ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಯ ಸಂಬಂಧ ಎಸ್ಐಟಿ ಅಧಿಕಾರಿಗಳಿಂದ ಬೆಳ್ತಂಗಡಿ ನ್ಯಾಯಾಲಯದಲ್ಲಿ ಸೌಜನ್ಯ ತಾಯಿ ಕುಸುಮಾವತಿಯವರ ರಕ್ತದ ಮಾದರಿ ಸಂಗ್ರಹಿಸಲಾಗಿದೆ.
ಬೆಳ್ತಂಗಡಿ ಜೆ.ಎಮ್.ಎಫ್.ಸಿ ನ್ಯಾಯಾಲಯದಲ್ಲಿ ಎಸ್ಐಟಿ ತನಿಖಾಧಿಕಾರಿ ಲೋಕೇಶ್ ಜಗಲಾಸರ್ ಅವರ ನೇತೃತ್ವದಲ್ಲಿ ಅ.23 ರಂದು ಸಂಜೆ 4:30 ರಿಂದ 6 ಗಂಟೆಯವರೆಗೆ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯ ವೈದ್ಯರ ತಂಡದಿಂದ ಕುಸುಮಾವತಿಯವರ ರಕ್ತದ ಮಾದರಿ(ಡಿಎನ್ಎ) ಸಂಗ್ರಹಿಸಿದ್ದಾರೆ.
ನ್ಯಾಯಾಲಯದ ಬಾಗಿಲು ಮುಚ್ಚಿ ವಿಡಿಯೋ ಚಿತ್ರಿಕರಣದ ಮೂಲಕ ವೈದ್ಯರ ತಂಡ ವಿವಿಧ ಕಿಟ್ ನಲ್ಲಿ ರಕ್ತದ ಮಾದರಿ ಸಂಗ್ರಹಿಸಿದ್ದಾರೆ. ರಕ್ತದ ಮಾದರಿಯನ್ನು ಸಿಲ್ ಮಾಡಿ ಎಸ್ಐಟಿ ಗೆ ನೀಡಿದ್ದು ಇನ್ನೂ ಎಫ್ಎಸ್ಎಲ್ ವಿಭಾಗಕ್ಕೆ ಕಳುಹಿಸಿ ವರದಿ ಎಸ್ಐಟಿ ಅಧಿಕಾರಿಗಳು ಪಡೆಯಲಿದ್ದಾರೆ.













