31 C
ಪುತ್ತೂರು, ಬೆಳ್ತಂಗಡಿ
October 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

‘ಗೌಡೆರೆ ಗೌಜಿ ಗಮ್ಮತ್ತ್ ತುಳು ಸಂಸ್ಕೃತಿ ಪರ್ಬ–2026’ ಪೋಸ್ಟರ್ ಬಿಡುಗಡೆ ನ. 22ರಂದು ಬೆಳ್ತಂಗಡಿಯಲ್ಲಿ ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆ ಹಾಗೂ ಸಾಧಕರಿಗೆ ಸನ್ಮಾನ

ಬೆಳ್ತಂಗಡಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ, ಯುವ ವೇದಿಕೆ ಹಾಗೂ ಮಹಿಳಾ ವೇದಿಕೆಯ ನೇತೃತ್ವದಲ್ಲಿ ನವೆಂಬರ್ 22ರಂದು ನಡೆಯಲಿರುವ ‘ಗೌಡೆರೆ ಗೌಜಿ ಗಮ್ಮತ್ತ್ ತುಳು ಸಂಸ್ಕೃತಿ ಪರ್ಬ–2026’ ಕಾರ್ಯಕ್ರಮದ ಪೋಸ್ಟರ್ ಅನ್ನು ಅ. 18ರಂದು ಸಂಘದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.

ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ (ರಿ.) ಹಳೆಕೋಟೆ, ಬೆಳ್ತಂಗಡಿ, ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ (ನಿ.) ಬೆಳ್ತಂಗಡಿ ಹಾಗೂ ಸ್ಪಂದನಾ ಸೇವಾ ಸಂಸ್ಥೆ, ಬೆಳ್ತಂಗಡಿ ಇವುಗಳ ಸಹಯೋಗದಲ್ಲಿ ಯುವ ವೇದಿಕೆ ಮತ್ತು ಮಹಿಳಾ ವೇದಿಕೆಯ ನೇತೃತ್ವದಲ್ಲಿ ತಾಲೂಕು ಮಟ್ಟದ ಕಾರ್ಯಕ್ರಮ ನಡೆಯಲಿದೆ. ನವೆಂಬರ್ 22ರಂದು ಬೆಳಿಗ್ಗೆ 8 ಗಂಟೆಯಿಂದ ಬೆಳ್ತಂಗಡಿ ಹಳೆಕೋಟೆಯ ಗೌಡರ ಯಾನೆ ಒಕ್ಕಲಿಗರ ಸಮುದಾಯ ಭವನದಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರು, ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿಶೇಷ ಸಾಧನೆಗೈದ ಸಮಾಜ ಬಾಂಧವರಿಗೆ ಸನ್ಮಾನ ನಡೆಯಲಿದೆ.

ವೈವಿಧ್ಯಮಯ ಪಥಸಂಚಲನ ಹಾಗೂ ಸಾಂಸ್ಕೃತಿಕ ಸ್ಪರ್ಧೆ

ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಆಕರ್ಷಕ ವೈವಿಧ್ಯಮಯ ಪಥಸಂಚಲನ ನಡೆಯಲಿದ್ದು, ಪ್ರಥಮ ಬಹುಮಾನವಾಗಿ ₹25,000 ನಗದು ಹಾಗೂ ಶಾಶ್ವತ ಫಲಕ ನೀಡಲಾಗುವುದು.

ತುಳುನಾಡ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರೂ. 50,000, ದ್ವಿತೀಯ ರೂ.30,000 ಹಾಗೂ ತೃತೀಯ ರೂ. 15,000 ನಗದು ಮತ್ತು ಶಾಶ್ವತ ಫಲಕ ನೀಡಲಾಗುವುದು. ಈ ಸ್ಪರ್ಧೆಯಲ್ಲಿ ಮೊದಲು ನೋಂದಾಯಿಸುವ 15 ತಂಡಗಳಿಗೆ ಮಾತ್ರ ಅವಕಾಶವಿರಲಿದೆ.

