27.5 C
ಪುತ್ತೂರು, ಬೆಳ್ತಂಗಡಿ
October 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ವಾಣಿ ಪದವಿಪೂರ್ವ ಕಾಲೇಜಿನ ಎನ್‌.ಎಸ್‌.ಎಸ್‌ವಾರ್ಷಿಕ ವಿಶೇಷ ಶಿಬಿರ ಸಮಾರೋಪ

ಬೆಳ್ತಂಗಡಿ : ವಾಣಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌.ಎಸ್‌.ಎಸ್‌) ಘಟಕದ ವತಿಯಿಂದ ಪೆರ್ಲ-ಬೈಪಾಡಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಅಕ್ಟೋಬರ್ 11ರಿಂದ 17ರವರೆಗೆ ಆಯೋಜಿಸಲಾಗಿದ್ದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಅ. 17ರಂದು ನಡೆಯಿತು. ‘ನಶಾ ಮುಕ್ತ ಅಭಿಯಾನ’ ಎಂಬ ಧ್ಯೇಯದೊಂದಿಗೆ ನಡೆದ ಶಿಬಿರದಲ್ಲಿ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ನಾಯಕತ್ವ ಗುಣ, ಶಿಸ್ತು ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಾಣಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಷ್ಣುಪ್ರಕಾಶ್ ಎಂ. ಅವರು ವಹಿಸಿದ್ದರು. ಮಹಾಬಲ ಗೌಡ ನಾಗಂದೋಡಿ ಸಮಾರೋಪ ಭಾಷಣ ಮಾಡಿದರು. ವಾಣಿ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾದ ನಾರಾಯಣ ಗೌಡ ದೇವಸ್ಯ, ನಿರ್ದೇಶಕರಾದ ಕೃಷ್ಣಪ್ಪ ಗೌಡ ದೇವಸ ಹಾಗೂ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿರ್ದೇಶಕರಾದ ದಿನೇಶ್ ಕೊಯ್ಯುರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಗೌರವ ಉಪಸ್ಥಿತರಾಗಿ ಬಂದಾರು ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ದಿನೇಶ್ ಖಂಡಿಗ, ಪೆರ್ಲ-ಬೈಪಾಡಿ ಎಸ್‌ಕೆಡಿಆರ್‌ಡಿಪಿ ಒಕ್ಕೂಟದ ಅಧ್ಯಕ್ಷರಾದ ಶಶಿಧರ ಗೌಡ ಬಾಲಂಪಾಡಿ, ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಅರ್ಚಕರಾದ ಅನಂತರಾಮ ಶಬರಾಯ, ವಾಸಪ್ಪ ಗೌಡ, ದೇವಸ್ಥಾನದ ಆನುವಂಶಿಕ ಮೊಕ್ತೇಸರರಾದ ಹರೀಶ್ ಕೋಡಿಮಜಲು, ಸರ್ಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಸದಸ್ಯರಾದ ವಸಂತ ನಾಯ್ಕ, ಶ್ರೀ ಸಿದ್ಧಿವಿನಾಯಕ ಯುವಕ ಮಂಡಲದ ಅಧ್ಯಕ್ಷರಾದ ರಾಧಾಕೃಷ್ಣ ಪಾರೊಟ್ಟು, ಬಂದಾರು ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ, ಶಿವಕೃಪಾ ಶಾಮಿಯಾನ ಸರ್ವಿಸಸ್‌ನ ಪ್ರಶಾಂತ್ ನಿರ್ಮುಡ, ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಬಾಲಕೃಷ್ಣ ಕೆ., ಶಿಕ್ಷಕರಾದ ಮಹೇಶ್ ಹಾಗೂ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಮಹಿಳಾ ಸಂಘದ ಕಾರ್ಯದರ್ಶಿಯಾದ ಲೀಲಾವತಿ ಉಪಸ್ಥಿತರಿದ್ದರು.

ಧಾರ್ಮಿಕ ಮುಖಂಡರಾದ ಕಿರಣ್ ಚಂದ್ರ ಪುಷ್ಪಗಿರಿ ಅವರು ಸಮಾರಂಭಕ್ಕೆ ಆಗಮಿಸಿ, ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿ ಶುಭ ಹಾರೈಸಿದರು.

ಶಿಬಿರದ ಏಳು ದಿನಗಳ ಅವಧಿಯಲ್ಲಿ ವ್ಯಸನಮುಕ್ತ ಸಮಾಜದ ನಿರ್ಮಾಣದ ಕುರಿತು ಜಾಗೃತಿ ಮೂಡಿಸುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ನಾಯಕತ್ವ, ಶಿಸ್ತು ಹಾಗೂ ಸಾಮಾಜಿಕ ಬದ್ಧತೆಯನ್ನು ಬೆಳೆಸುವ ಚಟುವಟಿಕೆಗಳನ್ನು ಆಯೋಜಿಸಲಾಯಿತು.

ಶಿಬಿರಾಧಿಕಾರಿ ದಿನೇಶ್ ಗೌಡ ಯು. ಸ್ವಾಗತಿಸಿದರು. ಸಹ ಶಿಬಿರಾಧಿಕಾರಿ ಶ್ರಾವ್ಯ ಶಿಬಿರದ ವರದಿ ಮಂಡಿಸಿದರು. ಉಪನ್ಯಾಸಕ ಬೆಳಿಯಪ್ಪ ಕೆ. ವಂದಿಸಿದರು. ಉಪನ್ಯಾಸಕಿ ಅನುರಾಧ ಕೆ. ರಾವ್ ಕಾರ್ಯಕ್ರಮ ನಿರೂಪಿಸಿದರು.

Related posts

ಬೆಳ್ತಂಗಡಿ: ‘ಶೌರ್ಯ’ ಶ್ರೀ ಧರ್ಮಸ್ಥಳ ತುರ್ತು ಸ್ಪಂದನಾ ತಂಡದ ಸಭೆ

Suddi Udaya

ಜೂ. 24: ಪಟ್ರಮೆ ಹಾಗೂ ಕೊಕ್ಕಡ ಗ್ರಾ.ಪಂ. ವ್ಯಾಪ್ತಿಯಲ್ಲಿ ಜನಸ್ಪಂದನ ಕಾರ್ಯಕ್ರಮ

Suddi Udaya

ಎಸ್,ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಮೂರನೇ ಸ್ಥಾನ ಪಡೆದ ಸುಪ್ರಿಯಾ ಎಸ್ ಇವರನ್ನು ಮೂಡುಕೋಡಿ ಬಿಲ್ಲವ ಸಂಘ ಮತ್ತು ವೇಣೂರು ಯುವವಾಹಿನಿ ಘಟಕದ ವತಿಯಿಂದ ಸನ್ಮಾನ

Suddi Udaya

ವೇಣೂರು: ಪಡ್ಡಂದಡ್ಕ ನೂರುಲ್ ಹುಧಾ ಮಸೀದಿಯಲ್ಲಿ ಸಂಭ್ರಮದ ಈದ್ ಉಲ್ ಫಿತರ್ ಆಚರಣೆ

Suddi Udaya

ಮಾ.1 : ಎಸ್.ಡಿ.ಪಿ.ಐ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಪಕ್ಷ ಸಮಾವೇಶ

Suddi Udaya

ಮದ್ದಡ್ಕ ಶ್ರೀರಾಮ ಭಜನಾ ಮಂದಿರದ ವಾರ್ಷಿಕ ಸಭೆ: ನೂತನ ಪಧಾದಿಕಾರಿಗಳ ಆಯ್ಕೆ

Suddi Udaya
error: Content is protected !!