ಉಜಿರೆ: ಇಲ್ಲಿನ ಶಾರದಾ ಮಂಟಪದಲ್ಲಿ ಡಿ. 17ರಂದು ನಡೆಯಲಿರುವ “ಗೋಮಾತೆಯ ಗೌರವದ ಆಹ್ವಾನದ ಅಭಿಯಾನ” ಕಾರ್ಯಕ್ರಮದ ಪೂರ್ವಭಾವಿ ಸಭೆಯು ಇತ್ತೀಚೆಗೆ ಯಶಸ್ವಿಯಾಗಿ ಜರುಗಿತು. ಗೋಮಾತೆಯ ಸಂರಕ್ಷಣೆ ಮತ್ತು ಮಹತ್ವದ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಭೆಯನ್ನು ಆಯೋಜಿಸಲಾಗಿತ್ತು.

ಸಭೆಯಲ್ಲಿ ಪ್ರಾಂತ ಗೋ ಸೇವಾ ಸಂಯೋಜಕ ಪ್ರವೀಣ್ ಸರಲಾಯ ಅವರು ದೇಶವ್ಯಾಪಿ ನಡೆಯುತ್ತಿರುವ ಅಭಿಯಾನದ ಬಗ್ಗೆ ಹಾಗೂ ದ.ಕ. ಜಿಲ್ಲಾ ಸಹ ಪ್ರಭಾರಿ ಅಶೋಕ್ ಇಳಂತಿಲ ಅವರು ಸಭೆಯ ಉದ್ದೇಶದ ಕುರಿತು ಮಾಹಿತಿ ನೀಡಿದರು. ಅಭಿಯಾನದ ಮೂರನೇ ಹಂತದ ‘ಗೋ ಗೌರವ ಆಹ್ವಾನ’ ಸಹಿ ಸಂಗ್ರಹದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಯಿತು.
ಕಾರ್ಯಕ್ರಮದ ಯಶಸ್ಸಿಗಾಗಿ ನೂತನ ತಾಲ್ಲೂಕು ಸಮಿತಿಯನ್ನು ರಚಿಸಲಾಗಿದ್ದು, ಪ್ರಭಾರಿಯಾಗಿ ಕಿರಣ್ ಚಂದ್ರ ಪುಷ್ಪಗಿರಿ (ಸಾಮಾಜಿಕ ಮುಖಂಡರು) , ಸಂಯೋಜಕರಾಗಿ ಕೇಶವ ಬಂಗೇರ (ವಿದ್ಯಾರ್ಥಿ ಪರಿಷತ್ ರಾಜ್ಯ ಪ್ರಮುಖ್), ಸಹ ಪ್ರಭಾರಿ ದಿನೇಶ್ ಚಾರ್ಮಾಡಿ (ವಿಶ್ವ ಹಿಂದೂ ಪರಿಷತ್ ಪ್ರಮುಖ್), ಸಹ ಸಂಯೋಜಕರು ದೀಕ್ಷಿತ್ ಹೇಡ್ಯಾ ಮತ್ತು ರಮೇಶ್ ಧರ್ಮಸ್ಥಳ,
ಸಂತ ಪ್ರಭಾರಿ ಭಾಸ್ಕರ್ ಧರ್ಮಸ್ಥಳ (ವಿಶ್ವ ಹಿಂದೂ ಪರಿಷತ್), ಸಹಿ ಸಂಗ್ರಹ ಪ್ರಭಾರಿ ಪ್ರಮೋದ್ ದಿಡುಪೆ (ಭಾ.ಜ.ಪ ಯುವ ಮೋರ್ಚಾ), ಗ್ರಾಮ ಸಮಿತಿ ಪ್ರಭಾರಿ: ಗೌರವ್ ಶೆಟ್ಟಿ (ವಿಶ್ವ ಹಿಂದೂ ಪರಿಷತ್), ಸಾಮಾಜಿಕ ಜಾಲತಾಣ ಮಾನ್ವಿತ್, ಜಿತೇಶ್
ವ್ಯವಸ್ಥೆ ಪ್ರಭಾರಿ ಬಾಲಚಂದ್ರ ಆಯ್ಕೆಯಾದರು.