ಪುರುಷರು ಹಾಗೂ ಮಹಿಳೆಯರಿಗೆ ಕ್ರೀಡಾ ಸ್ಪರ್ಧೆಗಳು

ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಹಗ್ಗಜಗ್ಗಾಟ ಸ್ಪರ್ಧೆಗಳು ನಡೆಯಲಿವೆ. ಪುರುಷರ ಹಗ್ಗಜಗ್ಗಾಟವು 600 ಕೆ.ಜಿ. ತೂಕದ ಮಿತಿಯ ಲೀಗ್ ಮಾದರಿಯಲ್ಲಿ ಹಾಗೂ ಮಹಿಳೆಯರ ಹಗ್ಗಜಗ್ಗಾಟವು ಮುಕ್ತ ಲೀಗ್ ಮಾದರಿಯಲ್ಲಿ ನಡೆಯಲಿದೆ. ಎರಡೂ ವಿಭಾಗಗಳಲ್ಲಿ ಪ್ರಥಮ ಬಹುಮಾನ ರೂ.10,000 ಹಾಗೂ ಶಾಶ್ವತ ಫಲಕ, ದ್ವಿತೀಯ ಬಹುಮಾನ ರೂ. 7,000 ಹಾಗೂ ಶಾಶ್ವತ ಫಲಕ ನೀಡಲಾಗುವುದು. ತೃತೀಯ ಮತ್ತು ಚತುರ್ಥ ಸ್ಥಾನ ಪಡೆದ ತಂಡಗಳಿಗೆ ಶಾಶ್ವತ ಫಲಕ ನೀಡಲಾಗುವುದು.

ಪುರುಷರಿಗೆ ವಾಲಿಬಾಲ್ ಹಾಗೂ ಮಹಿಳೆಯರಿಗೆ ಥ್ರೋಬಾಲ್ ಸ್ಪರ್ಧೆಗಳು ನಡೆಯಲಿವೆ. ಎರಡೂ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ರೂ.10,000 ಹಾಗೂ ಶಾಶ್ವತ ಫಲಕ, ದ್ವಿತೀಯ ಬಹುಮಾನ ರೂ.7,000 ಹಾಗೂ ಶಾಶ್ವತ ಫಲಕ ನೀಡಲಾಗುವುದು. ತೃತೀಯ ಮತ್ತು ಚತುರ್ಥ ಸ್ಥಾನ ಪಡೆದ ತಂಡಗಳಿಗೆ ಶಾಶ್ವತ ಫಲಕ ನೀಡಲಾಗುವುದು.

ಪೋಸ್ಟರ್ ಬಿಡುಗಡೆ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಗೌರವಾಧ್ಯಕ್ಷ ಹೆಚ್. ಪದ್ಮ ಗೌಡ, ಉಪಾಧ್ಯಕ್ಷರಾದ ನಾರಾಯಣ ಗೌಡ ದೇವಸ್ಯ, ಧರ್ನಪ್ಪ ಗೌಡ ಹಾಗೂ ಡಿ.ಎಮ್. ಗೌಡ, ಕಾರ್ಯದರ್ಶಿ ಗಣೇಶ್ ಗೌಡ, ಮಾಜಿ ಅಧ್ಯಕ್ಷ ಸೋಮೇ ಗೌಡ, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ಜೊತೆ ಕಾರ್ಯದರ್ಶಿ ಶ್ರೀನಾಥ್ ಕೆ.ಎಮ್., ಪ್ರತಿಭಾ ಪುರಸ್ಕಾರದ ಸಂಚಾಲಕ ಯುವರಾಜ್ ಅನಾರ್, ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ಗೌಡ ಸವಣಾಲು ಉಪಸ್ಥಿತರಿದ್ದರು.

ನಿರ್ದೇಶಕರಾದ ಗೋಪಾಲಕೃಷ್ಣ ಗುಲ್ಲೋಡಿ, ಬಾಲಕೃಷ್ಣ ಬಿರ್ಮೋಟ್ಟು, ವಿಜಯ್ ಕುಮಾರ್ ನ್ಯಾಯತರ್ಪು, ಉಷಾದೇವಿ, ಹರೀಶ್ ಗೌಡ ಬಂದಾರು, ಮಾಧವ ಗೌಡ, ದಿನೇಶ್ ಗೌಡ ಕೊಯ್ಯುರು, ವಸಂತ ಗೌಡ, ಯುವ ವೇದಿಕೆ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ, ಕಾರ್ಯದರ್ಶಿ ಸುರೇಶ್ ಗೌಡ ಕೌಡಂಗೆ ಹಾಗೂ ಮಹಿಳಾ ವೇದಿಕೆ ಅಧ್ಯಕ್ಷೆ ಗೀತಾ ರಾಮಣ್ಣ ಗೌಡ ಉಪಸ್ಥಿತರಿದ್ದರು.

