November 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಪೆರ್ಲ-ಬೈಪಾಡಿ ಶ್ರೀ ಸಿದ್ಧಿವಿನಾಯಕ ಯುವಕ ಮಂಡಲ ವತಿಯಿಂದ ಸ್ವಚ್ಛತಾ ಕಾರ್ಯ

ಬಂದಾರು :ಬಂದಾರು ಗ್ರಾಮ ಪೆರ್ಲ-ಬೈಪಾಡಿ ಶ್ರೀ ಸಿದ್ಧಿವಿನಾಯಕ ಯುವಕ ಮಂಡಲ ವತಿಯಿಂದ ಸೋಣಕುಮೇರು ಸೇತುವೆ ಬಳಿಯಿಂದ ಬೈಪಾಡಿವರೆಗಿನ ಮುಖ್ಯರಸ್ತೆಯ ಬದಿಯ ಇಕ್ಕೆಲದಲ್ಲಿದ್ದ ಗಿಡ ಗಂಟಿಗಳ ತೆರವಿನ ಸ್ವಚ್ಛತಾ ಕಾರ್ಯ ನ.11 ರಂದು ನಡೆಯಿತು.

ರಸ್ತೆಯ ಬದಿಯಲ್ಲಿ ದಟ್ಟವಾಗಿ ಹುಲ್ಲು ಬೆಳೆದಿರುವ ಪರಿಣಾಮ ನಡೆದುಕೊಂಡು ಹೋಗುವ ಶಾಲಾ ವಿದ್ಯಾರ್ಥಿಗಳಿಗೆ, ನಾಗರಿಕರಿಗೆ ವಾಹನ ಸವಾರರಿಗೆ ತೊಂದರೆಯಾಗುತ್ತಿರುವುದನ್ನು ಮನಗಂಡು ಯುವಕ ಮಂಡಲದಿಂದ ಶ್ರಮದಾನದ ಮೂಲಕ ಹುಲ್ಲು ಕತ್ತರಿಸುವ ಕೆಲಸವನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಶಶಿಧರ ಬಾಲಂಪಾಡಿ, ಸಂಪತ್ ಕರ್ಲೊಡಿ , ಲೋಹಿತ್ ಸೋಣಕುಮೇರು, ಪ್ರವೀಣ್ ಬಾಲಂಪಾಡಿ , ನವೀನ್ ಪ್ರಕಾಶ್ ಕರ್ಲೊಡಿ, ಕುಶಾಲಪ್ಪ ಸೋಣಕುಮೇರು, ರಾಧಾಕೃಷ್ಣ ಪಾರೋಟ್ಟು, ಸತೀಶ್ ಬಾಲಾಂಪಾಡಿ, ಚಿದಾನಂದ ಬಾಲಂಪಾಡಿ, ಚೀತ್ರೇಶ್ ಬಾಲಂಪಾಡಿ, ಕೀರ್ತನ್ ಬಾಲಾಂಪಾಡಿ , ರಾಕೇಶ್ ಸೋಣಕುಮೇರು ಭಾಗವಹಿಸಿದ್ದರು. ಊರಿನ ಪ್ರಮುಖರು ಹುಲ್ಲು ತೆಗೆಯುವ ಮಷೀನ್ ಗೆ ಪೆಟ್ರೋಲ್, ಹಾಗೂ ಶ್ರಮದಾನಿಗಳಿಗೆ ಜ್ಯೂಸ್, ಸಿಹಿತಿಂಡಿ ನೀಡಿ ಸಹಕರಿಸಿದರು. ಈ ಕಾರ್ಯಕ್ಕೆ ನಾಗರಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.

Related posts

ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ನಾಗಬನದಲ್ಲಿ ನಾಗದೇವರಿಗೆ ಕ್ಷೀರಾಭಿಷೇಕ, ವಿಶೇಷ ಪೂಜೆ

Suddi Udaya

ಮತ್ಸ್ಯ ತೀರ್ಥ ಶಿಶಿಲ ದೇವಸ್ಥಾನಕ್ಕೆ ಹೆಗ್ಗಡೆ ದಂಪತಿ ಭೇಟಿ

Suddi Udaya

ಕೊಕ್ಕಡ: EduNest ಅಕಾಡೆಮಿ ಕೋಚಿಂಗ್ ಕೇಂದ್ರ ಉದ್ಘಾಟನೆ

Suddi Udaya

ಎಸ್‌.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯ ಕಿಂಡರ್ಗಾರ್ಟನ್ ವಿದ್ಯಾರ್ಥಿಗಳಿಗಾಗಿ ರೊಬೋಟ್ “ಶ್ರುತಿ” ಜೊತೆಗೆ ವಿಶೇಷ ಸಂವಹನ ಕಾರ್ಯಕ್ರಮ

Suddi Udaya

ಪ್ರಧಾನಿ ನರೇಂದ್ರ ಮೋದಿ ಜನ್ಮದಿನ: ಮಾಲಾಡಿ ಸೋಣಂದೂರು ಶಕ್ತಿ ಕೇಂದ್ರದ ವತಿಯಿಂದ ಪುಂಜಾಲಕಟ್ಟೆ ಶ್ರೀ ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜೆ

Suddi Udaya

ಲಾಯಿಲ: ಶ್ರೀ ಮಹಮ್ಮಾಯಿ ಅಮ್ಮನವರ ಮಾರಿ ಪೂಜೋತ್ಸವ

Suddi Udaya
error: Content is protected !!