ಕೊಕ್ಕಡ: ಜೆಸಿಐ ಕೊಕ್ಕಡ ಕಪಿಲಾದ 2027ನೇ ಸಾಲಿನ ಅಧ್ಯಕ್ಷರಾಗಿ ಜೆಸಿ ಅಕ್ಷತ್ ರೈ ಹಾಗೂ ಕಾರ್ಯದರ್ಶಿಯಾಗಿ ಜೆಸಿ ಪುಜ್ವಲ್ ಲೋಬೊ ಆಯ್ಕೆಯಾಗಿದ್ದಾರೆ.
ಸಂಘಟನೆಯ ಚುನಾವಣಾ ನೀತಿ-ನಿಯಮಗಳನ್ವಯ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಗಳಾಗಿ ಘಟಕದ ನಿಕಟಪೂರ್ವಾಧ್ಯಕ್ಷೆ ಎಚ್‌ಜಿಎಫ್ ಡಾ. ಶೋಭಾ ಪಿ.ಜೆ., ಪೂರ್ವಾಧ್ಯಕ್ಷರಾದ ಜೆಎಫ್‌ಎಂ ಶ್ರೀಧರ್ ರಾವ್, ಜೆಸಿಐ ಸೆನೆಟರ್ ಜಿತೇಶ್ ಪಿರೇರಾ ಹಾಗೂ ಜೆಸಿ ಸಂತೋಷ್ ಜೈನ್ ಕಾರ್ಯನಿರ್ವಹಿಸಿದರು.
ಈ ಸಂದರ್ಭದಲ್ಲಿ ಘಟಕದ 2026ನೇ ಸಾಲಿನ ಅಧ್ಯಕ್ಷ ಜೆಸಿ ರಿತೇಶ್ ಸ್ಟೈಲ್ಲಾ, ಕಾರ್ಯದರ್ಶಿ ಜೆಎಫ್‌ಎಂ ಜೋಯಲ್ ಪಿರೇರಾ, ಮಾರ್ಗದರ್ಶಕ ಎಚ್‌ಜಿಎಫ್ ಜೋಸೆಫ್ ಪಿರೇರಾ, ಜೆಸಿ ಯೋಗೀಶ್ ಎಸ್.ಪಿ., ಜೆಸಿ ಧನುಷ್ ಹಾಗೂ ಘಟಕದ ಇತರ ಸದಸ್ಯರು ಉಪಸ್ಥಿತರಿದ್ದರು.













