27.5 C
ಪುತ್ತೂರು, ಬೆಳ್ತಂಗಡಿ
October 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ‘ಮಿನಿ ಬ್ರಿಡ್ಜ್ ಮಾಸ್ಟರ್’ ತಾಂತ್ರಿಕ ಸ್ಪರ್ಧೆ

ಉಜಿರೆ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್‌ಡಿಎಂ) ಪಾಲಿಟೆಕ್ನಿಕ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ‘ಮಿನಿ ಬ್ರಿಡ್ಜ್ ಮಾಸ್ಟರ್’ ಎಂಬ ತಾಂತ್ರಿಕ ಸ್ಪರ್ಧೆಯನ್ನು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ವಿದ್ಯಾರ್ಥಿಗಳು ತಯಾರಿಸಿದ ಸೇತುವೆಯ ಮಾದರಿಯನ್ನು ಮತ್ತು ಭಾರ ತೆಗೆದುಕೊಳ್ಳುವ ಸಾಮಥ್ಯ ಪರೀಕ್ಷೆಗೆ ಉಪನ್ಯಾಸಕರ ಮಾರ್ಗದಶನದೊಂದಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಹೈಡ್ರಾಲಿಕ್ ವಿಧಾನದ ಉಪಕರಣದಿಂದ ಕಾರ್ಯಕ್ರಮವನ್ನು ಉಜಿರೆಯ ಎಸ್ ಡಿ ಎಂ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯಿನಿ ವಿದ್ಯಾ ಕಿರಣ್ ಅತಿಥಿಗಳೊಂದಿಗೆ ಉದ್ಘಾಟಿಸಿದರು.


ಶ್ರೀಮತಿ ವಿದ್ಯಾ ಕಿರಣ್ ಮಾತನಾಡಿ, “ಇಂದು ನಿರ್ಮಿಸುವ ಮಿನಿ ಬ್ರಿಡ್ಜ್ ಮಾದರಿಗಳು ಮುಂದೊಂದು ದಿನ ಬೃಹತ್ ಸೇತುವೆಗಳ ನಿರ್ಮಾಣಕ್ಕೆ ಪ್ರೇರಣೆಯಾಗಬಹುದು. ಪ್ರತಿಯೊಂದು ಸೇತುವೆಯ ನಿರ್ಮಾಣದ ಹಿಂದೆ ಅತ್ಯಾಧುನಿಕ ತಂತ್ರಜ್ಞಾನ, ಇಂಜಿನಿಯರ್‌ಗಳ ಪರಿಶ್ರಮ ಹಾಗೂ ತಂಡದ ಕೆಲಸ ಅಡಗಿರುತ್ತದೆ. ಈ ಸ್ಪರ್ಧೆಯು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಲಿ ಹಾಗೂ ಹೊಸ ಆವಿಷ್ಕಾರಗಳಿಗೆ ಪ್ರೇರಣೆ ನೀಡಲಿ. ವಿದ್ಯಾರ್ಥಿಗಳ ಹೊಸ ಕಲ್ಪನೆಗಳು ಮತ್ತು ಕನಸುಗಳು ಅವರ ಮುಂದಿನ ಜೀವನದಲ್ಲಿ ಯಶಸ್ಸನ್ನು ತಂದುಕೊಡಲಿ,” ಎಂದು ಶುಭ ಹಾರೈಸಿದರು.



ಉಜಿರೆಯ ‘ರೈಡಿಂಗ್ ಜೋಡಿ’ ಎಂದೇ ಪ್ರಸಿದ್ಧರಾದ ಶ್ರೀ ಶ್ಯಾಮ್ ಕಾಮತ್ ಅವರು ಮಾತನಾಡಿ, “ಇಂಜಿನಿಯರ್‌ಗಳು ಶಿಸ್ತು ಮತ್ತು ಸಮರ್ಪಣಾ ಭಾವನೆಯಿಂದ ಕೆಲಸ ಮಾಡಬೇಕು. ರೈಡಿಂಗ್ ಜೋಡಿಯಾಗಿ ನಾವೂ ಜನರ ನಡುವೆ, ವಿಶೇಷವಾಗಿ ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸುವ ಮೂಲಕ ಸೇತುವೆಯಂತೆ ಕಾರ್ಯನಿರ್ವಹಿಸುತ್ತೇವೆ. ಮುಂದಿನ ದಿನಗಳಲ್ಲಿ ನಿರ್ಮಾಣವಾಗುವ ಬೃಹತ್ ಸೇತುವೆಗಳ ನಿರ್ಮಾಣ ಕಾರ್ಯದಲ್ಲಿ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳ ಹೆಸರೂ ಮೂಡಿಬರಲಿ,” ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ಅವರು ಮಾತನಾಡಿ, “ಇಂತಹ ರಚನಾತ್ಮಕ ಚಟುವಟಿಕೆಗಳು ವಿದ್ಯಾರ್ಥಿಗಳ ತಾಂತ್ರಿಕ ಕೌಶಲ್ಯವನ್ನು ವೃದ್ಧಿಸಲು ಸಹಕಾರಿಯಾಗುತ್ತವೆ. ಇಂತಹ ಯೋಜನೆಗಳ ಮೂಲಕ ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವುದು ಹಾಗೂ ನವೀನ ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ,” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ‘ರೈಡಿಂಗ್ ಜೋಡಿ’ ಎಂದೇ ಪ್ರಸಿದ್ಧರಾದ ಶ್ರೀ ಶ್ಯಾಮ್ ಕಾಮತ್ ಮತ್ತು ಶ್ರೀಮತಿ ಶೈನಿ ಕಾಮತ್ ಅವರು ವಿದ್ಯಾರ್ಥಿಗಳು ನಿರ್ಮಿಸಿದ್ದ ವಿಶಿಷ್ಟ ಮಿನಿ ಬ್ರಿಡ್ಜ್ ಸೆಲ್ಫಿ ಕಾರ್ನರ್ ನ್ನು ಉದ್ಘಾಟಿಸಿದರು. ಕಾಲೇಜಿನ ವ್ಯವಸ್ಥಾಪಕರಾದ ಚಂದ್ರನಾಥ್ ಜೈನ್ ಹಾಗೂ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ತೃಪ್ತಿ ಶೆಟ್ಟಿ ಉಪಸ್ಥಿತರಿದ್ದರು.

