ಬೆಳ್ತಂಗಡಿ: ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಸಂಸ್ಥೆಯ ಆಕಾಶ್ ಮಾಸಿಕ ಉಳಿತಾಯ ಯೋಜನೆಯ ಪ್ರಥಮ ಅದೃಷ್ಟ ಕೂಪನ್ ಡ್ರಾ ನ. 10ರಂದು ನಡೆಯಿತು. ಬೆಳ್ತಂಗಡಿ ನಗರದ ಖ್ಯಾತ ನ್ಯಾಯವಾದಿ ಶಶಿಕಿರಣ್ ಜೈನ್ ಅವರು ಅದೃಷ್ಟ ಕೂಪನ್ ಡ್ರಾ ನಡೆಸಿಕೊಟ್ಟರು.
ಕಾರ್ಯಕ್ರಮಕ್ಕೆ ಶ್ರೀಮತಿ ರಶ್ಮಿತಾ ಸ್ವಾಗತ ಕೋರಿದರು. ಸಂಸ್ಥೆಯ ಮಾಲಕರಾದ ಅಲ್ಫೋನ್ಸ್ ಫ್ರಾಂಕೋ, ಮ್ಯಾನೇಜರ್ ಲ್ಯಾನ್ಸಿ ಡಿಸೋಜಾ, ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಬೆಳ್ತಂಗಡಿ ಶಾಖಾ ವ್ಯವಸ್ಥಾಪಕ ಲೋಹಿತ್ ಕುಮಾರ್, ಪಿಆರ್‌ಒ ಅಮೀನಾ ಬಿ. ಶಬನಾ ಹಾಗೂ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು. ಅಬ್ದುಲ್ ಖಾದರ್ ನಾವೂರು ಕಾರ್ಯಕ್ರಮ ನಿರೂಪಿಸಿ, ಯಶೋಧಾ ವಂದಿಸಿದರು.
ಬಹುಮಾನ ವಿಜೇತರು:ಪ್ರಥಮ ಬಹುಮಾನ: 32 ಇಂಚಿನ LED ಟಿವಿ – ಕಾರ್ಡ್ ಸಂಖ್ಯೆ 109ರ ವೇದಾಂತ್,ಸಮಾಧಾನಕರ ಬಹುಮಾನ: ರೋನಾಲ್ಡ್ ಪಿಂಟೋ ಮತ್ತು ಮಹಾಬಲ ದೇವಾಡಿಗ ಪ್ರಶಸ್ತಿ ಪಡೆದುಕೊಂಡರು.
ವಿಜೇತರಿಗೆ ಸಂಸ್ಥೆಯ ಮಾಲಕ ಅಲ್ಫೋನ್ಸ್ ಫ್ರಾಂಕೋ ಅಭಿನಂದನೆ ಸಲ್ಲಿಸಿದರು.















