27.4 C
ಪುತ್ತೂರು, ಬೆಳ್ತಂಗಡಿ
October 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಕ್ಯಬೀಡು ಪಂಚಶ್ರೀ ಯಕ್ಷಕಲಾ ಸಂಘದ ಉದ್ಘಾಟನಾ ಸಮಾರಂಭ

ಕಕ್ಯಪದವು: ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರೀ ದೇವಿ ಕ್ಷೇತ್ರದಲ್ಲಿ ಪಂಚಶ್ರೀ ಯಕ್ಷಕಲಾ ಸಂಘ ಕಕ್ಯಬೀಡು ಇದರ ಉದ್ಘಾಟನಾ ಸಮಾರಂಭ ಅ.20 ರಂದು ನೆರವೇರಿತು.
ಪಂಚಶ್ರೀ ಯಕ್ಷಕಲಾ ಸಂಘದ ಗೌರವಾಧ್ಯಕ್ಷ ಕೆ. ರಾಜೇಶ ಆಚಾರ್ಯ ಕಕ್ಯ ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರೀ ದೇವಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ. ಸತ್ಯಶಂಕರ್ ಶೆಟ್ಟಿ ವಹಿಸಿ ಮಾತನಾಡಿ, ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಇಂತಹ ಯಕ್ಷಕಲಾ ಸಂಘಗಳ ಪಾತ್ರ ಪ್ರಮುಖವಾದದ್ದು ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಕ್ಯಪದವು ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಕಕ್ಯಪದವು ಉಳಿ ಯುವಕ ಮಂಡಲ ಅಧ್ಯಕ್ಷ ವಸಂತ ರಾಮನಗರ, ಐವರ್ ಫ್ರೆಂಡ್ಸ್ ಕಕ್ಯಬೀಡು ಅಧ್ಯಕ್ಷ ದುರ್ಗಾಪ್ರಸಾದ್ ಶೆಟ್ಟಿ ಅಂತರ, ಸತ್ಯಸಾಯಿ ಸೇವಾ ಸಮಿತಿ ಕಕ್ಯಬೀಡು ಅಧ್ಯಕ್ಷ ಯೋಗೀಶ್ ಕೊಡಂಗೆ ಹಾಗೂ ಮಹಿಳಾ ಮಂಡಲ ಕಕ್ಯಪದವು ಅಧ್ಯಕ್ಷ ಚಂದ್ರಕಲಾ ಯತೀಂದ್ರ ಚೌಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಕಕ್ಯಬೀಡು ಪಂಚಶ್ರೀ ಯಕ್ಷಕಲಾ ಸಂಘದ ಅಧ್ಯಕ್ಷ ಸಂಜೀವ ಗೌಡ ಅಗ್ಪಲ, ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರೀ ದೇವಿ ಕ್ಷೇತ್ರದ ದೇವಳ ಕಚೇರಿಯ ವ್ಯವಸ್ಥಾಪಕ ವೀರೇಂದ್ರ ಕುಮಾರ್ ಜೈನ್ ಉಪಸ್ಥಿತರಿದ್ದರು. ಬಳಿಕ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ “ಸರ್ವಮಂಗಳ ಮಾಂಗಲ್ಯೆ” ಎಂಬ ತುಳು ಯಕ್ಷಗಾನ ಪ್ರದರ್ಶನಗೊಂಡಿತು. ಕಾರ್ಯಕ್ರಮದಲ್ಲಿ ಯಕ್ಷಕಲಾಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಗುರುಪ್ರಕಾಶ್ ಕೊರಡಿಂಗೇರಿ ಸ್ವಾಗತಿಸಿ, ವೃಷಭರಾಜ ಕೊಟ್ಟಾರಿ ಹೇರೆತ್ಯಾರು ಪ್ರಸ್ತಾವಿಸಿದರು. ಪಾರ್ಶ್ವನಾಥ ಜೈನ್ ಕಕ್ಯಪದವು ಕಾರ್ಯಕ್ರಮವನ್ನು ನಿರೂಪಿಸಿದರು. ಪಂಚಶ್ರೀ ಯಕ್ಷಕಲಾ ಸಂಘದ ಜೊತೆ ಕಾರ್ಯದರ್ಶಿ ಆಶೋಕ ನಾಯಕ್ ಗಂಪದಡ್ಡ, ಕೋಶಾಧಿಕಾರಿ ಮಧುಸೂಧನ ರೈ ಮಜ್ಜಿಗುಡ್ಡೆ, ಸಂಘದ ಪ್ರಮುಖ ಸಂಘಟಕರಾದ ಸೋಮಶೇಖರ್ ಕಕ್ಯ ಸಹಕರಿಸಿದರು.

Related posts

ಅಮ್ಮಾಜಿ ಕೋಟ್ಯಾನ್, ಎನ್. ಪ್ರಭಾಕರ್ ನಡೆಸುತ್ತಿರುವ ಧರಣಿ ಸತ್ಯಾಗ್ರಹದ ಆರೋಪಗಳು ಸತ್ಯಕ್ಕೆ ದೂರವಾದವು : ಸುಲ್ಕೇರಿಮೊಗ್ರು ಪ್ರಾ.ಕೃ.ಪ. ಸ.ಸಂಘದ ಅಧ್ಯಕ್ಷ ಸುಧೀರ್ ಆರ್. ಸುವರ್ಣರಿಂದ ಸ್ಪಷ್ಟನೆ

Suddi Udaya

ನಿರಂತರ ನೆಟ್‌ವರ್ಕ್ ಸಮಸ್ಯೆಯಿಂದ ಪರದಾಡುತ್ತಿರುವ ಗ್ರಾಮಸ್ಥರು, ಏರ್‌ಟೆಲ್ ವಿರುದ್ಧ ತೆಂಕಕಾರಂದೂರು ಗ್ರಾಮಸ್ಥರ ಪ್ರತಿಭಟನೆ

Suddi Udaya

ಬೆಳ್ತಂಗಡಿ ಯಲ್ಲಿ ಡಾ| ರಂಜನ್ ಕುಮಾರ್ ಅವರ ಅನುಗ್ರಹ ಕ್ಲಿನಿಕ್ ಶುಭಾರಂಭ     

Suddi Udaya

ದಕ್ಷಿಣ ಕನ್ನಡ: ಬೆಳ್ತಂಗಡಿ ಸೇರಿದಂತೆ 5 ತಾಲೂಕುಗಳಲ್ಲಿ ಮೂರು ದಿನ ನಿಷೇಧಾಜ್ಞೆ ಜಾರಿ

Suddi Udaya

ಪೋಕ್ಸೋ ಪ್ರಕರಣದಲ್ಲಿ ಆರೋಪಿ ಅಬ್ದುಲ್ ಲತೀಫ್ ಗೆ ಶಿಕ್ಷೆ ಪ್ರಕಟ

Suddi Udaya

ಕೊಯ್ಯೂರು: ಶ್ರೀ ಕೃಷ್ಣ ಜನ್ಮಷ್ಟಮಿ ಸಮಿತಿ ಹಾಗೂ ಶ್ರೀ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!