ಬೆಳ್ತಂಗಡಿ: ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಸಂಸ್ಥೆಯು 32ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಸಂಭ್ರಮದ ಪ್ರಯುಕ್ತ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ವಿಶೇಷ ಬಹುಮಾನ ಯೋಜನೆಯನ್ನು ಹಮ್ಮಿಕೊಂಡಿದ್ದು, ಇದರ ಪ್ರಥಮ ಬಹುಮಾನವಾದ ಐಫೋನ್ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಒಲಿವಿಯಾ ಅವರಿಗೆ ಲಭಿಸಿದೆ. ಕೂಪನ್ ಸಂಖ್ಯೆ 371ರ ಮೂಲಕ ಅವರು ಪ್ರಥಮ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಬಹುಮಾನ ವಿಜೇತರ ಆಯ್ಕೆ ಪ್ರಕ್ರಿಯೆಯನ್ನು ಬೆಳ್ತಂಗಡಿ ನಗರದ ಖ್ಯಾತ ನ್ಯಾಯವಾದಿ ಶಶಿಕಿರಣ್ ಜೈನ್ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ವರ್ತಕ ಸಂಘದ ಅಧ್ಯಕ್ಷ ಶಶಿಧರ್ ಪೈ,ಸುದ್ದಿ ಉದಯ ಪತ್ರಿಕೆಯ ಮುಖ್ಯಸ್ಥರಾದ ಸಂತೋಷ್ ಪಿ. ಕೋಟ್ಯಾನ್ ಬಳಂಜ ಭಾಗವಹಿಸಿದರು.ಸಂಸ್ಥೆಯ ಮಾಲಕ ಅಲ್ಫೋನ್ಸ್ ಫ್ರಾಂಕೋ ಉಪಸ್ಥಿತರಿದ್ದರು.
ಸಂಸ್ಥೆಯ ಮ್ಯಾನೇಜರ್ ಲ್ಯಾನ್ಸಿ ಡಿಸೋಜ, ಪಿಆರ್‌ಒ ಅಮೀನಾ ಬಿ. ಶಬನಾ,ಇಂಜಿನಿಯರ್ ರಾಹುಲ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಮಾಧಾನಕರ ಬಹುಮಾನ ವಿಜೇತರು:1. ಭುವನ್ ಜೈನ್ – 383,2. ಪ್ರತಿಭಾ – 021,3. ಫಾತಿಮತ್ ಶಾಹಿನಾ – 151,4. ಯಕ್ಷಿತಾ – 025,5. ಅಫ್ರಿನಾ – 111,6. ಗುಣಶ್ರೀ – 193,7. ಸೃಜನ್ಯ – 147,8. ಶರಣ್ಯ ವಿ. ನಾಯ್ಕ್ – 017,9. ಲಿಖಿತ – 310,10. ಯಕ್ಷಿತ್ – 343
ಬಹುಮಾನ ವಿತರಣಾ ಸಮಾರಂಭವು ನವೆಂಬರ್ 16ರಂದು ಸೋಮವಾರ ಸಂಜೆ 4 ಗಂಟೆಗೆ ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಸಂಸ್ಥೆಯಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.














