November 21, 2026
ಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ-ದೂರದರ್ಶಿತ್ವ, ಸಾಮರಸ್ಯ, ಮಹಿಳಾ ಸಬಲೀಕರಣದ ಜೀವನ ಮೌಲ್ಯ ನೀಡಿದ ಸುಬ್ಬರಾವ್ ಪೈ: ರಂಗನಾಥ ಭಟ್

ಬೆಳ್ತಂಗಡಿ: ಅನ್ಯರಲ್ಲಿನ ಒಳ್ಳೆಯತನವನ್ನು ಗುರುತಿಸುವ ಹೃದಯವಂತಿಕೆ, ದೂರದರ್ಶಿತ್ವದ ಮೌಲ್ಯ, ಮಹಿಳಾ ಸಬಲೀಕರಣದ ಕಾಳಜಿ ಮತ್ತು ವಿವಾದಗಳನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಂಡು ಸಾಮರಸ್ಯದ ಬಾಳ್ವೆ ನಡೆಸುವ ಜೀವನ ಮೌಲ್ಯಗಳು ಕೆನರಾ ಶಿಕ್ಷಣ ಸಂಸ್ಥೆಗಳು ಮತ್ತು ಕೆನರಾ ಬ್ಯಾಂಕ್ ಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಜೀವನದ ಸಂದೇಶಗಳಾಗಿವೆ. ಈ ಮೌಲ್ಯಗಳು ನಮ್ಮೆಲ್ಲರಿಗೂ ಆದರ್ಶ ಮತ್ತು ಅನುಕರಣೀಯ ಎಂದು ಕೆನರಾ ಇಂಜಿನಿಯರಿಂಗ್ ಕಾಲೇಜಿನ ಸಂಚಾಲಕ ಎಂ. ರಂಗನಾಥ ಭಟ್ ನುಡಿದರು. ಅವರು ಮಂಗಳೂರು ಕೆನರಾ ಇಂಜಿನಿಯರಿಂಗ್ ಕಾಲೇಜಿನ ಡಾ. ಪಿ.ದಯಾನಂದ ಪೈ ಸತೀಶ್ ಪೈ ಅಡಿಟೋರಿಯಂನಲ್ಲಿ ಕೆನರಾ ಶಿಕ್ಷಣ ಸಂಸ್ಥೆಗಳು ಮತ್ತು ಕೆನರಾ ಬ್ಯಾಂಕ್ ಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಪೈ ಅವರ 174 ನೇ ಜನ್ಮ ದಿನಾಚರಣೆಯ ಅಂಗವಾಗಿ ನಡೆದ ಸೇವಾ ಸಂಭ್ರಮ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾತನಾಡಿದರು.

ಸಮಾರಂಭದಲ್ಲಿ ಸ್ಥಾಪಕರ ದಿನಾಚರಣೆಯ ಅಂಗವಾಗಿ ನಡೆದ ವೈದ್ಯಕೀಯ ಶಿಬಿರ ಸುಖಿನೋ ಭವವನ್ನು ಉದ್ಘಾಟಿಸಲಾಯಿತು. ಕೆಎಂಸಿ (KMC) ಕಮ್ಯುನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನ ಮಿತ್ರ, ಕಾಲೇಜಿನ ಪ್ರಾಂಶುಪಾಲ ಡಾ. ಮಹೇಶ್ ಪ್ರಸನ್ನ ಉಪಸ್ಥಿತರಿದ್ದರು.

ಕಾಲೇಜಿನ ಸಹ ಪ್ರಾಧ್ಯಾಪಕಿ ಯೋಜನಾ ಕೆ. ಎಸ್ ಅವರ ಸ್ವಾಗತ ನೃತ್ಯದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ
ಸಂಸ್ಥಾಪಕರ ಕುರಿತಾದ ಕಿರುಚಿತ್ರ ಪ್ರದರ್ಶನ ನಡೆಯಿತು. ಶ್ರೀ ರಾಜರಾಜೇಶ್ವರಿ ಸರ್ಕಾರಿ ಪ್ರೌಢಶಾಲೆ, ಪೊಳಲಿ ಮತ್ತು ಸರ್ಕಾರಿ ಪ್ರೌಢಶಾಲೆ, ಕೊಡ್ಮಣ್ ಇಲ್ಲಿನ ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡಿದ್ದರು. ಈ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳ ಸ್ಟೇಷನರಿ ಕಿಟ್‌ಗಳ ವಿತರಣೆ ನಡೆಯಿತು.

