30.8 C
ಪುತ್ತೂರು, ಬೆಳ್ತಂಗಡಿ
October 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್‌ಡಿಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ತಜ್ಞರ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ

ಉಜಿರೆ : ರಸಾಯನಶಾಸ್ತ್ರದಿಂದ ಅದ್ಭುತಗಳನ್ನು ಸಾಧಿಸಲು ಸಾಧ್ಯ. ಆಸಕ್ತಿ ಮತ್ತು ಕುತೂಹಲವಿದ್ದರೆ ರಸಾಯನಶಾಸ್ತ್ರದ ಜ್ಞಾನವನ್ನು ವಿವಿಧ ಕ್ಷೇತ್ರಗಳಲ್ಲಿ ಅನ್ವಯಿಸಿ ಮಹತ್ವದ ಸಾಧನೆಗಳನ್ನು ಮಾಡಬಹುದು. ವಿದ್ಯಾರ್ಥಿಗಳ ಭವಿಷ್ಯ ಅವರ ಕೈಯಲ್ಲಿಯೇ ಇದೆ. ಗುರಿಯನ್ನು ಸ್ಪಷ್ಟವಾಗಿ ನಿರ್ಧರಿಸಿ, ಅದನ್ನು ತಲುಪುವ ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಂಡರೆ ಯಶಸ್ಸಿನ ಹಾದಿಯನ್ನು ಸುಲಭವಾಗಿ ತಲುಪಬಹುದು ಎಂದು ಅಮೆರಿಕದ ಎಸ್‌ಎಬಿಐಸಿ (SABIC) ಸಂಸ್ಥೆಯ ಗ್ಲೋಬಲ್ ಟೆಕ್ನಾಲಜಿ ಲೀಡರ್ ಡಾ. ಎ. ಕೇಶವರಾಜ್ ಅಭಿಪ್ರಾಯ ಪಟ್ಟರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ), ಸ್ನಾತಕೋತ್ತರ ಅಧ್ಯಯನ ಕೇಂದ್ರದ ರಸಾಯನಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಲಾದ ತಜ್ಞರ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ರಸಾಯನಶಾಸ್ತ್ರದ ಬೆಳವಣಿಗೆಗಳು ಸಮಾಜ ಮತ್ತು ಮಾನವಕುಲದ ಒಳಿತಿಗೆ ಕೊಡುಗೆ ನೀಡಬೇಕು. ವೈಜ್ಞಾನಿಕ ಜ್ಞಾನವನ್ನು ಕೇವಲ ವೈಯಕ್ತಿಕ ಸಾಧನೆಗೆ ಸೀಮಿತಗೊಳಿಸದೆ, ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬಳಸಿಕೊಳ್ಳಬೇಕು. ಕಲಿಕೆ ನಿರಂತರ ಪ್ರಕ್ರಿಯೆಯಾಗಿದ್ದು, ಪ್ರತಿಯೊಬ್ಬರೂ ಹೊಸ ಜ್ಞಾನವನ್ನು ಅರಿತುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಕುತೂಹಲವೇ ಬೆಳವಣಿಗೆಗೆ ಇಂಧನವಾಗಿದ್ದು, ಅದು ಹೊಸ ಆಲೋಚನೆಗಳು ಮತ್ತು ಸಂಶೋಧನೆಗಳಿಗೆ ಪ್ರೇರಣೆ ನೀಡುವ ಪ್ರಮುಖ ಶಕ್ತಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳು ಧೈರ್ಯ, ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಯಾವುದೂ ಅಸಾಧ್ಯವಲ್ಲ ಎಂಬ ನಂಬಿಕೆಯೊಂದಿಗೆ ಪ್ರಯತ್ನಿಸಬೇಕು. ಸಾಧನೆಗೆ ಆಕಾಶವೇ ಮಿತಿ ಎಂಬಂತೆ ದೊಡ್ಡ ಕನಸುಗಳನ್ನು ಕಾಣುವುದರ ಜೊತೆಗೆ, ಸ್ಪಷ್ಟ ಗುರಿ ಮತ್ತು ಸೂಕ್ತ ಯೋಜನೆಯೊಂದಿಗೆ ಮುನ್ನಡೆಯಬೇಕು. ನಿರಂತರ ಕಲಿಕೆ, ಕುತೂಹಲ, ಆತ್ಮವಿಶ್ವಾಸ ಹಾಗೂ ಗುರಿಯೆಡೆಗಿನ ಬದ್ಧತೆ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಪ್ರಮುಖ ಅಂಶಗಳಾಗಿವೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರು ಹಾಗೂ ಎಸ್‌ಡಿಎಂ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ರಸಾಯನಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥರಾದ ಪ್ರೊ. ಬಿ. ಶಿವರಾಮ ಹೊಳ್ಳ ಅವರು ರಸಾಯನಶಾಸ್ತ್ರದ ಮಹತ್ವ ಮತ್ತು ಅದರ ಶೈಕ್ಷಣಿಕ ಹಾಗೂ ಪ್ರಾಯೋಗಿಕ ಅನ್ವಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಕಾರ್ಯಕ್ರಮದ ವೇದಿಕೆಯಲ್ಲಿ ಪ್ರೊ. ಬಿ. ಶಿವರಾಮ ಹೊಳ್ಳ, ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ., ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಹಾಗೂ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸೌಮ್ಯ ಬಿ.ಪಿ. ಮತ್ತು ಕಾನ್‌ಕೆಮ್ (CONCHEM) ವಿಭಾಗೀಯ ಸಂಘದ ಸಂಯೋಜಕ ಡಾ. ರಾಜೇಶ್ ಎನ್. ಹೆಗ್ಡೆ ಉಪಸ್ಥಿತರಿದ್ದರು. ಕಾಲೇಜಿನ ಉಪಪ್ರಾಂಶುಪಾಲೆ ನಂದಕುಮಾರಿ ಕೆ.ಪಿ., ಶಶಿಪ್ರಭಾ ಹಾಗೂ ಡಾ. ನೆಫಿಸತ್ ಸೇರಿದಂತೆ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಡಾ. ಎ. ಕೇಶವರಾಜ್ ಅವರು ಎಸ್‌ಡಿಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಗ್ರಂಥಾಲಯಕ್ಕೆ ಪುಸ್ತಕವನ್ನು ಕೊಡುಗೆಯಾಗಿ ನೀಡಿ, ಅದನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ಅವರಿಗೆ ಹಸ್ತಾಂತರಿಸಿದರು. ಅತಿಥಿಗಳಿಗೆ ಕಾಲೇಜಿನ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಸೇರಿದಂತೆ ಇತರೆ ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ವೈದೇಹಿ ಮತ್ತು ತಂಡದವರು ನಿರೂಪಿಸಿ, ವಂದಿಸಿದರು.

