ಮಿತ್ತಬಾಗಿಲು ಗ್ರಾಮದಲ್ಲಿ ಕಾಡಾನೆ ದಾಳಿ ಮಾಡಿ, ಅಪಾರ ಕೃಷಿ ಹಾನಿಗೊಳಿಸಿದ ಘಟನೆ ನ.6ರಂದು ತಡರಾತ್ರಿ ನಡೆದಿದೆ.
ನ.6ರಂದು ತಡರಾತ್ರಿ ಕಲ್ಲೋಲ್ಲೆಯ ಸತೀಶ್ ಗೌಡರ ಮನೆಯ ಬಳಿ ಮತ್ತು ಅವರ ತೋಟಕ್ಕೆ ಹಾಗೂ ಗುತ್ತು ಮನೆಯ ಪದ್ಮರಾಜ್ ಶೆಟ್ಟಿಯವರ ತೋಟಕ್ಕೆ ಕಾಡಾನೆಗಳು ಲಗ್ಗೆ ಇಟ್ಟು ಅಡಿಕೆ ಮರ ತೆಂಗಿನ ಗಿಡ, ಬಾಳೆ ಗಿಡಗಳನ್ನು ಧ್ವಂಸಗೊಳಿಸಿದೆ. ಕಾಡಾನೆಯ ದಾಳಿಯಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಮಿತ್ತಬಾಗಿಲು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವಿನಯಚಂದ್ರ ಎಸ್. ಸ್ಥಳಕ್ಕೆ ಭೇಟಿ ನೀಡಿದರು.