ಕಾಲೇಜಿನ ಆವರಣದಲ್ಲಿ ಸರಕಾರಿ ಶಾಲಾ ಮಕ್ಕಳಿಗಾಗಿ ಕಲಿಕೆ ಮತ್ತು ಸಂವಾದಕ್ಕೆ ಅವಕಾಶ ಕಲ್ಪಿಸುವ ಶಾಲಾ ಸಂಪರ್ಕ ಕಾರ್ಯಕ್ರಮ ಉಡಾನ್, ಯುವ ಮನಸ್ಸುಗಳಿಗಾಗಿ ಅನುಭವಾತ್ಮಕ ಪ್ರಾಯೋಗಿಕ ಕಲಿಕಾ ಚಟುವಟಿಕೆಗಳು, ರಸಾಯನಶಾಸ್ತ್ರ ಪ್ರಯೋಗಗಳು, ಎಐ ಪರಿಕರಗಳು ಮತ್ತು ಡ್ರೋನ್ ಪ್ರದರ್ಶನಗಳನ್ನು ಒಳಗೊಂಡ ಸ್ಪಾರ್ಕ್ ಜರಗಿತು.

ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಯ ವತಿಯಿಂದ ರಕ್ತದಾನಿಗಳ ನೋಂದಣಿ ಅಭಿಯಾನ, ಲಿಕ್ವಿಡ್ ಲವ್ ಕಾರ್ಯಕ್ರಮವೂ ನಡೆಯಿತು. ಭೇಟಿ ನೀಡಿರುವ ಶಾಲಾ ವಿದ್ಯಾರ್ಥಿಗಳೊಂದಿಗೆ ಬಂದಿದ್ದ ಶಿಕ್ಷಕರಿಗೆ ‘ಉತ್ತಮ ಹಸಿರು ನಾಳೆಗಾಗಿ ಒಂದು ಸಸಿ’ – ವಿತರಿಸಲಾಯಿತು. ವಿದ್ಯಾರ್ಥಿನಿ ನಿಶ್ರೀನ್ ಆಲಿ ಮತ್ತು ಬಳಗದವರಿಂದ ಮನೋರಂಜನಾ ಮತ್ತು ಅದೃಷ್ಟ ಸ್ಪರ್ಧೆಗಳನ್ನು ನಡೆಸಿದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿನಿಯರಾದ ವಿನಿಶಾ ಭಟ್ ಸ್ವಾಗತಿಸಿದರು. ಅಪರ್ಣಾ ಭಟ್ ರವರು ಅಮ್ಮೆಂಬಳ ಸುಬ್ಬರಾವ್ ಪೈ ಕುರಿತ ತಮ್ಮ ಪ್ರಥಮ ಸ್ಥಾನ ಪಡೆದ ಪ್ರಬಂಧ ಮಂಡಿಸಿದರು. ಸುಹಾನಾ ರಾಣೆ ವಂದಿಸಿದರು. ತೃಪ್ತಿ ಕಾರ್ಯಕ್ರಮ ನಿರೂಪಿಸಿದರು. ಆರಂಭದಲ್ಲಿ ಗಣ್ಯರು, ವಿದ್ಯಾರ್ಥಿ ಪ್ರತಿನಿಧಿಗಳು, ಬೋಧಕ, ಬೋಧಕೇತರರು, ವಿದ್ಯಾರ್ಥಿಗಳಿಂದ ಸಂಸ್ಥಾಪಕರ ಪ್ರತಿಮೆಗೆ ಪುಷ್ಪಾರ್ಚನೆ ನಮನ ಸಲ್ಲಿಕೆ ನಡೆಯಿತು.

Related posts

ಬೆಂಗಳೂರಿನ ಬಾಷ್ ಕಂಪೆನಿಯ ತಂಡ ಸೇವಾನಿಕೇತನಕ್ಕೆ ಭೇಟಿ

Suddi Udaya

ಅಳದಂಗಡಿ ಸತ್ಯದೇವತಾ ದೈವಸ್ಥಾನದಲ್ಲಿ ಹನುಮೋತ್ಸವ ತಯಾರಿಯ ಪೂರ್ವಭಾವಿ ಸಭೆ

Suddi Udaya

‘ಕರ್ಂಗೋಲು ಕಂಗುಲು’ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ‘ಕುದ್ಕಬಚ್ಚಿರೆ’ ಕಥಾ ಸಂಕಲನ ಬಿಡುಗಡೆ

Suddi Udaya

ಅರಸಿನಮಕ್ಕಿ ಗ್ರಾ.ಪಂ.ನಿಂದ ಚರಂಡಿ ದುರಸ್ಥಿ ಕಾರ್ಯ

Suddi Udaya

ಆಪರೇಷನ್ ಸಿಂದೂರ್ ” ಯಶಸ್ವಿ: ಸೈನಿಕರಿಗೆ ಮನ್ ಶರ್ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳಿಂದ ಬಿಗ್ ಸೆಲ್ಯೂಟ್

Suddi Udaya

ಕುಕ್ಕೇಡಿ: ಮೇಸ್ತ್ರೀ ಕೆಲಸ ನಿರ್ವಹಿಸುತ್ತಿದ್ದಾಗ ಆಕಸ್ಮಿಕವಾಗಿ ಬಿದ್ದು ಯುವಕ ಸಾವು

Suddi Udaya
error: Content is protected !!