ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯಲ್ಲಿ ವೈದ್ಯೆ ಡಾ.ಭಾಷಿಣಿ ಮಾತನಾಡಿ ಮಕ್ಕಳ ದಿನಾಚರಣೆ ಮಹತ್ವ,ವಿದ್ಯಾರ್ಥಿಗಳ ಮನಸ್ಸು ಹೇಗೆ ಇರಬೇಕು,ಆಹಾರದ ಸೇವನೆ ಹೇಗಿರಬೇಕು, ಸಮತೋಲಿತ ಆಹಾರ ಅಂದರೆ ಏನು, ವ್ಯಾಯಾಮ ಹೇಗಿರಬೇಕು ಎಂಬಿತ್ಯಾದಿ ಮಕ್ಕಳ ಜೀವನಕ್ಕೆ ಅಗತ್ಯವಾದ ಅಂಶಗಳನ್ನು ವಿವರಿಸಿದರು.

ಶಾಲಾ ಶಿಕ್ಷಕರಿಂದ ವಿವಿಧ ಸಾಂಸ್ಕೃತಿಕ ಕಾರ್ಯಗಳನ್ನು ನೀಡಿ ವಿದ್ಯಾರ್ಥಿಗಳನ್ನು ಮನರಂಜಿಸಿದರು.
ಮಕ್ಕಳ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನೂ ನಡೆಸಲಾಗಿತ್ತು.ಅದರಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡಿ ಪ್ರೋತ್ಸಾಹಿಸಲಾಯಿತು.

ಸಹ ಶಿಕ್ಷಕಿ ರೇಖಾ ನಿರೂಪಿಸಿ, ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ ವಿ ಅವರು ಸ್ವಾಗತಿಸಿ, ದೀಕ್ಷಾ ಅತಿಥಿಗಳ ಕಿರುಪರಿಚಯ ಮಾಡಿ, ಸಮ್ಮತಿ ಬಹುಮಾನ ವಿತರಣಾ ಪಟ್ಟಿ ಓದಿ, ರಮಾ ರಾಜೇಶ್ ಧನ್ಯವಾದವಿತ್ತರು.














