34.3 C
ಪುತ್ತೂರು, ಬೆಳ್ತಂಗಡಿ
October 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿಯಲ್ಲಿ ಯುವವಾಹಿನಿ ವತಿಯಿಂದ ಬೃಹತ್ ರಕ್ತದಾನ ಹಾಗೂ ವೈದ್ಯಕೀಯ ಶಿಬಿರ

ಬೆಳ್ತಂಗಡಿ: ಸೇವೆಯೇ ಶ್ರೇಷ್ಠ ಧರ್ಮ ಎಂಬ ಆಶಯದೊಂದಿಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಯುವವಾಹಿನಿ ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ, ಯುವವಾಹಿನಿ ಬೆಳ್ತಂಗಡಿ ಘಟಕದ ಆತಿಥ್ಯದಲ್ಲಿ ಬೃಹತ್ ರಕ್ತದಾನ ಹಾಗೂ ವೈದ್ಯಕೀಯ ಶಿಬಿರವು ಅ. 25ರಂದು ಗುರುವಾಯನಕೆರೆಯ ಎನ್.ಇ.ಟಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್, ಜೈನ್ ಪೇಟೆ, ಬೆಳ್ತಂಗಡಿ ಇಲ್ಲಿ ಯಶಸ್ವಿಯಾಗಿ ನಡೆಯಿತು.

ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಬ್ಲಡ್ ಬ್ಯಾಂಕ್, ಮಂಗಳೂರು ಹಾಗೂ ಕಣಚೂರು ವೈದ್ಯಕೀಯ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ, N.E.T. ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್, ಜೈನ್ ಪೇಟೆ, ಬೆಳ್ತಂಗಡಿ ಇವರ ಸಹಕಾರದೊಂದಿಗೆ ಆಯೋಜಿಸಲಾದ ಈ ಸೇವಾ ಕಾರ್ಯಕ್ರಮದಲ್ಲಿ ಬೃಹತ್ ರಕ್ತದಾನ ಶಿಬಿರ, ವೈದ್ಯಕೀಯ ತಪಾಸಣಾ ಶಿಬಿರ, ನೇತ್ರ ಚಿಕಿತ್ಸಾ ಶಿಬಿರ, ಉಚಿತ ಕನ್ನಡಕ ವಿತರಣೆ, ಗಾಲಿಕುರ್ಚಿ ಹಾಗೂ ವಾಟರ್ ಬೆಡ್ ವಿತರಣೆ ಸೇರಿದಂತೆ ವಿವಿಧ ಜನೋಪಯೋಗಿ ಸೇವಾ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮವನ್ನು ಬೆಳ್ತಂಗಡಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಂ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬಿಲ್ಲವ ಅಸೋಸಿಯೇಷನ್ ಸೌದಿ ಅರೇಬಿಯಾದ ಉಪಾಧ್ಯಕ್ಷ ಗಿರೀಶ್ ಪೂಜಾರಿ ಮೂಡುಕೋಡಿ, ಬೆಳ್ತಂಗಡಿ ಬಿಲ್ಲವ ಸಂಘದ ಅಧ್ಯಕ್ಷ ಜಯವಿಕ್ರಂ ಕಲ್ಲಾಪು, ಬೆಳ್ತಂಗಡಿ ಗುರುದೇವ ಬ್ಯಾಂಕಿನ ಅಧ್ಯಕ್ಷರಾದ ಭಗೀರಥ್ ಜಿ., ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಶಾಖೆಯ ಅಧ್ಯಕ್ಷ ಹರಿದಾಸ್ ಎಸ್.ಎಂ., ಗುರುವಾಯನಕೆರೆಯ N.E.T. ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಅಧ್ಯಕ್ಷ ಸಜಿ ಪಿ.ಆರ್., ಕ್ರಾಂತಿವೀರ ಮಂಜ ಬೈದ್ಯ ಸಂಸ್ಕರಣ ಸಮಿತಿ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಸಂಪತ್ ಬಿ. ಸುವರ್ಣ, ಖ್ಯಾತ ಜ್ಯೋತಿಷಿ ಹಾಗೂ ಕಂಬಳ ಯಜಮಾನರಾದ ಗಣೇಶ್ ನಾರಾಯಣ ಪಂಡಿತ್ ವೇಣೂರು ಮೂಡುಕೋಡಿ, ಕೊಕ್ರಾಡಿ ಮಣಿಕಂಠ ಟ್ರೇಡರ್ಸ್ ಮಾಲಕರಾದ ಶುಭಕರ ಪೂಜಾರಿ ಸಾವ್ಯ ಹಾಗೂ ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷೆ ಲೀಲಾವತಿ ವಸಂತ ಪೂಜಾರಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ರಕ್ಷಿತ್ ಶಿವರಾಂ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಘಟಕದ ನಿರ್ದೇಶಕರಾದ ಶೈಲೇಶ್ ಪ್ರಾರ್ಥಿಸಿದರು. ಕೇಂದ್ರ ಸಮಿತಿ ಆರೋಗ್ಯ ನಿರ್ದೇಶಕರಾದ ರಾಕೇಶ್ ಕುಮಾರ್ ಮೂಡುಕೋಡಿ ಸ್ವಾಗತಿಸಿ ಪ್ರಸ್ತಾವಿಸಿದರು. ಶಿಬಿರದ ಸಂಚಾಲಕರಾದ ಗುರುರಾಜ್ ಗುರಿಪಳ್ಳ ಸನ್ಮಾನ ಪತ್ರ ವಾಚಿಸಿದರು. ಸುಧಾಮಣಿ ರಮಾನಂದ ಸಾಲಿಯಾನ್ ಕಾರ್ಯಕ್ರಮವನ್ನು ನಿರೂಪಿಸಿದರು. ಘಟಕದ ಅಧ್ಯಕ್ಷೆ ಲೀಲಾವತಿ ವಸಂತ ಪೂಜಾರಿ ವಂದಿಸಿದರು.

