29.4 C
ಪುತ್ತೂರು, ಬೆಳ್ತಂಗಡಿ
October 25, 2026
ಆಯ್ಕೆ

ಜನಪದ ಗೀತಗಾಯನದಲ್ಲಿ ವಾಣಿ ಕಾಲೇಜಿನ ವಿಜಯಯಾತ್ರೆ

ಬೆಳ್ತಂಗಡಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಪಂಜ ಸ್ಥಳೀಯ ಸಂಸ್ಥೆ ಹಾಗೂ ಕುಮಾರಸ್ವಾಮಿ ವಿದ್ಯಾಲಯ, ಸುಬ್ರಹ್ಮಣ್ಯ ಇವರ ಸಹಭಾಗಿತ್ವದಲ್ಲಿ ಕುಮಾರಸ್ವಾಮಿ ವಿದ್ಯಾಲಯದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಜನಪದ ಗೀತಗಾಯನ ಸ್ಪರ್ಧೆಯಲ್ಲಿ ಬೆಳ್ತಂಗಡಿಯ ವಾಣಿ ಪದವಿ ಪೂರ್ವ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ತಂಡಗಳು ಪ್ರಥಮ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿವೆ.


ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಯನ್ನು ಪ್ರತಿನಿಧಿಸಿದ ವಾಣಿ ಕಾಲೇಜಿನ ರೇಂಜರ್ಸ್ ವಿಭಾಗ ಹಾಗೂ ರೋವರ್ಸ್ ವಿಭಾಗ ಎರಡೂ ಪ್ರಥಮ ಸ್ಥಾನ ಗಳಿಸಿವೆ. ಈ ಮೂಲಕ ಎರಡೂ ತಂಡಗಳು ಸತತ ನಾಲ್ಕನೇ ಬಾರಿಗೆ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿವೆ.

ವಿದ್ಯಾರ್ಥಿಗಳ ಈ ಸಾಧನೆ ಕಾಲೇಜಿನ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿನ ಸಾಧನೆಗೆ ಮತ್ತೊಂದು ಗರಿಮೆಯನ್ನು ತಂದಿದೆ.

ವಿದ್ಯಾರ್ಥಿಗಳ ಪರಿಶ್ರಮ, ತಂಡದ ಸಮನ್ವಯ ಮತ್ತು ತರಬೇತಿಯ ಫಲವಾಗಿ ಈ ಯಶಸ್ಸು ದೊರೆತಿದೆ.

Related posts

ಅಶಕ್ತರ ಪಾಲಿನ ಆಶಾಕಿರಣ ದೀಪಕ್ ಜಿ. ಮಂಗಳೂರು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿಗೆ ಆಯ್ಕೆ

Suddi Udaya

ತ್ರೋಬಾಲ್ ಪಂದ್ಯಾಟದಲ್ಲಿ ವಾಣಿ ಪದವಿಪೂರ್ವ ಕಾಲೇಜಿನ ಬಾಲಕಿಯರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ರಾಷ್ಟ್ರೀಯ ಯೋಗಾಸನ ಕ್ರೀಡಾ ಒಕ್ಕೂಟದ ಉಪಾಧ್ಯಕ್ಷರಾಗಿ ಡಾ. ಐ. ಶಶಿಕಾಂತ ಜೈನ್

Suddi Udaya

ಕೃಷ್ಣ ಭಜನಾ ಮಂಡಳಿ (ರಿ) ಆದೂರು ಪೆರಾಲ್ ಕೊಯ್ಯೂರು ಇದರ ಅಧ್ಯಕ್ಷರಾಗಿ ರೋಹಿತಾಶ್ವ

Suddi Udaya

ಮಡಂತ್ಯಾರು ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಜಯ ಕೆ., ಕಾರ್ಯದರ್ಶಿಯಾಗಿ ಜಯರಾಮ್ ಆಚಾರ್ಯ

Suddi Udaya

ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರಾಗಿ ರಾಜೇಶ್ವರಿ, ಉಪಾಧ್ಯಕ್ಷರಾಗಿ ಚಂದ್ರಾವತಿ ಅವಿರೋಧ ಆಯ್ಕೆ

Suddi Udaya
error: Content is protected !!