November 2, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಧರ್ಮಸ್ಥಳ: ಜೋಡುಸ್ಥಾನ ಶ್ರೀ ನಿತ್ಯ ನೂತನ ಭಜನಾ ಮಂಡಳಿಯ ಭಜಕರಿಗೆ ಜ್ಞಾನ ದರ್ಶಿನಿ ಪುಸ್ತಕ ವಿತರಣೆ

ಧರ್ಮಸ್ಥಳ: ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮವಾದ ಸಂಸ್ಕಾರವನ್ನು ನೀಡಿದರೆ ಅವರು ದೊಡ್ಡವರಾದ ಮೇಲೆ ಸಮಾಜದಲ್ಲಿ ಸುಸಂಸ್ಕೃತರಾದ ವ್ಯಕ್ತಿಗಳಾಗಿ ಬಾಳಲು ಸಾಧ್ಯ. ಒಂದು ಗಿಡವನ್ನು ನೆಟ್ಟು ಅದಕ್ಕೆ ಆಗಾಗ ನಾವು ನೀರು ಮತ್ತು ಗೊಬ್ಬರವನ್ನು ಕೊಡುವಂತೆ ನಮ್ಮ ಮಕ್ಕಳಿಗೂ ಆಗಾಗ ಉತ್ತಮವಾದ ಸಂಸ್ಕಾರದ ಬಗ್ಗೆ ಪಾಠವನ್ನು ಮಾಡಬೇಕಾದ ಅನಿವಾರ್ಯತೆ ಇದೆ.
ಅದಕ್ಕಾಗಿಯೇ ಶ್ರೀ ಮಂಜುನಾಥೇಶ್ವರ ಪ್ರಾದೇಶಿಕ ಭಜನಾ ಪರಿಷತ್ತು ಧರ್ಮಸ್ಥಳ ಮತ್ತು ಭಜನಾ ಪರಿಷತ್ ಬೆಳ್ತಂಗಡಿ ತಾಲೂಕಿನ ಪದಾಧಿಕಾರಿಗಳು ಜಂಟಿಯಾಗಿ ಭಜನೆಯೊಂದಿಗೆ ಮಕ್ಕಳಿಗೆ ವ್ಯಕ್ತಿತ್ವ ವಿಕಾಸನ, ಆರೋಗ್ಯ ಮಾಹಿತಿ, ಕಾನೂನಿನ ಮಾಹಿತಿ ಮತ್ತು ಇನ್ನಿತರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಮ್ಮ ಯುವ ಪೀಳಿಗೆಗಳಿಗೆ ಉತ್ತಮ ಸಂಸ್ಕಾರ ಮತ್ತು ಮಾಹಿತಿ- ಮಾರ್ಗದರ್ಶನ ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಹೇಮಾವತಿ ವೀ. ಹೆಗ್ಗಡೆಯವರ ಆಶಯದಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶ್ರೀ ಮಂಜುನಾಥೇಶ್ವರ ಪ್ರಾದೇಶಿಕ ಭಜನಾ ಪರಿಷತ್ತಿನ ಸಂಚಾಲಕರಾದ ಶ್ರೀ ಸುಬ್ರಹ್ಮಣ್ಯ ಪ್ರಸಾದ್ ರವರು ತಿಳಿಸಿದರು.

ಅವರು ಭಜನಾ ಪರಿಷತ್ತು ಬೆಳ್ತಂಗಡಿ ತಾಲೂಕು ಇದರ ನೇತೃತ್ವದಲ್ಲಿ ಶ್ರೀ ನಿತ್ಯ ನೂತನ ಭಜನಾ ಮಂಡಳಿ ಜೋಡುಸ್ಥಾನದಲ್ಲಿ ಶಾಂತಿವನ ಟ್ರಸ್ಟ್ ಧರ್ಮಸ್ಥಳ ಇದರ ವತಿಯಿಂದ ನೀಡಲಾದ ಜ್ಞಾನ ದರ್ಶಿನಿ ಎನ್ನುವ ಪುಸ್ತಕವನ್ನು ಭಜಕರಿಗೆ ನೀಡುತ್ತಾ ಮಾತನಾಡುತ್ತಿದ್ದರು.

