November 13, 2026
Uncategorizedಅಪರಾಧ ಸುದ್ದಿಕರಾವಳಿಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿವರದಿಸರ್ಕಾರಿ ಇಲಾಖಾ ಸುದ್ದಿ

ಸೌಜನ್ಯ ಪ್ರಕರಣ: ಎಸ್.ಐ.ಟಿ ತನಿಕೆ ಚುರುಕು : ಡಾ. ಮಹಾಬಲ ಶೆಟ್ಟಿ, ವಾರ್ಡ್ ಬಾಯ್ ಅನಿಲ್, ಕುಸುಮಾವತಿ ವಿಚಾರಣೆ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿ ಕು.ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ಚುರುಕುಗೊಂಡಿದೆ. ಪ್ರಕರಣದ ಹಲವು ಆಯಾಮಗಳನ್ನು ಪರಿಶೀಲಿಸುತ್ತಿರುವ ವಿಶೇಷ ತನಿಖಾ ತಂಡ, ಹಳೆಯ ತನಿಖೆಯ ಪ್ರಮುಖ ಸಾಕ್ಷಿಗಳು ಹಾಗೂ ವೈದ್ಯಕೀಯ ಪರೀಕ್ಷೆಗೆ ಸಂಬಂಧಿಸಿದ ವ್ಯಕ್ತಿಗಳ ವಿಚಾರಣೆ ನಡೆಸುತ್ತಿದೆ. ನ.12 ರಂದು ಒಂದೇ ದಿನ ಫೊರೆನ್ಸಿಕ್ ತಜ್ಞರು, ಮರಣೋತ್ತರ ಪರೀಕ್ಷೆ ವೇಳೆ ಹಾಜರಿದ್ದ ವಾರ್ಡ್ ಬಾಯ್ ಹಾಗೂ ಸೌಜನ್ಯ ತಾಯಿ ಕುಸುಮಾವತಿ ಅವರನ್ನು ವಿಚಾರಣೆ ನಡೆಸಿರುವುದು ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.

ಸಂತೋಷ್ ರಾವ್ ವೈದ್ಯಕೀಯ ವರದಿ ನೀಡಿದ್ದ ತಜ್ಞರ ವಿಚಾರಣೆ: ಪ್ರಕರಣದ ಆರೋಪಿಯಾಗಿದ್ದ ಸಂತೋಷ್ ರಾವ್‌ನ ವೈದ್ಯಕೀಯ ಪರೀಕ್ಷೆ ನಡೆಸಿದ್ದ ಫೊರೆನ್ಸಿಕ್ ತಜ್ಞ ಡಾ. ಮಹಾಬಲ ಶೆಟ್ಟಿ ಅವರನ್ನು SIT ಅಧಿಕಾರಿಗಳು ವಿಚಾರಣೆಗೆ ಕರೆದಿದ್ದರು. ಅಂದು ಸಂತೋಷ್ ರಾವ್ ದೇಹದಲ್ಲಿ 17 ಗಾಯಗಳಿದ್ದವು ಎಂದು ವೈದ್ಯಕೀಯ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆದ ಸಂದರ್ಭ, ಗಾಯಗಳ ಸ್ವರೂಪ ಹಾಗೂ ಅಂದು ನೀಡಿದ್ದ ವರದಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ. ವಿಚಾರಣೆ ಮುಗಿಸಿ ಹೊರಬಂದ ಡಾ. ಮಹಾಬಲ ಶೆಟ್ಟಿ, SIT ವಿಚಾರಣೆಗೆ ಕರೆದಿದ್ದರಿಂದ ಬಂದಿದ್ದೇನೆ ಎಂದು ತಿಳಿಸಿ ಹೆಚ್ಚಿನ ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ.