ಸೇವೆಯ ಮೂಲಕ ಸಾರ್ಥಕತೆ

ಈ ಶಿಬಿರವು ಕೇವಲ ಒಂದು ಕಾರ್ಯಕ್ರಮವಾಗಿ ಸೀಮಿತವಾಗದೆ, ನೂರಾರು ಮಂದಿಗೆ ನೇರವಾಗಿ ಆರೋಗ್ಯ ಸೇವೆ ಹಾಗೂ ಮಾನವೀಯ ನೆರವು ಒದಗಿಸಿದ ಅರ್ಥಪೂರ್ಣ ಸೇವಾ ಕಾರ್ಯವಾಗಿ ಮೂಡಿಬಂದಿತು.

ಬೃಹತ್ ರಕ್ತದಾನ ಶಿಬಿರದಲ್ಲಿ 102 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ರಕ್ತದಾನದ ಮೂಲಕ ಜೀವ ಉಳಿಸುವ ಮಹತ್ವದ ಕಾರ್ಯದಲ್ಲಿ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡರು.

ವೈದ್ಯಕೀಯ ಹಾಗೂ ನೇತ್ರ ತಪಾಸಣಾ ಶಿಬಿರದಲ್ಲಿ 150 ಮಂದಿ ಭಾಗವಹಿಸಿ ವಿವಿಧ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಂಡರು. ಅಗತ್ಯವಿರುವವರಿಗೆ 62 ಉಚಿತ ಕನ್ನಡಕಗಳನ್ನು ವಿತರಿಸಲಾಯಿತು. 20 ಜನರಿಗೆ ಕಣ್ಣಿನ ಉಚಿತ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆಯನ್ನು ಮಾಡಲಾಯಿತು.ಇದರ ಜೊತೆಗೆ ಅರ್ಹ ಫಲಾನುಭವಿಗಳಿಗೆ ಉಚಿತ ಗಾಲಿಕುರ್ಚಿ ಹಾಗೂ ವಾಟರ್ ಬೆಡ್‌ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ABHA ಕಾರ್ಡ್ ಹಾಗೂ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ ವ್ಯವಸ್ಥೆಯನ್ನೂ ಮಾಡಲಾಗಿದ್ದು, ಸಾರ್ವಜನಿಕರಿಗೆ ಆರೋಗ್ಯ ಸೇವೆಗಳನ್ನು ಸುಲಭವಾಗಿ ಪಡೆಯಲು ಅಗತ್ಯ ಮಾರ್ಗದರ್ಶನ ನೀಡಲಾಯಿತು.
ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲಾ ದಾನಿಗಳು, ವೈದ್ಯರು, ಆರೋಗ್ಯ ಸಿಬ್ಬಂದಿ, ರಕ್ತದಾನಿಗಳು, ಫಲಾನುಭವಿಗಳು, ಸ್ವಯಂಸೇವಕರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳಿಗೆ ವೇದಿಕೆಯಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

ಯುವವಾಹಿನಿಯ ವಿವಿಧ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕೇಂದ್ರ ಸಮಿತಿಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುವ ಮೂಲಕ ಶಿಬಿರವನ್ನು ಯಶಸ್ವಿಗೊಳಿಸಿದರು.

Related posts

ದ್ವಿತೀಯ ಪಿಯುಸಿ ಫಲಿತಾಂಶ: ತೆಕ್ಕಾರುವಿನ ಆಯಿಷಾತುಲ್ ರಫೀಯ ರವರಿಗೆ 568 ಅಂಕ

Suddi Udaya

ಉಜಿರೆ ಶ್ರೀ ಧ.ಮ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಅಭಿವ್ಯಕ್ತಿ ಧಾರೆ ಬೇಸಿಗೆ ಶಿಬಿರ ಉದ್ಘಾಟನೆ

Suddi Udaya

ಹನುಮಾನ್ ಟೂರ್ ಆ್ಯಂಡ್ ಟ್ರಾವೆಲ್ಸ್ ಮಾಲಕ ರಾಮಕೃಷ್ಣ ನಿಧನ

Suddi Udaya

ಹಿರಿಯ ಛಾಯಾಗ್ರಾಹಕ ಶಾಂತಲಾ ಸ್ಟುಡಿಯೋ ಮಾಲಕ ಶಶಿಧರ್ ರಾವ್ ನಿಧನ

Suddi Udaya

ಉಜಿರೆ ಪ್ರಕೃತಿ ಚಿಕಿತ್ಸಾ ಕಾಲೇಜಿನ ವಿದ್ಯಾರ್ಥಿಯ‌ ಖಾತೆಯಿಂದ ರೂ. 3.14ಲಕ್ಷ ನಗದು ಅಪಹರಣ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಘಟಕದ ಸಾಮಾನ್ಯ ಸಭೆ

Suddi Udaya
error: Content is protected !!