27.5 C
ಪುತ್ತೂರು, ಬೆಳ್ತಂಗಡಿ
October 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಾವೂರು: 28ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಪೂಜೋತ್ಸವ

ನಾವೂರು :ಶ್ರೀ ಶಾರದೋತ್ಸವ ಸಮಿತಿ ನಾವೂರು ಇದರ 28ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಪೂಜೋತ್ಸವವು ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾದ ದಿನೇಶ್ ಭಟ್ ರವರ ಪೌರೋಹಿತ್ಯದಲ್ಲಿ ಅ. 17 ರಂದು ಜರಗಿತು.

ಮಧ್ಯಾಹ್ನ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಅಧ್ಯಕ್ಷ ರೋಹಿತ್ ಆರ್.ಕೆ. ಇಡ್ಯಾಲ ವಹಿಸಿದ್ದರು.


ಧಾರ್ಮಿಕ ಉಪನ್ಯಾಸವನ್ನು ವಾಣಿ ಪದವಿಪೂರ್ವ ಕಾಲೇಜು, ಹಳೆಕೋಟೆ, ಬೆಳ್ತಂಗಡಿ ಇದರ ಗಣಕ ವಿಜ್ಞಾನ ವಿಭಾಗದ ಮುಖ್ಯ ಸ್ಥರಾದ ಸುಧೀರ್ ಕೆ. ಎನ್ ನೀಡಿದರು.


ಮುಖ್ಯ ಅತಿಥಿಗಳಾಗಿ ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅಧ್ಯಕ್ಷರಾದ ಹರೀಶ್ ಸಾಲ್ಯಾನ್ ಮೋರ್ತಾಜೆ, ನಾವೂರು ಆರೋಗ್ಯ ಕ್ಲಿನಿಕ್ ನ ಡಾ। ಪ್ರದೀಪ್ ಎ., ದೇವಸ್ಥಾನದ ನಿಕಟ ಪೂರ್ವ ಅಧ್ಯಕ್ಷ ಎ. ಬಿ. ಉಮೇಶ್ ಅತ್ಯಡ್ಕ ಆಗಮಿಸಿದ್ದರು.

ಧರ್ಣಪ್ಪ ಮೂಲ್ಯ ಸ್ವಾಗತಿಸಿ, ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ಪ್ರದೀಪ್ ಗೌಡ ನಾಗಾಜೆ ಧನ್ಯವಾದವಿತ್ತರು.

ಬೆಳಿಗ್ಗೆ ಗಣಹೋಮ, ಶಾರದಾ ಮೂರ್ತಿ ಪ್ರತಿಷ್ಠೆ, ಭಜನೆ, ಮಧ್ಯಾಹ್ನ ಧಾರ್ಮಿಕ ಸಭೆ, ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ಅಪರಾಹ್ನ ಭಜನಾ ಕಾರ್ಯಕ್ರಮ ಜರುಗಿತು. ಸಂಜೆ ಊರ ಪರವೂರ ವಿವಿಧ, ಭಜನಾ ಮಂಡಳಿಗಳ ಭಾಗವಹಿಸುವಿಕೆಯೊಂದಿಗೆ, ಶಾರದಾ ಮೂರ್ತಿಯ ವೈಭವದ ಶೋಭಾಯಾತ್ರೆ, ಕೈಕಂಬ ಹೊಳೆಯಲ್ಲಿ ಜಲಸ್ಥಂಬನಗೊಳ್ಳಲಿದೆ.

Related posts

ಲಾಯಿಲ ಗ್ರಾಮ ಪಂಚಾಯತ್ ನಿಂದ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಶಿಬರಾಜೆಪಾದೆ: ಶ್ರೀಕೃಷ್ಣ ಜನ್ಮಾಷ್ಠಮಿಯ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬಂಗಾಡಿ ವಲಯ ಮಟ್ಟದ ಪ್ರತಿಭಾ ಕಾರಂಜಿ – ಸ್ಟಾರ್ ಲೈನ್ ಆಂ.ಮಾ. ಶಾಲೆ ರಝಾ ಗಾರ್ಡನ್ ಶಾಲಾ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಕುಕ್ಕೇಡಿ: ಪಟಾಕಿ ಸ್ಫೋಟ ಪ್ರಕರಣ ಸ್ಥಳ ಮತ್ತು ಹಾನಿಗೊಳಗಾದ ಮನೆಗಳಿಗೆ ಬೆಳ್ತಂಗಡಿ ಧರ್ಮಾಧ್ಯಕ್ಷರ ಭೇಟಿ

Suddi Udaya

ವಿಟಿಯುಗೆ 9ನೇ ರ್‍ಯಾಂಕ್ ಗಳಿಸಿದ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ಹಳೇ ವಿದ್ಯಾರ್ಥಿನಿಗೆ ಸನ್ಮಾನ

Suddi Udaya

ಮಂಗಳೂರು ಸಂಸದ ಬ್ರಿಜೇಶ್ ಚೌಟ ರವರ ಮನವಿಯನ್ನು ಪರಿಗಣಿಸಿ ದೆಹಲಿಯಲ್ಲಿ JBF ಪೆಟ್ರೋಕೆಮಿಕಲ್ಸ್‌ ಮತ್ತು GAIL ನ ವಿಲೀನದ ಸಮಸ್ಯೆಗಳ ಕುರಿತು ಚರ್ಚೆ

Suddi Udaya
error: Content is protected !!