ಈ ಸ್ಪರ್ಧೆಯು ವಿದ್ಯಾರ್ಥಿಗಳಿಗೆ ವಿವಿಧ ಮಾದರಿಯ ಸೇತುವೆಗಳನ್ನು ವಿನ್ಯಾಸಗೊಳಿಸಲು, ನಿರ್ಮಿಸಲು ಹಾಗೂ ಅವುಗಳ ಸಾಮರ್ಥ್ಯವನ್ನು ಪರೀಕ್ಷಿಸಲು ಉತ್ತಮ ವೇದಿಕೆಯನ್ನು ಒದಗಿಸಿತು. ಇದರ ಮೂಲಕ ವಿದ್ಯಾರ್ಥಿಗಳು ತಮ್ಮ ತಾಂತ್ರಿಕ ಜ್ಞಾನ, ಸೃಜನಶೀಲತೆ ಮತ್ತು ಪ್ರಾಯೋಗಿಕ ಕೌಶಲ್ಯಗಳನ್ನು ಪ್ರದರ್ಶಿಸಲು ಅವಕಾಶ ಪಡೆದರು.

ಸಿವಿಲ್ ಇಂಜಿನಿಯರಿಂಗ್ ವಿಭಾಗದ ಉಪನ್ಯಾಸಕರಾದ ಈಶ್ವರ್ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.

Related posts

ನಾರಾವಿ ಪಂಚಾಯತು ಮೀಸಲು ಜಾಗದಲ್ಲಿ ಅಕ್ರಮವಾಗಿ ಶೆಡ್ ನಿರ್ಮಾಣ: ಕಂದಾಯ ಇಲಾಖೆ, ಪೊಲೀಸರ ಸಹಕಾರದಲ್ಲಿ ತೆರವು

Suddi Udaya

ಮುಂಡಾಜೆ ಕಾಲೇಜಿನಲ್ಲಿ ನಶಾ ಮುಕ್ತ ಭಾರತ ಅಭಿಯಾನದಡಿ ಪ್ರತಿಜ್ಞಾವಿಧಿ ಬೋಧನೆ

Suddi Udaya

ಪೆರಾಲ್ದರಕಟ್ಟೆ ಬದ್ರೀಯಾ ಜುಮಾ ಮಸೀದಿಯಲ್ಲಿ ಈದುಲ್ ಅದಾ ಸಾಮೂಹಿಕ ಪ್ರಾರ್ಥನೆ

Suddi Udaya

ಶಿರ್ಲಾಲು ಮೂಲ್ಯರ ಯಾನೆ ಕುಲಾಲರ ಸಂಘದ ವತಿಯಿಂದ ಉತ್ತಮ ಶಾಸಕ ಪ್ರಶಸ್ತಿ ಪುರಸ್ಕೃತ ಶಾಸಕ ಹರೀಶ್ ಪೂಂಜರಿಗೆ ಅಭಿನಂದನೆ

Suddi Udaya

ವಾಣಿ ಪ.ಪೂ. ಕಾಲೇಜಿನಲ್ಲಿ “ಗೆಳತಿ” ಭರವಸೆಯ ನಾಳೆಗಾಗಿ ಆಪ್ತ ಸಮಾಲೋಚನ ಕಾರ್ಯಕ್ರಮ

Suddi Udaya

ವಿಟಿಯುಗೆ 9ನೇ ರ್‍ಯಾಂಕ್ ಗಳಿಸಿದ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ಹಳೇ ವಿದ್ಯಾರ್ಥಿನಿಗೆ ಸನ್ಮಾನ

Suddi Udaya
error: Content is protected !!