25.5 C
ಪುತ್ತೂರು, ಬೆಳ್ತಂಗಡಿ
October 20, 2026
ಪ್ರಮುಖ ಸುದ್ದಿಶಾಲಾ ಕಾಲೇಜು

ಚರ್ಮರೋಗ ಸ್ನಾತಕೋತ್ತರ ಪದವಿಯಲ್ಲಿ ಡಾ. ಪ್ರಜ್ಞಾ ಕೆ ಕೆ ಅವರಿಗೆ ರಾಜ್ಯಕ್ಕೆ 5ನೇ ರ‍್ಯಾಂಕ್

ಬೆಳ್ತಂಗಡಿ: ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಚರ್ಮರೋಗ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವ ತಾಲೂಕಿನ ಬೆಳಾಲಿನ ಡಾ. ಪ್ರಜ್ಞಾ ಕೃಷ್ಣಕುಮಾರ್ ಕೇವಳ ಅವರು ರಾಜ್ಯಕ್ಕೆ 5ನೇ ರ‍್ಯಾಂಕ್ ಗಳಿಸಿದ್ದಾರೆ.

ಶ್ರೀ ಕೃಷ್ಣಕುಮಾರ್ ಕೇವಳ ಹಾಗೂ ಶ್ರೀಮತಿ ಭವಾನಿ ದಂಪತಿಯ ಎರಡನೇ ಪುತ್ರಿಯಾದ ಪ್ರಜ್ಞಾ, ಬಾಲ್ಯದಿಂದಲೂ ಓದಿನಲ್ಲಿ ಮುಂಚೂಣಿಯಲ್ಲಿ ಇದ್ದು 2016ರಲ್ಲಿ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯಲ್ಲಿ ಎಂಬಿಬಿಎಸ್ ವ್ಯಾಸಂಗ ಆರಂಭಿಸಿದ ಅವರು, 2022ರಲ್ಲಿ ಏಳು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದರು. ಅದೇ ಸಾಲಿನ ‘ಬೆಸ್ಟ ಙಟ್ ಗೊಯಿಂಗ್ ಸ್ಟೂಡೆಂಟ್’ ಪ್ರಷಸ್ತಿ ಗಳಿಸುರಿತ್ತಾರೆ.

2023ರ ನೀಟ್ ಪಿಜಿ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 634ನೇ ರ‍್ಯಾಂಕ್ ಗಳಿಸಿದ ಪ್ರಜ್ಞಾ, ಬೆಂಗಳೂರಿನ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಚರ್ಮರೋಗ ವಿಷಯದ ಸ್ನಾತಕೋತ್ತರ ಅಧ್ಯಯನಕ್ಕೆ ಪ್ರವೇಶ ಪಡೆದರು. ಇದೀಗ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿ ರಾಜ್ಯಕ್ಕೆ 5ನೇ ರ‍್ಯಾಂಕ್ ಪಡೆಯುವ ಮೂಲಕ ಶೈಕ್ಷಣಿಕ ಸಾಧನೆ ಮುಂದುವರಿಸಿದ್ದಾರೆ.

2024ರಲ್ಲಿ ಬೆಳಾಲಿನ ಪ್ರತಿಷ್ಠಿತ ಮನೆತನದ ಹೆಚ್. ಪದ್ಮ ಗೌಡ ಹಾಗೂ ಕನ್ನಿಕಾ ದಂಪತಿಯ ಪುತ್ರ ಡಾ. ರಜತ್ ಹೆಚ್.ಪಿ. (ಎಂಬಿಬಿಎಸ್, ಎಂಎಸ್) ಅವರನ್ನು ವಿವಾಹವಾದರು. ತಮ್ಮ ಮುಂದಿನ ವೈದ್ಯಕೀಯ ಸೇವೆಯನ್ನು ಉಜಿರೆ–ಬೆಳ್ತಂಗಡಿಯಲ್ಲಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಅವರ ಸಾಧನೆಯನ್ನು ಗೌರವಿಸಿ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅಭಿನಂದಿಸಲಾಯಿತು. ಅವರಿಗೆ ದೇವರು ಆಯುರಾರೋಗ್ಯ ಹಾಗೂ ಸಕಲ ಸೌಭಾಗ್ಯ ಕರುಣಿಸಲಿ ಎಂದು ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಶುಭ ಹಾರೈಸಿದರು.

Related posts

ಎಸ್.ಡಿ.ಎಂ. ಪಿ.ಯು. ವಾಣಿಜ್ಯಶಾಸ್ತ್ರ ವಿದ್ಯಾರ್ಥಿಗಳಿಂದ ಕೈಗಾರಿಕಾ ಪ್ರದೇಶಗಳಿಗೆ ಭೇಟಿ

Suddi Udaya

ಎಕ್ಸೆಲ್ ಟೆಕ್ನೋ ಸ್ಕೂಲ್‌ನಲ್ಲಿ ಸಂಭ್ರಮದ ಕುಟುಂಬ ಕಲೋತ್ಸವ

Suddi Udaya

ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವರಿಗೆ ಶ್ರೀಮತಿ ಸುಕನ್ಯಾ ಮತ್ತು ಡಿ. ಜಯರಾಮ ರಾವ್ ಮತ್ತು ಮಕ್ಕಳು ಸತ್ಯನಪಲ್ಕೆ ಕಲ್ಮಂಜ ಇವರಿಂದ ನೂತನ ಪುಷ್ಪರಥ ಸಮರ್ಪಣೆ ; ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ರಥಬೀದಿಯಿಂದ ಶ್ರೀ ಕ್ಷೇತ್ರ ಪಜಿರಡ್ಕಕ್ಕೆ ಭವ್ಯ ಶೋಭಾಯಾತ್ರೆ,

Suddi Udaya

2017ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2016ಕ್ಕಿಂತ ಮೊದಲು ನೇಮಕಾತಿಯಾದವರಿಗೆ ಪೂರ್ವಾನ್ವಯಗೊಳಿಸಬಾರದು: ವಿ.ಪ. ಸದಸ್ಯ ಪ್ರತಾಪಸಿಂಹ ನಾಯಕ್ ರಿಂದ ಸಚಿವ ಮಧು ಬಂಗಾರಪ್ಪ ರವರಿಗೆ ಮನವಿ

Suddi Udaya

ಸಾರಿಗೆ ಬಸ್‌ನಲ್ಲಿ ಹೆಚ್ಚಿದ ಜನಸಂದಣಿ; ವಿದ್ಯಾರ್ಥಿಗಳ, ಉದ್ಯೋಗಿಗಳ ಪರದಾಟ; ಹೆಚ್ಚುವರಿ ಬಸ್‌ಗೆ ಪ್ರಯಾಣಿಕರ ಆಗ್ರಹ

Suddi Udaya

ತಣ್ಣೀರುಪಂತ: ಕುದ್ರಡ್ಕದಲ್ಲಿ ಮೂವರು ಮಕ್ಕಳಿಗೆ ಹಾವು ಕಡಿತ

Suddi Udaya
error: Content is protected !!