ್ ಮಳಿಗೆಯ ಮಾಲಕಿ ಶ್ರೀಮತಿ ಪವಿತ್ರ ಸುನಿಲ್ ಅವರು ಆಗಮಿಸಿದ ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿ, ಕೃತಜ್ಞತೆ ಸಲ್ಲಿಸಿದರು.

ಮಳಿಗೆಯ ವಿಳಾಸ: ಸುನಿಲ್ ಸಿಲ್ಕ್ಸ್ ಸಾರೀಸ್, ಕೊಠಡಿ ಸಂಖ್ಯೆ 9, ಉನ್ನತಿ ಕಟ್ಟಡ, ಕಲ್ಲೇರಿ, ಧರ್ಮಸ್ಥಳ – 574216.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7899856284.

Related posts

ಬೆಳ್ತಂಗಡಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ , ತಾಲೂಕು ಸಮಿತಿಯ ಆಶ್ರಯದಲ್ಲಿ ವಾಲ್ಮೀಕಿ ಜಯಂತಿಯ ಪ್ರಯುಕ್ತ ‘ವಾಲ್ಮೀಕಿ ಜೀವನಾದರ್ಶ’ ಉಪನ್ಯಾಸ ಕಾರ್ಯಕ್ರಮ

Suddi Udaya

ಮಾ. 2: ಮುಗೇರಡ್ಕ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಮತ್ತು ಆಹಾರ ಮೇಳ: ಚಪ್ಪರ ಮೂಹೂರ್ತ

Suddi Udaya

ಬೆಳ್ತಂಗಡಿ : ದಕ್ಷ ಅಧಿಕಾರಿ,ಅಬಕಾರಿ ನಿರೀಕ್ಷಕರಾದ ಸೌಮ್ಯಲತಾರವರಿಗೆ ಪದೋನ್ನತಿ: ಮಂಗಳೂರು ಉಪವಿಭಾಗದ ಉಪ ಅಧೀಕ್ಷಕರಾಗಿ ವರ್ಗಾವಣೆ

Suddi Udaya

ವೇಣೂರು: ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ವೈಭವ: ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಂದ ವಿವಿಧ ಸಮಿತಿಗಳ ಜೊತೆ ಸಮಾಲೋಚನಾ ಸಭೆ

Suddi Udaya

ಮುಂಡಾಜೆ: ಪಡೀಲು ಆನಂದ ನಾಯ್ಕ ನಿಧನ

Suddi Udaya

ಗುರುವಾಯನಕೆರೆ ಎಕ್ಸೆಲ್ ವಿಜ್ಞಾನ ಪ.ಪೂ. ಕಾಲೇಜಿಗೆ ಶೇ. 99.76 ಫಲಿತಾಂಶ: 254 ವಿದ್ಯಾರ್ಥಿಗಳಿಗೆ ಡಿಸ್ಟಿಂಕ್ಷನ್

Suddi Udaya
error: Content is protected !!