25.2 C
ಪುತ್ತೂರು, ಬೆಳ್ತಂಗಡಿ
October 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನ.1 ನಾವೂರಿನಲ್ಲಿ ಬೃಹತ್ ರಕ್ತದಾನ ಶಿಬಿರ ; ಪೂರ್ವ ತಯಾರಿ ಸಭೆ

ನಾವೂರು: ಸರ್ವೋದಯ ಟ್ರಸ್ಟ್ ನಾವೂರು, ಆಯುಷ್ ಫೆಡರೇಶನ್ ರೇಷನ್ ಆಫ್ ಇಂಡಿಯಾ ದ. ಕ.,ರೋಟರಿ ಕ್ಲಬ್ ಬೆಳ್ತಂಗಡಿ ಪ್ರಸನ್ನ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಲಾಯಿಲ ಬೆಳ್ತಂಗಡಿ, ಶ್ರೀ ಬಾಹುಬಲಿ ಸೌಹಾರ್ದ ಪತ್ತಿನ ಸಹಕಾರಿ ಸಂಘ ಕಾರ್ಕಳ, ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘ ಬಂಗಾಡಿ ಇದರ ಸಹಭಾಗಿತ್ವದಲ್ಲಿ ರಕ್ತ ನಿಧಿ ಕೇಂದ್ರ ಕೆಎಂಸಿ ಆಸ್ಪತ್ರೆ ಮಂಗಳೂರು ಇವರ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದಂದು (ನ. 1)ಬೆಳಗ್ಗೆ ಬೃಹತ್ ರಕ್ತದಾನ ಶಿಬಿರವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾವೂರಿನಲ್ಲಿ ಜರುಗಲಿದ್ದು, ಈ ರಕ್ತದಾನ ಶಿಬಿರದ ಪ್ರಯುಕ್ತ ಪೂರ್ವ ತಯಾರಿ ಸಭೆಯು ಅ. 25 ರಂದು ಸಂಜೆ ನಾವೂರು ಸ.ಹಿ. ಪ್ರಾ ಶಾಲಾ ಬಳಿ ಜರುಗಿತು.

ನಾವೂರು ಆರೋಗ್ಯ ಕ್ಲಿನಿಕಿನ ಡಾ. ಪ್ರದೀಪ್ ಆಟಿಕುಕ್ಕೆ ಶಿಬಿರದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸರ್ವೋದಯ ಟ್ರಸ್ಟ್ ನ ಅಧ್ಯಕ್ಷರು, ಸರ್ವ ಸದಸ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಬೆಳ್ತಂಗಡಿಯ ಖ್ಯಾತ ನ್ಯಾಯವಾದಿಗಳಾದ ಸೇವಿಯರ್ ಪಾಲೇಲಿ ನಾವೂರು , ಜಯಂತಗೌಡ ಗುರಿಪಳ್ಳ , ಶ್ಯಾಮಸುಂದರಗೌಡ ನಡ , ಪ್ರವೀಣ್ ವಿ ಜಿ ಕನ್ಯಾಡಿ , ಗಣೇಶ್ ಕನಾಲು , ಎ ಕೆ ಅಬ್ಬಾಸ್ , ಜನಾರ್ಧನಗೌಡ ಕಡ್ತ್ಯಾರು , ಪೂವಪ್ಪಗೌಡ ನಾವೂರು , ಮುನಿರಾಜ ಅಜ್ರಿ ನಡ ,ಅಜಿತ್ ಆರಿಗ, ನಡ, ರಾಮಣ್ಣ ಕುಂಬಾರ, ಕುಕ್ಕಾವು, ಸ್ವರೂಪ್ ನಾವೂರು , ಇನಾಸ್ ಕನ್ಯಾಡಿ, ನವಭಾರತ್ ಗೆಳೆಯರ ಬಳಗ ಇಂದಬೆಟ್ಟು ಸದಸ್ಯರು, ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಮೋಹನ್ ಬಂಗೇರ ಹಾಗೂ ಧರ್ಣಪ್ಪ ಮೂಲ್ಯ ಕಾರ್ಯಕ್ರಮವನ್ನು ನಿರ್ವಹಿಸಿದರು.

Related posts

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧೀ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ.

Suddi Udaya

ಬೆಳ್ತಂಗಡಿ: ಕಟ್ಟಡ ತೆರವು ಕಾರ್ಯಾಚರಣೆ ವೇಳೆ ರಾಡ್ ಇದ್ದ ಸಿಮೆಂಟ್ ತುಂಡು ಬಿದ್ದು ಕಾರ್ಮಿಕ ಸಾವು

Suddi Udaya

ಬಂಗ್ಲೆಗುಡ್ಡೆಯಲ್ಲಿ ಸಿಕ್ಕ ಏಳು ಅಸ್ಥಿಪಂಜರ ಎಫ್ಎಸ್ಎಲ್ ಗೆ ರವಾನೆ

Suddi Udaya

ಬೆಳ್ತಂಗಡಿ: ಯುವ ಇಂಜೀನಿಯರ್ ಕುತೂಬುದ್ದೀನ್ ಗೋಳಿಕಟ್ಟೆ ಹೃದಯಾಘಾತದಿಂದ ನಿಧನ

Suddi Udaya

ರೂ. 27 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಸೂಳಬೆಟ್ಟು ಸ.ಕಿ. ಪ್ರಾಥಮಿಕ ಶಾಲಾ ವಿಭಾಗದ ನೂತನ ಕಟ್ಟಡ ಉದ್ಘಾಟನೆ

Suddi Udaya

ತಣ್ಣೀರುಪಂತ ವಲಯ, ಕರಾಯ ಕಾರ್ಯಕ್ಷೇತ್ರದ ಬಾಬು ರವರಿಗೆ ರವರಿಗೆ ವೀಲ್ ಚೆಯರ್ ವಿತರಣೆ

Suddi Udaya
error: Content is protected !!