ನಿಡ್ಲೆ: ಇಲ್ಲಿಯ ಬಾರೆಗುಡ್ಡೆ ನಿವಾಸಿ ಬಿಜೆಪಿಯ ಹಿರಿಯ ಕಾರ್ಯಕರ್ತ ಕುಶಾಲಪ್ಪ ಗೌಡ (65ವ) ಅಸೌಖ್ಯದಿಂದ ನ.12ರಂದು ನಿಧನರಾದರು.
ನಿಡ್ಲೆ ಗ್ರಾಮ ಪಂಚಾಯತ್ ನ ಮಾಜಿ ಸದಸ್ಯರಾಗಿ, ಬೂಡುಜಾಲು ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಇವರು ವಿವಿಧ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ ಬೇಬಿ, ಪುತ್ರರಾದ ಗಿರೀಶ್, ವಸಂತ್, ಪುತ್ರಿ ವನಿತಾ, ಬಂಧು ಬಳಗವನ್ನು ಅಗಲಿದ್ದಾರೆ.















