27.5 C
ಪುತ್ತೂರು, ಬೆಳ್ತಂಗಡಿ
October 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್‌ಡಿಎಂ ಪಾಲಿಟೆಕ್ನಿಕ್‌ನಲ್ಲಿ ‘ರೋಬೊ ರೇಸ್’ ಮತ್ತು ‘ಮೈಂಡ್ ರಶ್’ ತಾಂತ್ರಿಕ ಸ್ಪರ್ಧೆ

ಉಜಿರೆ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್‌ಡಿಎಂ) ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗ ಹಾಗೂ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ‘ರೋಬೊ ರೇಸ್’ ಮತ್ತು ‘ಮೈಂಡ್ ರಶ್’ ಎಂಬ ತಾಂತ್ರಿಕ ಸ್ಪರ್ಧೆಗಳನ್ನು ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್, ಪುಂಜಾಲಕಟ್ಟೆಯ ಸಹಾಯಕ ಶಿಕ್ಷಕ ಧರಣೇಂದ್ರ ಕೆ. ಉದ್ಘಾಟಿಸಿದರು. ‘ರೋಬೊ ರೇಸ್’ ಸ್ಪರ್ಧೆಗೆ ವಿದ್ಯಾರ್ಥಿಗಳು ತಯಾರಿಸಿದ ಲೈನ್ ಫಾಲೋಯಿಂಗ್ ರೋಬೋಟ್ ನಿಗದಿತ ಮಾರ್ಗದಲ್ಲಿ ಚಲಿಸುವ ಮೂಲಕ ಚಾಲನೆ ನೀಡಲಾಯಿತು. ‘ಮೈಂಡ್ ರಶ್’ ಸ್ಪರ್ಧೆಗಾಗಿ ಎಚ್‌ಟಿಎಂಎಲ್, ಸಿಎಸ್‌ಎಸ್ ಮತ್ತು ಜಾವಾಸ್ಕ್ರಿಪ್ಟ್ ತಂತ್ರಜ್ಞಾನಗಳನ್ನು ಬಳಸಿ ಅಭಿವೃದ್ಧಿಪಡಿಸಿದ ವೆಬ್‌ಸೈಟ್‌ ಅನ್ನು ಕೌಂಟ್‌ಡೌನ್ ಮತ್ತು ಅನಿಮೇಷನ್‌ಗಳ ಮೂಲಕ ಪರಿಚಯಿಸಲಾಯಿತು. ಇದರೊಂದಿಗೆ ‘ಪ್ರಾಂಪ್ಟ್ ಬಡ್ಡಿ’ ಮತ್ತು ‘ಲಾಜಿಕ್ ರಶ್’ ಸ್ಪರ್ಧೆಗಳನ್ನೂ ಪರಿಚಯಿಸಲಾಯಿತು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಧರಣೇಂದ್ರ ಕೆ. ಅವರು, “ಇದು ತಂತ್ರಜ್ಞಾನದ ಯುಗವಾಗಿದ್ದು, ವಿದ್ಯಾರ್ಥಿಗಳು ತಾಂತ್ರಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಕೃತಕ ಬುದ್ಧಿಮತ್ತೆಯನ್ನು ಕಲಿಕೆಯ ಸದುಪಯೋಗಕ್ಕಾಗಿ ಬಳಸಿಕೊಳ್ಳಬೇಕು. ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಪ್ರಶ್ನಿಸುವವರು ಬೆಳೆಯುತ್ತಾರೆ ಮತ್ತು ಸಮಾಜದಿಂದ ಗೌರವಿಸಲ್ಪಡುತ್ತಾರೆ. ಜೀವನದಲ್ಲಿ ಸಾಧನೆ ಮಾಡುವುದರ ಜೊತೆಗೆ ಮೊದಲು ಉತ್ತಮ ಮಾನವರಾಗಬೇಕು,” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಸಂತೋಷ್ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ವ್ಯವಸ್ಥಾಪಕ ಚಂದ್ರನಾಥ್ ಜೈನ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಮೇರಿ ಸ್ಮಿತಾ ಹಾಗೂ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ದಿನೇಶ್ ಉಪಸ್ಥಿತರಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಸಂದೀಪ್ ಮಾತನಾಡಿ, ಇಂತಹ ನವೀನ ತಾಂತ್ರಿಕ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದರು. ಮುಂದಿನ ದಿನಗಳಲ್ಲಿ ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜು ಮತ್ತು ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜುಗಳು ಸಹಭಾಗಿತ್ವದಲ್ಲಿ ಇಂತಹ ಶೈಕ್ಷಣಿಕ ಚಟುವಟಿಕೆಗಳನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸಬಹುದು ಎಂದು ಅಭಿಪ್ರಾಯಪಟ್ಟರು.