Related posts

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಉಚಿತ ವೀಲ್ ಚೇರ್ ವಿತರಣೆ

Suddi Udaya

ಮದ್ದಡ್ಕ ಪೇಟೆಯಲ್ಲಿ 2 ತಿಂಗಳಿಂದ ಉರಿಯುತ್ತಿಲ್ಲ ದಾರಿ ದೀಪ: ದುರಸ್ತಿಗೊಳಿಸುವಂತೆ ಸ್ಥಳೀಯರ ಒತ್ತಾಯ

Suddi Udaya

ಪುದುವೆಟ್ಟು: ಯುವಕ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಲೋನ್ ಆಪ್ ನಿಂದ ಸಾಲ ಪಡೆದುಕೊಂಡ ವದಂತಿ: ಕಂಪೆನಿಯ ಬೆದರಿಕೆಗೆ ಹೆದರಿ ಆತ್ಮಹತ್ಯೆ ಶಂಕೆ

Suddi Udaya

ಮುಂಡೂರು ಶ್ರೀ ನಾಗಕಲ್ಲುರ್ಟಿ ದೈವಸ್ಥಾನದಲ್ಲಿ 10ನೇ ವರ್ಷದ ಸಂಭ್ರಮದ ಗಣೇಶೋತ್ಸವ

Suddi Udaya

ಎಸ್.ಐ.ಟಿ ಕಚೇರಿಗೆ ಆಗಮಿಸಿದ ಪ್ರಣವ್ ಮೊಹಂತಿ

Suddi Udaya

ಜೆಸಿಐ ಭಾರತದ ವಲಯ 15ರ ರಾಷ್ಟ್ರೀಯ ಕಾರ್ಯಕ್ರಮ ವಿಭಾಗದ ವಲಯ ನಿರ್ದೇಶಕರಾಗಿ ಜೇಸಿ ಹೆಚ್.ಜಿ.ಎಫ್ ಅಶೋಕ್ ಗುಂಡಿಯಲ್ಕೆ ಆಯ್ಕೆ

Suddi Udaya
error: Content is protected !!