ನಡ: ಚಂದ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಹುಲಿಕುಣಿತ ಕಲಾಸೇವೆ ಸಂಪನ್ನಗೊಂಡಿತು. ಹೇಮಂತ್ ಕುಮಾರ್ ಕೆದ್ದೇಲು ಇವರ ನೇತೃತ್ವದಲ್ಲಿ ಶಿವದುರ್ಗಾ ಟೈಗರ್ಸ್ ಹುಲಿಕುಣಿತ ಕಲಾಸೇವೆ ನಡೆಸಿಕೊಟ್ಟರು.
ಕಳೆದ ಆರು ವರ್ಷಗಳಿಂದ ಈ ಸೇವೆನ್ನು ಮಾಡುತ್ತಿದ್ದು, ಈ ಬಾರಿ 65 ಮಂದಿ ಕಲಾಸೇವೆಯಲ್ಲಿ ಪಾಲ್ಗೊಂಡಿದ್ದು, 30ಕ್ಕೂ ಹೆಚ್ಚು ಮಕ್ಕಳಿದ್ದರು.
ಹರಕೆ ಹಾಗೂ ಭಕ್ತಿ, ಶ್ರದ್ಧೆಯಿಂದ ಈ ಸೇವೆಯನ್ನು ಮಾಡುತ್ತಿದ್ದು, ದೇವಸ್ಥಾನದ ಆನುವಂಶಿಕ ಮೊಕ್ತೇಸರ ಧನಂಜಯ ಅಜ್ರಿ ನಡಗುತ್ತು, ಬೆಳ್ತಂಗಡಿ ಸುವರ್ಣ ಸಂಸ್ಕೃತಿ ಪ್ರತಿಷ್ಠಾನದ ಸಂಪತ್ ಕುಮಾರ್ ಸುವರ್ಣ ಹುಲಿಕುಣಿತ ಕಲಾಸೇವೆಗೆ ಚಾಲನೆ ನೀಡಿದರು. ದೇವಳದ ಅರ್ಚಕ ಗಣೇಶ್ ಶರ್ಮಾ, ಚಿತ್ತರಂಜನ್ ಲಾಯಿಲಗುತ್ತು, ಅಲೋಕ್ ಜೈನ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.












