November 2, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉಜಿರೆ ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಉಜಿರೆ: ಶ್ರೀ ಧ. ಮ ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆ , ಉಜಿರೆ ( ರಾಜ್ಯ ಪಠ್ಯಕ್ರಮ ) ಕನ್ನಡ ಅಧ್ಯಾಪಕಿ ರೇಷ್ಮಾ ದೀಪ ಬೆಳಗಿಸಿ ಭುವನೇಶ್ವರಿ ತಾಯಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿ ನಮ್ಮ ನಾಡು ಕರ್ನಾಟಕ, ನಮ್ಮ ಭಾಷೆ ಕನ್ನಡ ಎಂಬ ಹೆಮ್ಮೆ ಪ್ರತಿಯೊಬ್ಬ ಕನ್ನಡಿಗನಲ್ಲೂ ಇರಬೇಕು. ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಮತ್ತು ನೆಲ-ಜಲವನ್ನು ಗೌರವಿಸಿ, ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕನ್ನಡ ನಾಡಿನ ಕೀರ್ತಿ ವಿಶ್ವದಾದ್ಯಂತ ಪಸರಿಸಲಿ, ಎಂದರು.

ಶಾಲಾ ಮುಖ್ಯೋಪಾಧ್ಯಾಯಿನಿ ವಿದ್ಯಾ ಕಿರಣ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ರಾಜ್ಯೋತ್ಸವದ ಶುಭಾಶಯ ಕೋರಿದರು.

ವಿದ್ಯಾರ್ಥಿಗಳಾದ ಶ್ರುತಾ ಆಳ್ವ ಮತ್ತು ಚಂದನ ರಾಜ್ಯೋತ್ಸವದ ಬಗ್ಗೆ ಭಾಷಣ ಮಾಡಿದರು. ರಾಜ್ಯೋತ್ಸವದ ಬಗ್ಗೆ ವಿದ್ಯಾರ್ಥಿನಿಯರು ಹಾಡುಗಳನ್ನು ಹಾಡಿದರು. ರಾಜ್ಯೋತ್ಸವದ ಬಗ್ಗೆ ಪವರ್ ಪಾಯಿಂಟ್ ನಲ್ಲಿ ಪಿಪಿಟಿ ರಚಿಸಿ ತೋರಿಸಿದರು

ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ ಚಂದ್ರಶೇಖರ್ ಭಟ್, ತ್ರಿವೇಣಿ ಮತ್ತು ಸರ್ವೋತ್ತಮ್ ಗೌಡ, ಎಲ್ಲಾ ಶಿಕ್ಷಕರು ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಸ್ನೇಹ ಸ್ವಾಗತಿಸಿದರು. ಪ್ರತೀಕ್ಷ ವಂದಿಸಿದರು. ಪೂಜಾ ನಿರೂಪಿಸಿದರು.

Related posts

ಹೊಸಂಗಡಿಯಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆ ಅಂಗವಾಗಿ ಅಡಿಕೆ ಎಲೆ ಚುಕ್ಕಿ ರೋಗದ ಸಮಗ್ರ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮ

Suddi Udaya

ಬಳಂಜ ಕಸ್ತೂರಿ ರಂಗನ್ ವರದಿಯ ಬಗ್ಗೆ ವಿಶೇಷ ಗ್ರಾಮ ಸಭೆ

Suddi Udaya

ವೆಯಿಟ್ ಲಿಫ್ಟಿಂಗ್ ನಲ್ಲಿ ಗರ್ಡಾಡಿಯ ರಕ್ಷಿತ್ ಪೈ ಪ್ರಥಮ ಸ್ಥಾನ

Suddi Udaya

ಸೆ.22-ಅ.2: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ, ದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆ

Suddi Udaya

ಗುರುವಾಯನಕೆರೆ: ದರ್ಗಾ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಯಾಕೂಬ್ ಮುಸ್ಲಿಯಾರ್ ಆಯ್ಕೆ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ. ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya
error: Content is protected !!