ನಾರಾವಿ: ಡಾ .ಡಿ. ವೀರೇಂದ್ರ ಹೆಗ್ಗಡೆ ಯವರ ಹುಟ್ಟುಹಬ್ಬದ ಅಂಗವಾಗಿ ನಾರಾವಿ ಸೂರ್ಯನಾರಾಯಣ ದೇವಸ್ಥಾನದಲ್ಲಿ ನಿತ್ಯ ಪೂಜೆ ಮಾಡಿಸಲಾಯಿತು .
ಕ್ಷೇತ್ರದ ಅರ್ಚಕರು ಖಾವಂದರ ಆಯುಷ್ಯ ಆರೋಗ್ಯ ಹಾಗೂ ಸರ್ವತೋಮುಖ ಅಭಿರುದ್ಧಿಗಾಗಿ ಶ್ರೀ ದೇವರಲ್ಲಿ ಪ್ರಾರ್ಥನೆ ಮಾಡಿ ಪ್ರಸಾದವನ್ನು ನೀಡಿದರು. ಈ ವೇಳೆ ಮರೋಡಿ ಬಿ ಒಕ್ಕೂಟದ ಅಧ್ಯಕ್ಷರಾದ ರಾಜು ಪೂಜಾರಿ, ವಲಯದ ಮೇಲ್ವಿಚಾರಕರಾದ ದಿವ್ಯ ಕೆ, ಎಲ್ಲಾ ಸೇವಾಪ್ರತಿನಿಧಿಗಳು ಹಾಗೂ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.
ನಂತರ ನಾರಾವಿ ಸರ್ಕಾರಿ ಉನ್ನತೀಕರಿಸಿದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹುಟ್ಟು ಹಬ್ಬದ ಅಂಗವಾಗಿ ಶಾಲಾ ಮಕ್ಕಳಿಗೆ ಸಿಹಿ ತಿಂಡಿ ವಿತರಣೆ ಮಾಡಲಾಯಿತು. ಸಭೆಯಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಅನ್ವರ್ , ಹಾಗೂ ಶಾಲಾ ಮುಖ್ಯ ಶಿಕ್ಷಕಿ ಸುಶೀಲ ಹೆಗ್ಡೆ, ಮರೋಡಿ ಬಿ ಒಕ್ಕೂಟದ ಅಧ್ಯಕ್ಷ ರಾಜು ಪೂಜಾರಿ ಹಾಗೂ ಜ್ಞಾನವಿಕಾಸ ಸಮನ್ವಯ ಅಧಿಕಾರಿ ರವಿಕಲ ಮೇಲ್ವಿಚಾರಕರು ಮತ್ತು ಸೇವಾ ಪ್ರತಿನಿಧಿಗಳು ಹಾಗೂ ಶಾಲೆಯ ಎಲ್ಲಾ ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು .
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಮಾತನಾಡಿ ಶಾಲೆಗೆ ಕ್ಷೇತ್ರದ ವತಿಯಿಂದ ಶಾಲೆಗೆ ಬಂದಿರುವಂತಹ ಡೆಸ್ಕ್ ಬೆಂಚ್ ಮತ್ತು ಅನುದಾನಗಳ ಬಗ್ಗೆ ಮಕ್ಕಳಿಗೆ ತಿಳಿಸಿದರು .













