25.2 C
ಪುತ್ತೂರು, ಬೆಳ್ತಂಗಡಿ
October 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಡಂತ್ಯಾರು: ನಾಟ್ಯ ಶಿವ ನೃತ್ಯ ಕಲಾ ಕೇಂದ್ರ ಉದ್ಘಾಟನೆ

ಮಡಂತ್ಯಾರು: ಶ್ರೀ ಕ್ಷೇತ್ರ ಮಹಿಷ ಮರ್ದಿನಿ ದೇವಸ್ಥಾನ ಪಾರೆಂಕಿ ಇಲ್ಲಿನ ಸಭಾ ಭವನದಲ್ಲಿ ನಾಟ್ಯ ಶಿವ ಭರತ ನಾಟ್ಯಾ ಅಭ್ಯಾಸ ಕೇಂದ್ರ ಇತ್ತೀಚೆಗೆ ಉದ್ಘಾಟನೆಗೊಂಡಿತು. ಪುತ್ತೂರು ಶ್ರೀ ಶಾರದಾ ಕಲಾ ಕೇಂದ್ರ ಟ್ರಸ್ಟ್ ನಿರ್ದೇಶಕ ವಿದ್ವಾನ್ ಸುದರ್ಶನ್ ಎಂ.ಎಲ್ ಭಟ್ ದೀಪ ಪ್ರಜ್ವಲನಗೈದು ಉದ್ಘಾಟಿಸಿದರು.

ಕಲೆ ಸಂಸ್ಕೃತಿಯಲ್ಲಿ ವಿದ್ಯಾರ್ಥಿಗಳ ಶ್ರೇಯಸ್ಸಿನ ಹಿಂದೆ ಗುರುಗಳ ಪಾತ್ರ ಅನನ್ಯ. ನಾಟ್ಯಕಲೆಯನ್ನು ಒಂದು ತಲೆಮಾರಿನಿಂದ ಮುಂದಿನ ಪೀಳಿಗೆಗೆ ಸಾಗಿಸುವಲ್ಲಿ ಗುರುಗಳ ಶ್ರಮ ನಿರಂತರ.
ಭರತನಾಟ್ಯವು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ. ಭಕ್ತಿ , ನಿರಂತರ ಅಭ್ಯಾಸ, ಅಧ್ಯಯನದಿಂದ ಭರತನಾಟ್ಯವೆಂಬ ತಪಸ್ಸನ್ನು ಒಲಿಸಿಕೊಳ್ಳಲು ಸಾಧ್ಯ ಎಂದು ಅವರು ಹೇಳಿದರು.

ಮಹಿಷ ಮರ್ದಿನಿ ದೇವಸ್ಥಾನ ಪಾರೆಂಕಿ ಇದರ ಪ್ರಧಾನ ಅರ್ಚಕರಾದ ಟಿ.ವಿ ಶ್ರೀಧರ ರಾವ್ ಪೇಜಾವರ ಹಾಗೂ ಆಡಳಿತ ಮೊಕ್ತೇಸರರಾದ ಪುನೀತ್ ಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ನಾಟ್ಯ ಶಿವ ನೃತ್ಯ ಕಲಾಕೇಂದ್ರದ ನೃತ್ಯ ಗುರು ವಿದುಷಿ ಡಿಂಪಲ್ ಶಿವರಾಜ್ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರತಿ ಆದಿತ್ಯವಾರ ಸಂಜೆ 4ಗಂಟೆ ಯಿಂದ ಶ್ರೀ ಕ್ಷೇತ್ರ ಪಾರೆಂಕಿ ಸಭಾಭವನದಲ್ಲಿ ನೃತ್ಯಾಸಕ್ತರಿಗೆ ತರಗತಿಗಳನ್ನು ತೆಗೆದುಕೊಳ್ಳುವ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ತಮ್ಮ ನೃತ್ಯ ಗುರುಗಳಾದ ವಿದ್ವಾನ್ ಸುದರ್ಶನ್ ಎಂಎಲ್ ಭಟ್ ಅವರಿಗೆ ಗುರುವಂದನೆ ಸಲ್ಲಿಸಿ ಸನ್ಮಾನಿಸಿದರು, ಶಿವರಾಜ್ ಸಹಕರಿಸಿದರು.

Related posts

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ರಕ್ಷಾಬಂಧನ – ವರಮಹಾಲಕ್ಷ್ಮೀ ಪೂಜೆ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ತು ಉದ್ಘಾಟನೆ

Suddi Udaya

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ದೀಪಾವಳಿ ಆಚರಣೆ

Suddi Udaya

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವಿರುದ್ದದ ಪ್ರಕರಣ ಹೈಕೋರ್ಟ್‌ನಲ್ಲಿ ವಜಾ

Suddi Udaya

ಎಲ್ ಸಿ ಆರ್ ವಿದ್ಯಾಸಂಸ್ಥೆಯಲ್ಲಿ ದಶಮ ಸಂಭ್ರಮದ ಸಭಾ ಕಾರ್ಯಕ್ರಮ

Suddi Udaya

ತಣ್ಣೀರುಪಂತ ಸಹಕಾರ ಸಂಘಗಳ ವ್ಯಾಪ್ತಿಯಲ್ಲಿ ರಾಸುಗಳ ಭ್ರೂಣ ವರ್ಗಾವಣೆ ಕಾರ್ಯಕ್ರಮ

Suddi Udaya
error: Content is protected !!