November 13, 2026
ಅಪರಾಧ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ರೂ2.41 ಲಕ್ಷ ಮೌಲ್ಯದ ವಿದ್ಯುತ್ ಸಾಮಗ್ರಿಗಳ ಕಳವು: ಪ್ರಕರಣ ದಾಖಲು

ಬೆಳ್ತಂಗಡಿ : ಉಜಿರೆ ಸಮೀಪ ನಿಡಿಗಲ್ ನಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಸಂಗ್ರಹಿಸಿಡಲಾಗಿದ್ದ ಸುಮಾರು 2,41,500 ಮೌಲ್ಯದ ವಿದ್ಯುತ್ ಸಾಮಗ್ರಿಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.

ಮೊಗ್ರೋಡಿ ಕಂಪೆನಿಯ ಕಲ್ಮಂಜ ನಿಡಿಗಲ್ ಯಾರ್ಡ್ ಇನ್‌ಚಾರ್ಜ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಬೆಳಾಲು ಗ್ರಾಮದ ರಂಜನ್ (24) ಎಂಬವರು ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದು ಅದರಂತೆ ಪ್ರಕರಣ ದಾಖಲಿಸಲಾಗಿದೆ.

ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ನಿಡಿಗಲ್ ಪ್ರದೇಶದಲ್ಲಿ ಕಂಪೆನಿಯ ಯಾರ್ಡ್‌ನಲ್ಲಿ 33 ಕೆವಿ ವಿದ್ಯುತ್ ಮಾರ್ಗ ಸ್ಥಳಾಂತರಿಸುವ ಸಂದರ್ಭದಲ್ಲಿ ಕಳಚಲಾಗಿದ್ದ ಕೊಯೋಟ್ ವಾಹಕ ಹಾಗೂ ಕಬ್ಬಿಣದ ಸಾಮಗ್ರಿಗಳನ್ನು ಸಂಗ್ರಹಿಸಿಡಲಾಗಿತ್ತು. ನ.9ರಂದು ಸಾಮಗ್ರಿಗಳು ಸ್ಥಳದಲ್ಲಿದ್ದುದನ್ನು ಗಮನಿಸಿದ್ದು ನ.11ರಂದು ಬೆಳಿಗ್ಗೆ ಸುಮಾರು 8 ಗಂಟೆಗೆ ಕೆಲಸಕ್ಕೆ ಬಂದಾಗ ಯಾರ್ಡ್‌ನ ಕಂಟೈನರ್ ಸಮೀಪ ಸಂಗ್ರಹಿಸಿಟ್ಟಿದ್ದ ವಿದ್ಯುತ್ ಸಾಮಗ್ರಿಗಳು ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ.

ಬಳಿಕ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ನ.10ರ ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಪಿಕಪ್ ವಾಹನದಲ್ಲಿ ಬಂದ ಮೂವರು ಅಪರಿಚಿತರು ಸಾಮಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡುಬಂದಿದೆ. ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನ.11 ರಂದು ಕಲಂ 303(2) BNS-2023ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

ಮರೋಡಿ ಶ್ರೀ ಉಮಾಮಹೇಶ್ವರ ದೇವರಿಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕ: ವೈಭವಯುತ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ, ಗಮನ‌ ಸೆಳೆದ ಕುಣಿತಾ ಭಜನೆ

Suddi Udaya

ಇಂದಬೆಟ್ಟು: ದಿ| ತುಷಾರ್ ರಿಗೆ ಹಿತೈಷಿಗಳಿಂದ ನುಡಿನಮನ

Suddi Udaya

ಎಲ್‌.ಪಿ.ಜಿ ಸಿಲಿಂಡರ್‌ ದರ 100ರೂ ಕಡಿತ

Suddi Udaya

ಒಕ್ಕಲಿಗ ಗೌಡರ ಕ್ರಿಕೆಟ್ ಪ್ರೀಮಿಯರ್ ಲೀಗ್: ರಂಜನ್ ಗೌಡ ಮಾಲಿಕತ್ವದ ಕೆಂಪೇಗೌಡ ಬ್ರಿಗೇಡಿಯರ್ಸ್ ಪ್ರಥಮ

Suddi Udaya

ಶಿಬಾಜೆಯ ದಲಿತ ಯುವಕ ಶ್ರೀಧರ್ ಸಾವಿನ ಪ್ರಕರಣದ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿ ಡಿ.ಎಸ್.ಎಸ್‌ನಿಂದ ಧರ್ಮಸ್ಥಳ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ

Suddi Udaya

ಮಂಗಗಳ ಹಾವಳಿಯಿಂದ ತತ್ತರಿಸಿದ ನಿಡ್ಲೆ ಗ್ರಾಮಸ್ಥರು: ನಿಡ್ಲೆ ಜನಸ್ಪಂದನ ಸಭೆಯಲ್ಲಿ ಅರಣ್ಯ ಇಲಾಖೆ ವಿರುದ್ಧ ಜನರ ಆಕ್ರೋಶ

Suddi Udaya
error: Content is protected !!