ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಪ್ರಸಕ್ತ ಸಾಲಿನ ತಿರುಗಾಟದ ಸೇವೆಯಾಟ ನ.12 ಗುರುವಾರ ಶ್ರೀ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ಪ್ರಾರಂಭಗೊಳ್ಳಲಿದೆ.
ನ 28 ರವರೆಗೆ ಪ್ರತಿ ರಾತ್ರಿ ಕ್ಷೇತ್ರದಲ್ಲಿ ಸೇವಾರ್ಥಿಗಳ ಸೇವಾ ಬಯಲಾಟ ಪ್ರದರ್ಶನಗೊಂಡು , ನ 29 ರಂದು ಶ್ರೀ ಮಹಾಗಣಪತಿ ದೇವರ ದಿಗ್ವಿಜಯ ಯಾತ್ರೆಯ ವಾರ್ಷಿಕ ತಿರುಗಾಟ ಪ್ರಾರಂಭಿಸಲಿದೆ. ಮುಂದಿನ ಮೇ 23 ರವರೆಗೆ ಕರಾವಳಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಸೇವೆಯ ಪ್ರದರ್ಶನ ನಡೆಯಲಿದ್ದು ಮೇ 24 ಪತ್ತನಾಜೆ ಯಂದು ಮೇಳದ ವಾರ್ಷಿಕ ತಿರುಗಾಟ ಕ್ಷೇತ್ರದಲ್ಲಿ ಸಮಾಪನಗೊಳ್ಳಲಿದೆ.
ನ 12 ರಂದು ರಾತ್ರಿ 7 ರಿಂದ 12 ರವರೆಗೆ ಪ್ರಥಮ ಸೇವೆಯಾಟದಂಗವಾಗಿ ಕ್ಷೇತ್ರದಲ್ಲಿ “ಪಾಂಡವಾಶ್ವಮೇಧ “ಪೌರಾಣಿಕ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಲಿದೆ .ಯಕ್ಷಗಾನ ಕಲಾಭಿಮಾನಿಗಳು ಪ್ರೋತ್ಸಾಹಿಸುವಂತೆ ಕ್ಷೇತ್ರದ ಯಕ್ಷಗಾನ ಮಂಡಳಿಯ ಪ್ರಕಟಣೆ ತಿಳಿಸಿದೆ.















