November 4, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಶ್ರೀ ಗುರುದೇವ ಸಹಕಾರ ಸಂಘದ ಬಜಗೋಳಿ ಶಾಖೆಯು ಸ್ಥಳಾಂತರಗೊಂಡು ಶುಭಾರಂಭ

ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಬೆಳ್ತಂಗಡಿ ಇದರ ಬಜಗೋಳಿ ಶಾಖೆಯ ಸ್ಥಳಾಂತರಗೊಂಡ ಸ್ವಂತ ಮಾಲೀಕತ್ವದ ನೂತನ ಕಚೇರಿಯ ಶುಭಾರಂಭ ಸಮಾರಂಭವು ನವೆಂಬರ್ 4ರಂದು ನಡೆಯಿತು.

ಮುಡಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುರೇಶ್ ಎಂ. ಶೆಟ್ಟಿ ಅವರು ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಶ್ರೀ ಗುರುದೇವ ಸಹಕಾರ ಸಂಘವು ಗ್ರಾಹಕರಿಗೆ ನೀಡುತ್ತಿರುವ ಅತ್ಯುತ್ತಮ ಸೇವೆಯನ್ನು ಶ್ಲಾಘಿಸಿದರು. ಸಂಘದ ಸಿಬ್ಬಂದಿಗಳ ಉತ್ತಮ ಕಾರ್ಯವೈಖರಿ, ಗ್ರಾಹಕರೊಂದಿಗೆ ಹೊಂದಿರುವ ಆತ್ಮೀಯ ಬಾಂಧವ್ಯ ಹಾಗೂ ಸೇವಾ ಮನೋಭಾವನೆ ಮೆಚ್ಚುವಂತದ್ದು ಎಂದು ತಿಳಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಭಗೀರಥ ಜಿ. ಅವರು ಮಾತನಾಡಿ, ನಮ್ಮ ಸಹಕಾರ ಸಂಘವು ಕೇವಲ ಬ್ಯಾಂಕಿಂಗ್ ಮತ್ತು ಹಣಕಾಸು ವ್ಯವಹಾರಗಳಿಗೆ ಮಾತ್ರ ಸೀಮಿತವಾಗಿರದೆ, ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಮಾಜದ ಅಭಿವೃದ್ಧಿಯಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಗ್ರಾಹಕರ ವಿಶ್ವಾಸವೇ ಸಂಘದ ಬೆಳವಣಿಗೆಯ ಪ್ರಮುಖ ಶಕ್ತಿಯಾಗಿದ್ದು, ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಉತ್ತಮ ಸೇವೆ ನೀಡುವ ಸಂಕಲ್ಪವನ್ನು ಹೊಂದಿದ್ದೇವೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಜಗೋಳಿ ಬಿಲ್ಲವ ಸಂಘದ ಅಧ್ಯಕ್ಷ ಭಾಸ್ಕರ ಎಸ್. ಪೂಜಾರಿ, ಕುಷ್ಮಾ‌ಂಡಿನಿ ಗ್ರೂಪ್‌ನ ಮಾಲಕ ಮಹಾವೀರ ಜೈನ್, ಮಾಳ ಕೆರ್ವಾಶೆ ವವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಅನಿಲ್ ಎಸ್. ಪೂಜಾರಿ, ಉದ್ಯಮಿ ಕೆ. ವಿಶ್ವನಾಥ ಪ್ರಭು ಕಡಾರಿ, ಕಟ್ಟಡ ಮಾಲೀಕ ಪ್ರಶಾಂತ್ ಪ್ರಭು ಹಾಗೂ ಬಜಗೋಳಿ ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ರಕ್ಷಿತಾ ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ಜಗದೀಶ್ಚಂದ್ರ ಡಿ.ಕೆ ಸ್ವಾಗತಿಸಿದರು. ವಿಶೇಷಾಧಿಕಾರಿ ಯಂ ಮೋನಪ್ಪ ಪೂಜಾರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ಥ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕುಪ್ಪೆಪದವು ಶಾಖಾ ವ್ಯವಸ್ಥಾಪಕರಾದ ಪ್ರವೀಣ ಪೂಜಾರಿ ವಂದಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರಾದ ಸುಜಿತಾ ವಿ. ಬಂಗೇರ, ತನುಜಾ ಶೇಖರ್, ಚಂದ್ರಶೇಖರ್, ಡಾ. ರಾಜಾರಾಮ ಕೆ.ಬಿ., ಗಂಗಾಧರ ಮಿತ್ತಮಾರು ಹಾಗೂ ಚಿದಾನಂದ ಪೂಜಾರಿ ಎಲ್ದಕ್ಕ ಉಪಸ್ಥಿತರಿದ್ದರು.

ಬಜಗೋಳಿ ಶಾಖೆಯ ಪ್ರಭಾರ ಶಾಖಾ ವ್ಯವಸ್ಥಾಪಕ ಸುರಜ್ ಜೆ ಸಾಲ್ಯಾನ್ ಸೇರಿದಂತೆ ಕೇಂದ್ರ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ವರ್ಗ, ಇತರ ಶಾಖೆಯ ಶಾಖಾ ವ್ಯವಸ್ಥಾಕರು ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗ, ಗ್ರಾಹಕರು ಮತ್ತು ಸ್ಥಳೀಯ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related posts

ಮೂರನೇ ದಿನದ ಕಾರ್ಯಾಚರಣೆಗೆ ಎಸ್.ಐ.ಟಿ ಅಧಿಕಾರಿಗಳ ಜೊತೆ ನೇತ್ರಾವತಿಗೆ ಬಂದ ದೂರುದಾರ

Suddi Udaya

ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆ ವತಿಯಿಂದ ಉಜಿರೆಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಜಾತ್ರಾಮಹೋತ್ಸವ: 25 ಸಾವಿರಕ್ಕೂ ಹೆಚ್ಚಿನ ಮಹಿಳೆಯರಿಂದ ಅಮ್ಮನ ಮಡಿಲ ಪ್ರಸಾದ ಸ್ವೀಕಾರ

Suddi Udaya

ನಾರಾವಿ ಮತ್ತು ಕುತ್ಲೂರು ಬಿಜೆಪಿ ಶಕ್ತಿಕೇಂದ್ರದ ಅಭ್ಯಾಸವರ್ಗ ಕಾರ್ಯಕ್ರಮ

Suddi Udaya

ಬೆಂಗಳೂರಿನಲ್ಲಿ ನಡೆದ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ತೋಟತ್ತಾಡಿ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

Suddi Udaya

ಶಾಂತಿವನದಲ್ಲಿ 8ನೇ ರಾಷ್ಟ್ರೀಯ ನಿಸರ್ಗೋಪಚಾರ ದಿನಾಚರಣೆ

Suddi Udaya
error: Content is protected !!