ಸ್ಪರ್ಧೆಗಳ ವಿಜೇತರು:

‘ರೋಬೊ ರೇಸ್’ ಸ್ಪರ್ಧೆಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಹರಿಪ್ರಸಾದ್ ಮತ್ತು ತಂಡ ಪ್ರಥಮ ಸ್ಥಾನ ಪಡೆದರೆ, ವಿಘ್ನೇಶ್ ಎಲ್. ಮತ್ತು ತಂಡ ದ್ವಿತೀಯ ಸ್ಥಾನ ಹಾಗೂ ಸಾರ್ಥಕ್ ಎಚ್. ಗುಡಿಗಾರ್ ಮತ್ತು ತಂಡ ತೃತೀಯ ಸ್ಥಾನ ಗಳಿಸಿತು. ವೈರ್‌ಲೆಸ್ ರೋಬೋಟ್ ವಿಭಾಗದಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ಶೆಲ್ಟನ್ ಮ್ಯಾಥ್ಯೂ ಮತ್ತು ತಂಡ ಹಾಗೂ ರೂಪೇಶ್ ಮತ್ತು ತಂಡ ವಿಶೇಷ ಮನ್ನಣೆ ಪಡೆದರು.

‘ಮೈಂಡ್ ರಶ್’ ತಾಂತ್ರಿಕ ಸ್ಪರ್ಧೆಯ ‘ಪ್ರಾಂಪ್ಟ್ ಬಡ್ಡಿ’ ವಿಭಾಗದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪೂಜಿತ್ ಮತ್ತು ಜೆ. ಆದರ್ಶ್ ಪ್ರಥಮ ಸ್ಥಾನ ಪಡೆದರೆ, ಕಂಪ್ಯೂಟರ್ ಸೈನ್ಸ್ ವಿಭಾಗದ ನಿಶ್ಮಿತಾ ಮತ್ತು ಯಶ್ವಿತಾ ದ್ವಿತೀಯ ಸ್ಥಾನ ಗಳಿಸಿದರು. ‘ಲಾಜಿಕ್ ರಶ್’ ವಿಭಾಗದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಸನ್ನ ಪ್ರಥಮ ಸ್ಥಾನ ಹಾಗೂ ಪ್ರಶಾಂತ್ ದ್ವಿತೀಯ ಸ್ಥಾನ ಪಡೆದರು.

ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ವರ್ಷ ಕೆ.ಪಿ. ಕಾರ್ಯಕ್ರಮ ನಿರೂಪಿಸಿದರು. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ವೈಶಾಕ್ ಕೆ ಎಸ್ ಅತಿಥಿಗಳನ್ನು ಪರಿಚಯಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿನಿ ಶ್ರುತಿ ವಂದಿಸಿದರು.

Related posts

ಗುರುವಾಯನಕೆರೆ ಶಾಲೆಯಲ್ಲಿ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟ

Suddi Udaya

ಪೆರೋಡಿತ್ತಾಯಕಟ್ಟೆ ಶಾಲೆಯ ಎಸ್.ಡಿ.ಎಂ.ಸಿ ಸಮಿತಿ ರಚನೆ

Suddi Udaya

ಆಪರೇಷನ್ ಸಿಂಧೂರ್” – ಪಹಲ್ಗಾಮ್ ದಾಳಿಗೆ ಪ್ರತೀಕಾರ

Suddi Udaya

ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ನಾರಾವಿ ಗ್ರಾಮ ಪಂಚಾಯತ್ ನ ಎದುರು ಬಿಜೆಪಿ ಪ್ರತಿಭಟನೆ

Suddi Udaya

ಕೃಷಿ ಸಚಿವ ಚೆಲುವರಾಯ ಸ್ವಾಮಿ ಸೌತಡ್ಕ ದೇವಸ್ಥಾನಕ್ಕೆ ಭೇಟಿ

Suddi Udaya

ಮುಂಡಾಜೆ: ಕೃಷಿಕ ಶಾಜಿ ವಾಟೆಪ್ಪಿಳ್ಳಿಲ್ ಹೃದಯಾಘಾತದಿಂದ ನಿಧನ

Suddi Udaya
error: Content is protected !!