ಪುಂಜಾಲಕಟ್ಟೆ ಅಕ್ಷಯ ಫುಡ್ಸ್ ಮಾಲಕ ಜಿ. ವಾಸುದೇವ ಗೌಡ, ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಹಾಗೂ ಸಂಯೋಜಕ ಡಾ. ರವಿ ಎಮ್.ಎನ್., ನೆಲ್ಯಾಡಿ ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಚೇತನ್ ಆನೆಗುಂಡಿ, ನವೀನ್ ಬಿ.ಕೆ., ನಿತಿನ್ ಕಲ್ಮಂಜ, ಯಶವಂತ ಪುದುವೆಟ್ಟು, ಪ್ರದೀಪ್ ನಾಗಾಜೆ, ಪ್ರಮೋದ್ ದಿಡುಪೆ, ರಂಜಿತ್ ಕಳೆಂಜ, ತೀಕ್ಷಿತ್ ದಿಡುಪೆ ಹಾಗೂ ಭರತ್ ಪುದುವೆಟ್ಟು ಉಪಸ್ಥಿತರಿದ್ದರು.

2024ರಲ್ಲಿ ನಡೆದ ‘ಕೆಸರ್ದ ಕಂಡೊಡು ಗೌಡೆರೆ ಗೌಜಿ–ಗಮ್ಮತ್ತ್’ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿರುವ ಆಯೋಜಕರು, ಈ ಬಾರಿಯ ಕಾರ್ಯಕ್ರಮಕ್ಕೂ ತನು–ಮನ–ಧನದ ಸಹಕಾರ ನೀಡಿ ಯಶಸ್ವಿಗೊಳಿಸುವಂತೆ ಸಮಾಜ ಬಾಂಧವರನ್ನು ಕೋರಿದ್ದಾರೆ.

Related posts

ಕಾಯರ್ತಡ್ಕ ಸರಕಾರಿ ಪ್ರೌಢ ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಜು.5 ರಿಂದ ಬೆಳ್ತಂಗಡಿ ಆನ್ ಸಿಲ್ಕ್ಸ್ ನಲ್ಲಿ ಆಷಾಢ ಡಿಸ್ಕೌಂಟ್ ಸೇಲ್: ಪ್ರತಿ ಖರೀದಿಗೆ ಶೇ. 50 ರಷ್ಟು ರಿಯಾಯಿತಿ

Suddi Udaya

ಬೆಳ್ತಂಗಡಿ : ದಾಖಲೆಗಳಿಲ್ಲದೆ ಕಬ್ಬಿಣದ ಗುಜರಿ ವಸ್ತು ಸಾಗಾಟ: ಲಾರಿ ವಶಕ್ಕೆ ಪಡೆದು ದಂಡ ವಿಧಿಸಿದ ವಾಣಿಜ್ಯ ತೆರಿಗೆ ಇಲಾಖೆ

Suddi Udaya

ಬಿಜೆಪಿ ಇಂದಬೆಟ್ಟು ಶಕ್ತಿ ಕೇಂದ್ರದ ಬೂತ್ ಸಮಿತಿಗಳ ರಚನೆ

Suddi Udaya

ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಶ್ರೀ ವಿಘ್ನೇಶ್ವರ ಭಜನಾ ಮಂದಿರದಿಂದ ಪಾದಯಾತ್ರೆ

Suddi Udaya

ಬೆಳ್ತಂಗಡಿ ಜೆಸಿಐ ಮಂಜುಶ್ರೀ ಯ ಜೆಸಿ ಸುಭಾಷಿಣಿಯವರಿಗೆ ಪ್ರೇರಣಾ ಪ್ರಶಸ್ತಿ

Suddi Udaya
error: Content is protected !!