31 C
ಪುತ್ತೂರು, ಬೆಳ್ತಂಗಡಿ
October 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆ ಖ್ಯಾತ ವೈದ್ಯ ಡಾ. ವೇಣುಗೋಪಾಲ್ ಶರ್ಮಾ ಅವರ ಚಿಕಿತ್ಸಾ ಕ್ಲಿನಿಕ್ ನೂತನ ಕಟ್ಟಡಕ್ಕೆ ಸ್ಥಳಾಂತರ

ಗುರುವಾಯನಕೆರೆ : ಇಲ್ಲಿನ ಜನಪ್ರಿಯ ವೈದ್ಯರಾದ ಡಾ. ವೇಣುಗೋಪಾಲ್ ಶರ್ಮಾ ಅವರ ಚಿಕಿತ್ಸಾ ಕ್ಲಿನಿಕ್ ಅ. 19 ರಂದು ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು, ಇಂದಿನಿಂದ ಹೊಸ ಕಟ್ಟಡದಲ್ಲಿ ವೈದ್ಯಕೀಯ ಸೇವೆ ಆರಂಭವಾಗಿದೆ.
ನಿನ್ನೆ ಹಳೆಯ ಕಟ್ಟಡದಲ್ಲಿ ಸೇವೆ ಮುಕ್ತಾಯಗೊಂಡಿದ್ದು, ಇಂದಿನಿಂದ ರೋಗಿಗಳಿಗೆ ಹೊಸ ಕಟ್ಟಡದಲ್ಲಿ ಚಿಕಿತ್ಸೆ ಲಭ್ಯವಾಗುತ್ತಿದೆ.

ವೈದ್ಯಕೀಯ ಸೇವೆಯ ಜೊತೆಗೆ ತಮ್ಮ ಆತ್ಮೀಯ ನಡೆ, ಸದಾ ಹಸನ್ಮುಖ ವ್ಯಕ್ತಿತ್ವ ಹಾಗೂ ಹಾಸ್ಯ ಚಟಾಕಿಗಳ ಮೂಲಕವೂ ಡಾ. ವೇಣುಗೋಪಾಲ್ ಶರ್ಮಾ ಅವರು ರೋಗಿಗಳ ಮನಸ್ಸು ಗೆದ್ದಿದ್ದಾರೆ.
ಚಿಕಿತ್ಸೆ ಪಡೆಯಲು ಬರುವ ರೋಗಿಗಳೊಂದಿಗೆ ನಗುಮುಖದಿಂದ ಮಾತನಾಡುತ್ತಾ, ಹಾಸ್ಯಭರಿತ ಮಾತುಗಳಿಂದ ಅವರ ಆತಂಕವನ್ನು ದೂರ ಮಾಡಿ, ಕ್ಲಿನಿಕ್‌ನ ವಾತಾವರಣವನ್ನು ಲವಲವಿಕೆಯಿಂದ ಇಡುವುದು ಅವರ ವಿಶೇಷತೆ.

ವೈದ್ಯರ ಈ ಆತ್ಮೀಯ ಒಡನಾಟ ರೋಗಿಗಳಿಗೆ ಮಾನಸಿಕ ಧೈರ್ಯವನ್ನೂ ನೀಡುತ್ತದೆ. ರೋಗಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಡಾ. ವೇಣುಗೋಪಾಲ್ ಶರ್ಮಾ ಅವರ ಕ್ಲಿನಿಕ್ ಇದೀಗ ಹೊಸ ಕಟ್ಟಡದಲ್ಲಿ ಕಾರ್ಯಾರಂಭ ಮಾಡಿದ್ದು, ರೋಗಿಗಳು ಇನ್ನು ಮುಂದೆ ನೂತನ ಕಟ್ಟಡಕ್ಕೆ ಆಗಮಿಸಿ ವೈದ್ಯಕೀಯ ಸೇವೆ ಪಡೆಯಬಹುದಾಗಿದೆ.

Related posts

ದೀಪಾವಳಿ ಗೋ ಪೂಜೆ ಪ್ರಯುಕ್ತ ಡಾ| ಡಿ. ವೀರೇಂದ್ರ ಹೆಗ್ಗಡೆ ದಂಪತಿಯಿಂದ ಗೋವುಗಳಿಗೆ ಉಪಾಹಾರ

Suddi Udaya

ಸ್ಟಾರ್ ಲೈನ್ ಆಂ.ಮಾ. ಶಾಲೆ ರಝ ಗಾರ್ಡನ್ ಮಂಜೊಟ್ಟಿಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಬಿಸಿಯೂಟ ಸಿಬ್ಬಂದಿಗಳ ಮುಷ್ಕರದ ಹಿನ್ನಲೆ: ವಿದ್ಯಾರ್ಥಿಗಳಿಗೆ ಮನೆಯಿಂದಲೇ ಊಟದ ವ್ಯವಸ್ಥೆ ಕಲ್ಪಿಸಿದ ಸಮಾಜಸೇವಕ ಸಂತೋಷ್ ನಿನ್ನಿಕಲ್ಲು

Suddi Udaya

ಕೊಯ್ಯೂರು ಸರಕಾರಿ ಶಾಲೆಯಲ್ಲಿ ಯಕ್ಷ ನಾಟ್ಯ ತರಬೇತಿ ಉದ್ಘಾಟನೆ

Suddi Udaya

ನಿವೃತ್ತ ಶಿಕ್ಷಕ ಕವಿ ಶಂಕರ್ ಎನ್ ತಾಮನ್ಕರ್ ಮುಂಡಾಜೆ ಯವರಿಂದ ಧನಸಹಾಯ ವಿತರಣೆ

Suddi Udaya

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ: ಶಾಸಕ ಹರೀಶ್ ಪೂಂಜ ಭೇಟಿ

Suddi Udaya
error: Content is protected !!