November 2, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಕಾಶಿಬೆಟ್ಟು: ಅಭ್ಯಾಸ್ ಪಿಯು ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ

ಉಜಿರೆ: ಅಭ್ಯಾಸ್ ಪಿಯು ಕಾಲೇಜಿನಲ್ಲಿ 71ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಅಭ್ಯಾಸ್ ಕಾಲೇಜಿನ ಅಧ್ಯಕ್ಷ ಕಾರ್ತಿಕೇಯ ಎಂ. ಎಸ್ ಹಾಗೂ ಕಾರ್ಯದರ್ಶಿ ಶಿಲ್ಪಾ ಆರ್ ಮತ್ತು ಪ್ರಾಂಶುಪಾಲರು ದೀಪಕ್ ಕೆ. ಎಸ್, ಉಪಪ್ರಾಂಶುಪಾಲ ಚಂದ್ರಶೇಖರ ಗೌಡ ಹಾಗೂ ಆಡಳಿತ ಅಧಿಕಾರಿ ಪ್ರಮೋದ್ ಗೌಡ ಉಪಸ್ಥಿತರಿದ್ದರು.

ಮುಖ್ಯ ಅತಿಥಿ ಚಂದ್ರಶೇಖರ ಗೌಡ ಮಾತನಾಡಿ, “ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಬದುಕು, ನಮ್ಮ ಸಂಸ್ಕೃತಿ. ನಾಡು ನಮ್ಮ ತಾಯಿ, ನುಡಿ ನಮ್ಮ ಉಸಿರು. ಇಂದಿನ ಯುವಜನತೆ ಕನ್ನಡವನ್ನು ಉಳಿಸಿ ಬೆಳೆಸಬೇಕು, ಕನ್ನಡದಲ್ಲಿ ಮಾತನಾಡಲು ಹೆಮ್ಮೆ ಪಡಬೇಕು” ಎಂದು ಕರೆ ನೀಡಿದರು.

ಅಭ್ಯಾಸ್ ಕಾಲೇಜಿನ ಪ್ರಾಂಶುಪಾಲ ದೀಪಕ್ ಕೆ. ಎಸ್. ಮಾತನಾಡಿ, “ವಿದ್ಯಾರ್ಥಿಗಳು ಕನ್ನಡವನ್ನು ಕೇವಲ ಒಂದು ವಿಷಯವಾಗಿ ನೋಡಬಾರದು. ಕನ್ನಡ ಸಾಹಿತ್ಯದಲ್ಲಿ ಅಪಾರ ಜ್ಞಾನ ಭಂಡಾರವಿದೆ. ಕನ್ನಡ ಓದುವ, ಬರೆಯುವ ಹವ್ಯಾಸ ಬೆಳೆಸಿಕೊಂಡರೆ ನಮ್ಮ ಸಂಸ್ಕೃತಿಯನ್ನು ಉಳಿಸಬಹುದು” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಭ್ಯಾಸ್ ಸಂಸ್ಥೆಯ ಅಧ್ಯಕ್ಷ ಕಾರ್ತಿಕೇಯ ಎಂ. ಎಸ್. ಮಾತನಾಡಿ, “ಅಭ್ಯಾಸ್ ಕಾಲೇಜು ಕೇವಲ ಅಂಕಗಳಿಗೆ ಸೀಮಿತವಲ್ಲ, ಸಂಸ್ಕಾರಕ್ಕೂ ಒತ್ತು ನೀಡುತ್ತದೆ. ನಮ್ಮ ನಾಡು, ನುಡಿಯ ಸೇವೆ ಮಾಡುವುದೇ ನಿಜವಾದ ಶಿಕ್ಷಣ. ನಮ್ಮ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕನ್ನಡದ ಸೇವಕರಾಗಬೇಕು” ಎಂದು ಸ್ಪೂರ್ತಿದಾಯಕ ನುಡಿಗಳನ್ನಾಡಿದರು.

ವಿದ್ಯಾರ್ಥಿನಿಯರಾದ ವಂಶಿ ಅವರು ನಿರೂಪಿಸಿದರು. ವೈದೇಹಿ ಸ್ವಾಗತಿಸಿ, ಶಾಂಭವಿ ವಂದಿಸಿದರು. ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕ ಸುಧೀರ್ ನೆರವೇರಿಸಿದರು.

ಈ ಸಂದರ್ಭದಲ್ಲಿ ಗಣಿತ ಉಪನ್ಯಾಸಕ ಕಲಿಲ್ ಸಾಬ್, ಕಾಲೇಜಿನ ಪಿಆರ್‌ಒ ಧನಂಜಯ್, ರೋಹಿತ್ ಸೇರಿದಂತೆ ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಎಸ್.ಡಿ.ಎಂ ಕಾಲೇಜಿನಲ್ಲಿ ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಸಮಾರೋಪ ಸಮಾರಂಭ

Suddi Udaya

ಯುವವಾಹಿನಿ ಬೆಳ್ತಂಗಡಿ ಘಟಕದಿಂದ ಉದಯ್ ಪೂಜಾರಿಯವರಿಗೆ ಸಾಂತ್ವಾನ ನಿಧಿ ಹಸ್ತಾಂತರ

Suddi Udaya

ಬಳಂಜ: ಸುವರ್ಣ ನಿಲಯದ ವೆಂಕಮ್ಮ ನಿಧನ

Suddi Udaya

ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಹೆಚ್ಚಿಸಿ ಕೊಳ್ಳಬೇಕು: ಡಾ ಪ್ರಸನ್ನ ಕುಮಾರ್ ಐತಾಳ್

Suddi Udaya

ಬದನಾಜೆ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲಾ ಅಮೃತ ಮಹೋತ್ಸವ: ಸುಜ್ಞಾನ ಸಭಾಂಗಣ ಲೋಕಾರ್ಪಣೆ

Suddi Udaya

ಮುಂಡೂರು ಮಂಗಳಗಿರಿ ದೇವಸ್ಥಾನದ ವತಿಯಿಂದ ಶಾಲಾ ಮಕ್ಕಳಿಗೆ ಕೊಡೆ ವಿತರಣೆ

Suddi Udaya
error: Content is protected !!