ಮರಣೋತ್ತರ ಪರೀಕ್ಷೆ ವೇಳೆ ಹಾಜರಿದ್ದ ವಾರ್ಡ್ ಬಾಯ್ ವಿಚಾರಣೆ: ಇನ್ನು ಸೌಜನ್ಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದ ಸಂದರ್ಭದಲ್ಲಿ ವೈದ್ಯರಿಗೆ ಸಹಾಯ ಮಾಡಿದ್ದ ವಾರ್ಡ್ ಬಾಯ್ ಅನಿಲ್ ಕುಮಾರ್ ಅವರನ್ನೂ SIT ವಿಚಾರಣೆ ನಡೆಸಿದೆ. ಅಂದು ನಡೆದ ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆ, ಶವದ ಪರಿಶೀಲನೆ ಹಾಗೂ ಇತರ ವಿಚಾರಗಳ ಕುರಿತು ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ. ವಿಚಾರಣೆ ಬಳಿಕ ಮಾತನಾಡಿದ ಅನಿಲ್ ಕುಮಾರ್, ಮರಣೋತ್ತರ ಪರೀಕ್ಷೆ ವೇಳೆ ಶವವನ್ನು ಕತ್ತರಿಸಿದ್ದ ವಿಚಾರ ಸೇರಿದಂತೆ ತಮಗೆ ತಿಳಿದಿರುವ ಮಾಹಿತಿಯನ್ನು ಅಧಿಕಾರಿಗಳ ಮುಂದೆ ಹೇಳಿಕೆ ನೀಡಿರುವುದಾಗಿ ತಿಳಿಸಿದ್ದಾರೆ.

ಸೌಜನ್ಯ ತಾಯಿ ಕುಸುಮಾವತಿಗೂ SIT ಬುಲಾವ್: ಇದೇ ವೇಳೆ ಸೌಜನ್ಯ ತಾಯಿ ಕುಸುಮಾವತಿ ಅವರಿಗೂ SIT ನೋಟಿಸ್ ನೀಡಿತ್ತು. ಅದರಂತೆ ಅವರು ಮಂಗಳೂರಿನ SIT ಕಚೇರಿಗೆ ಆಗಮಿಸಿದ್ದು, ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಪ್ರಕರಣದ ಹಿನ್ನೆಲೆ ಹಾಗೂ ಕುಟುಂಬಕ್ಕೆ ತಿಳಿದಿರುವ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.ಒಟ್ಟಿನಲ್ಲಿ, ವೈದ್ಯಕೀಯ ವರದಿ, ಮರಣೋತ್ತರ ಪರೀಕ್ಷೆ ಮತ್ತು ಹಿಂದಿನ ತನಿಖೆಯ ಪ್ರಕ್ರಿಯೆಗಳ ಮೇಲೆ SIT ವಿಶೇಷ ಗಮನಹರಿಸಿದೆ. ಹಳೆಯ ಸಾಕ್ಷ್ಯಗಳನ್ನು ಮರುಪರಿಶೀಲಿಸುತ್ತಿರುವ ಅಧಿಕಾರಿಗಳ ಮುಂದಿನ ನಡೆ ಹಾಗೂ ತನಿಖೆಯಲ್ಲಿ ಹೊರಬರುವ ಹೊಸ ಸಂಗತಿಗಳ ಬಗ್ಗೆ ಕುತೂಹಲ ಮೂಡಿದೆ.

Related posts

ನಾಳೆ(ಜ.31) ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ “ಭಾಸ್ಕರ ಪರ್ವ”: ಪ್ರಾಧ್ಯಾಪಕ ಡಾ.ಭಾಸ್ಕರ ಹೆಗಡೆಗೆ ಅಭಿನಂದನೆ

Suddi Udaya

ಉಜಿರೆ ವಲಯದ ಬದನಾಜೆಯಲ್ಲಿ ಪ್ರಗತಿ-ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ತ್ರೈಮಾಸಿಕ ಸಭೆ

Suddi Udaya

ಸೆ.25 -ಅ.8: ನಾವೂರುನಲ್ಲಿ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರ

Suddi Udaya

ಮೇಲಂತಬೆಟ್ಟು : ಮೇಯಲು ಬಿಟ್ಟ ರೂ.10 ಸಾವಿರ ಮೌಲ್ಯದ ಹಸು ಕಳವು: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಕಡಿರುದ್ಯಾವರ ಗ್ರಾಮ ಪಂಚಾಯತಿನಲ್ಲಿ ನೂತನ ಗ್ರಂಥಾಲಯ ಉದ್ಘಾಟನೆ

Suddi Udaya
error: Content is protected !!