ಪ್ರಾದೇಶಿಕ ಭಜನಾ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಸಾಲ್ಯಾನ್ ಮಾತನಾಡಿ ಇಂದಿನ ದಿನಗಳಲ್ಲಿ ನಮ್ಮ ಮಕ್ಕಳು ಉತ್ತಮ ಸಂಸ್ಕಾರಯುತವಾದ ಪುಸ್ತಕಗಳನ್ನು ಓದುವುದನ್ನು ಬಿಟ್ಟು ಮೊಬೈಲ್ ಫೇಸ್ ಬುಕ್, ಇನ್ಸ್ಟಾಗ್ರಾಮ್ ಅಥವಾ ಇನ್ನಿತರ Appಗಳಲ್ಲಿ ಬರುವಂತಹ ಕೆಲವೊಂದು ಕೆಟ್ಟ ವಿಚಾರಗಳಿಂದ ಪ್ರೇರೇಪಿತರಾಗಿ ನಮ್ಮ ಸಂಸ್ಕೃತಿ ಸಂಸ್ಕಾರವನ್ನೇ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು. ಅದಕ್ಕಾಗಿ ಮಕ್ಕಳಿಗೆ ಧರ್ಮ ಶಿಕ್ಷಣದ ಬಗ್ಗೆ ಮತ್ತು ವ್ಯಕ್ತಿತ್ವ ವಿಕಾಸನದ ಬಗ್ಗೆ ಮಾಹಿತಿ ಮಾರ್ಗದರ್ಶನಗಳನ್ನು ನೀಡುವುದರ ಜೊತೆಗೆ ಗ್ರಾಮ ಅಭಿವೃದ್ಧಿ ಯೋಜನೆ ಬೆಳ್ತಂಗಡಿ ಹಾಗೂ ಶಾಂತಿವನ ಟ್ರಸ್ಟ್ ನ ಸಹಕಾರದೊಂದಿಗೆ ಉತ್ತಮ ಸಂಸ್ಕಾರ ಯುತವಾದ ಲೇಖನಗಳುಳ್ಳ ಇಂತಹ ಕೈಪಿಡಿಗಳನ್ನು ಭಜಕ ಮಕ್ಕಳಿಗೆ ವಿತರಿಸುವ ಕೆಲಸ ಕಾರ್ಯಗಳನ್ನು ನಮ್ಮ ಭಜನಾ ಪರಿಷತ್ತು ಮಾಡಲು ಪ್ರಾರಂಭಿಸಿದೆ ಎಂದರು.

ಈ ಸಂದರ್ಭದಲ್ಲಿ ಭಜನಾ ಪಷತ್ತಿನ ತಾಲೂಕು ಅಧ್ಯಕ್ಷ ರವಿರಾಜ್ ಚಾರ್ಮಾಡಿ, ಮಲಯ ಉಪಾಧ್ಯಕ್ಷೆ ಸುನಿತ, ಜೊತೆ ಕಾರ್ಯದರ್ಶಿ ವೀಣಾ, ನಿತ್ಯ ನೂತನ ಭಜನಾ ಮಂಡಳಿಯ ಅಧ್ಯಕ್ಷ ಜಗದೀಶ್, ಉಪಾಧ್ಯಕ್ಷೆ ಗಿರಿಜಾ, ಭಜನಾ ಮಂಡಳಿ ನಿಕಟಪೂರ್ವ ಅಧ್ಯಕ್ಷ ಅರುಣ್ ಕುಮಾರ್ ಮತ್ತು ಭಜನಾ ಮಂಡಳಿಯ ಇನ್ನಿತರ ಪದಾಧಿಕಾರಿಗಳು ಸದಸ್ಯರುಗಳು ಹಾಗೂ ಭಜಕರು ಉಪಸ್ಥಿತರಿದ್ದರು.

ಜಗದೀಶ್ ಸ್ವಾಗತಿಸಿ, ಅರ್ಪಿತ ವಂದಿಸಿದರು.

Related posts

ಕುವೆಟ್ಟು: ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೇ ರಸ್ತೆಯಲ್ಲೇ ಹರಿದ ಮಳೆ ನೀರು

Suddi Udaya

ಪಾಲಡ್ಕ ಗುಂಡಿಜಾಲು ರಸ್ತೆಯಲ್ಲಿ ಕೃತಕ ಕೆರೆ

Suddi Udaya

ಅ.12: ಸಾವ್ಯ ಶುಭೋದಯ ಹಿಂದೂ ಸೇವಾ ಟ್ರಸ್ಟ್ ನಿಂದ ರಕ್ತದಾನ ಶಿಬಿರ ಹಾಗೂ ಅಂಚೆ ಕಚೇರಿಯ ವಿಶೇಷ ಯೋಜನೆ

Suddi Udaya

ಬೆಳ್ತಂಗಡಿ: ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ಭರತನಾಟ್ಯ ತರಗತಿ ಪ್ರಾರಂಭ

Suddi Udaya

ಶಿಬಾಜೆಯ ಮಾದರಿಯಲ್ಲಿ ಮರಣ ಮೃದಂಗಕ್ಕೆ ಅಣಿಯಾಗಿ ನಿಂತಿರುವ ಬೆಳ್ತಂಗಡಿ ಸಂತೆಕಟ್ಟೆ ವಿದ್ಯುತ್ ಕಂಬದ ಸ್ಟೇ ವಯ‌ರ್

Suddi Udaya

ಜ.18: ಉಜಿರೆ ಬೆನಕ ಆಸ್ಪತ್ರೆಯ ರಜತ ಸಂಭ್ರಮ ಹಾಗೂ ನೂತನ ವಿಸ್ತೃತ ಕಟ್ಟಡ ಉದ್ಘಾಟನೆ

Suddi Udaya
error: Content is protected !!