27.2 C
ಪುತ್ತೂರು, ಬೆಳ್ತಂಗಡಿ
October 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿಯಲ್ಲಿ 48ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ

ಬೆಳ್ತಂಗಡಿ: ಸಾರ್ವಜನಿಕ ಶ್ರೀ ಶಾರದೋತ್ಸವ ಸಮತಿ ವತಿಯಿಂದ 48ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವವು ಅ.17ರಂದು ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನ (ಪಿನಾಕಿ) ದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.

ಬೆಳಿಗ್ಗೆ ಗಣಹೋಮ, ಶ್ರೀ ಶಾರದಾ ದೇವಿಯ ಪ್ರತಿಷ್ಠೆ, ನಡೆಯಿತು.

ಶ್ರೀ ಶಾರದೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಗುರುವಾಯನಕೆರೆ ಎಕ್ಸೆಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಸುಶೀಲಾ, ಪ್ರಿಯದರ್ಶಿನಿ, ಮುಗುಳಿ ರಸ್ತೆ, ಬೆಳ್ತಂಗಡಿ, ರವಿಕಲಾ ಎನ್. ಸಿಇಒ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಗುರುವಾಯನಕೆರೆ ಇವರು ಭಾಗವಹಿಸಿದ್ದರು.

ಈ ವೇಳೆ ತಹಶೀಲ್ದಾರರು ಎಸ್.ಎನ್ ನರಗುಂದ, ಗೌರವಾಧ್ಯಕ್ಷರಾದ ಮುಗುಳಿ ನಾರಾಯಣ ಭಟ್, ಅಧ್ಯಕ್ಷ ಮುರುಳಿ, ಉಪಾಧ್ಯಕ್ಷ ಸಂಜೀವ ಎನ್, ಸುರೇಂದ್ರ ಕೋಟ್ಯಾನ, ಜಗದೀಶ್ ಶಕ್ತಿ ಮೆಡಿಕಲ್ಸ್, ಪ್ರಧಾನ ಕಾರ್ಯದರ್ಶಿ ನಾರಾಯಣ ಶೆಟ್ಟಿ, ಜೊತೆ ಕಾರ್ಯದರ್ಶಿ ತುಕಾರಾಂ ಸುದ್ದಿ ಉದಯ, ಹರೀಶ್ ಕೆಲ್ಲಗುತ್ತು, ಸಂತೋಷ ಕರ್ಕೇರಾ, ಕೃಷ್ಣಪ್ಪ ಕುಲಾಲ್ ಸಂಜಯನಗರ , ಬಿ. ಎಚ್. ರಾಜು, ಗೌರವಸಲಹೆಗಾರರು ಸಂಜೀವ, ಬಿ. ಎಚ್. ಶ್ರೀಕೇಶ ಕೋಟ್ಯಾನ್,. ಸುಧಾಮಣಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಬಿ ಹೆಜ್. ರಾಜು ನಿರೂಪಿಸಿದರು.

“ಗಾನಸುರಭಿ” ಉಜಿರೆ ಇವರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಗಂಟೆ 1.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಗಂಟೆ 2ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಗಂಟೆ 4 ಕ್ಕೆ ಭಜನಾ ಕಾರ್ಯಕ್ರಮ, ಸಂಜೆ ಗಂಟೆ 6.30ಕ್ಕೆ ಸಂದ್ಯಾಪೂಜೆ, ಶ್ರೀ ದೇವಿಯ ವಿಗ್ರಹ ವಿಸರ್ಜನಾ ಪೂಜೆ ನಡೆಯಲಿದೆ. ಇದರ ಉದ್ಘಾಟನೆಯನ್ನು ಶಶಿಧರ ಶೆಟ್ಟಿ ಬಿ. ನವಶಕ್ತಿ, “ಕಾಶಿಸದನ”, ಉದ್ಯಮಿಗಳು, ಬರೋಡಾ ಇವರು ನೆರವೇರಿಸಲಿದ್ದಾರೆ. ನಂತರ ವೈಭವದ ಶೋಭಾ ಯಾತ್ರೆ ನಡೆಯಲಿದೆ.

Related posts

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ 2025-26 ನೇ ಸಾಲಿನ ದಾಖಲಾತಿ ಆರಂಭ

Suddi Udaya

ಸ್ಪೀಚ್ ಕ್ರಾಪ್ಟ್ ತರಬೇತಿಯಲ್ಲಿ ಚಂದ್ರಹಾಸ ಬಳಂಜರವರಿಗೆ ಪ್ರಶಸ್ತಿ

Suddi Udaya

ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ದ.ಕ. ಉಡುಪಿ ಜಿಲ್ಲೆ ಬೆಳ್ತಂಗಡಿ ವಲಯದ ನೂತನ ಪದಾಧಿಕಾರಿಗಳ ಪದಪ್ರಧಾನ ಕಾರ್ಯಕ್ರಮ

Suddi Udaya

ಡಿ.12: ವಿದ್ಯುತ್ ನಿಲುಗಡೆ

Suddi Udaya

‘ಕನ್ನಡ ಪಯಸ್ವಿನಿ ಶಿಕ್ಷಣ ರತ್ನ ಅಚೀವ್ಮೆಂಟ್ ಅವಾರ್ಡ್’ಗೆ ಶಿಕ್ಷಕಿ ಪವಿತ್ರಾ ದಿನೇಶ್ ಕೊಕ್ಕಡ ಆಯ್ಕೆ

Suddi Udaya

ವಿ. ಹರೀಶ್ ನೆರಿಯ ರವರಿಗೆ ಕನ್ನಡ ಭವನದ “ಕನ್ನಡ ಪಯಸ್ವಿನಿ ಪ್ರಶಸ್ತಿ”ಗೆ ಆಯ್ಕೆ

Suddi Udaya
error: Content is protected !!