November 25, 2026
ಗ್ರಾಮಾಂತರ ಸುದ್ದಿಧಾರ್ಮಿಕಬೆಳ್ತಂಗಡಿವರದಿ

ಶ್ರೀ ರಾಮಕ್ಷೇತ್ರ ಮಹಾ ಸಂಸ್ಥಾನ ಹರಿದ್ವಾರ ಶಾಖಾ ಮಠದ ದಶಮಾನೋತ್ಸವ

ಬೆಳ್ತಂಗಡಿ: ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್ ಇದರ ಪೀಠಾಧೀಶ 1008 ಮಹಾಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ನೇತೃತ್ವದಲ್ಲಿ ಕ್ಷೇತ್ರದ ಹರಿದ್ವಾರದ ಶಾಖಾ ಮಠ ಸಾಧನಾ ಕುಟೀರದ ದಶಮಾನೋತ್ಸವ ನ. 25ರಂದು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.

ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಮಹಂತರಾದ ವಿದ್ಯಾನಂದ ಸರಸ್ವತೀ ಮಹಾರಾಜ್, ಮಹೇಶ್‌ಪುರೀಜಿ, ಲಲಿತಾನಂದ ಗಿರೀಜಿ ಮಹಾರಾಜ್, ಹರಿಚೇತನಾನಂದಜೀ ಮಹಾರಾಜ್, ಇಂದ್ರಾನಂದ ಸರಸ್ವತೀ ಮಹಾರಾಜ್, ಗಗನದೇವ ಮಹಾರಾಜ್, ಸಹಜಾನಂದ ಸರಸ್ವತೀ ಮಹಾರಾಜ್, ಧೀರೇಂದ್ರ ಪುರಿ ಮಹಾರಾಜ್ ಎನ್ನಿತರ ಸಂತರು ವಿರಾಜಮಾನ ರಾಗಿದ್ದು ಆಶೀರ್ವಚನ ಗೈದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ವಿಧಾನ ಸಭಾ ಉಪ ಸಭಾಪತಿ ಮಾಂಕಾಳ್ ಎಸ್. ವೈದ್ಯ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ದ.ಕ. ಜಿಲ್ಲಾ ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್, ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಪುಷ್ಪಗಿರಿ, ಮಾಜಿ ಸಚಿವ ಶಿವಾನಂದ ನಾಯ್ಕ, ಮಂಗಳೂರು ಮಾಜಿ ಕಾರ್ಪೋರೇಟರ್ ಕಿರಣ್‌ಕುಮಾರ್ ಕೋಡಿಕಲ್, ಈಶ್ವರ ನಾಯ್ಕ್ ಮುರ್ಡೇಶ್ವರ, ಎಚ್. ಆರ್. ನಾಯ್ಕ್ ಕುಮುಟಾ, ರಾಜು ಪೂಜಾರಿ ಕಾಶಿಪಟ್ನ, ಜೀತೇಶ್ ಉಡುಪಿ ಮಠದ ಟ್ರಷ್ಟಿ ತುಕಾರಾಮ ಸಾಲಿಯಾನ್ ಆರ್ಲ, ಕೃಷ್ಣಪ್ಪ ಗುಡಿಗಾರ, ರವೀಂದ್ರ ಪೂಜಾರಿ ಆರ್ಲ, ಸುನಿಲ್ ಕನ್ಯಾಡಿ, ಪುರುಷೋತ್ತಮ ಧರ್ಮಸ್ಥಳ ಸೇರಿದಂತೆ ದ.ಕ., ಉಡುಪಿ, ಉ.ಕ. ದಿಂದ ಶ್ರೀಗಳ ಶಿಷ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಹೃಷಿಕೇಶದ ಗೀತಾ ಭಾರತಿಯ ಗೌರಿಶಂಕರ್ ಮೆಹತ್ ಕಾರ್ಯಕ್ರಮ ನಿರ್ವಹಿಸಿದರು. ಸಮಾರಂಭದಲ್ಲಿ ಪಲ್ಲವಿ ರಾಜು ಮತ್ತು ಬಳಗದಿಂದ ಭಜನಾ ಕಾರ್ಯಕ್ರಮ ನಡೆಯಿತು.

Related posts

ಶಾಸಕ ಹರೀಶ್ ಪೂಂಜರ ಅನುದಾನದಲ್ಲಿ ವಿಸ್ತರಣೆಗೊಂಡ ಕಲ್ಮಂಜ ಸರಕಾರಿ ಹಿ.ಪ್ರಾ. ಶಾಲೆಯ ಆಟದ ಮೈದಾನ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪೆರ್ಲ ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಅಭಿವೃದ್ಧಿಗೆ ದೇಣಿಗೆ ಹಸ್ತಾಂತರ

Suddi Udaya

ಬೆಳ್ತಂಗಡಿ ಧರ್ಮ ಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಿಗೆ ನೆಲ್ಯಾಡಿಯ ವಿವಿಧ ಸಂಘಟನೆಗಳಿಂದ ಗೌರವ ಅರ್ಪಣೆ

Suddi Udaya

ನಾರಾವಿ ಸೂರ್ಯನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸೂರ್ಯ ವಂದನಾ ಭಜನಾ ಉತ್ಸವದ ಪೂರ್ವ ತಯಾರಿ ಸಭೆ

Suddi Udaya

ಬೆಳ್ತಂಗಡಿ ಸ.ಪ್ರ.ದ. ಕಾಲೇಜಿನಲ್ಲಿ “ಮ್ಯಾನೇಜ್ಮೆಂಟ್ ಫೆಸ್ಟ್ “

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ವಿವಿಧ ಕ್ಷೇತ್ರದ ಮಹಿಳಾ ಸಾಧಕರಿಗೆ ಸನ್ಮಾನ

Suddi Udaya
error: Content is protected !!