ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಮಂಜುರ್ಲಿ ಗುರಿ ಎಂಬಲ್ಲಿ ವಾಸವಿರುವ ಬಡವರಾದ ಮುದರು ರವರಿಗೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಹುಟ್ಟು ಹಬ್ಬದ ಪ್ರಯುಕ್ತ ಧರ್ಮಸ್ಥಳ ಒಕ್ಕೂಟದ ಪದಾಧಿಕಾರಿಗಳಿಂದ ದಿನಸಿ ಕಿಟ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿಗಳಾದ ಯಶೋಧರ ಕೆ. ಧರ್ಮಸ್ಥಳ ಒಕ್ಕೂಟದ ಅಧ್ಯಕ್ಷರಾದ ಸುನಿತಾ ಶ್ರೀಧರ್, ಒಕ್ಕೂಟದ ಪದಾಧಿಕಾರಿಗಳಾದ ಸುಮಿತ್ರ, ವಲಯ ಮೇಲ್ವಿಚಾರಕರಾದ ರವೀಂದ್ರ ಬಿ, ತಾಲೂಕಿನ TNO ದೀಕ್ಷಿತ್ ಹಾಗೂ ಸೇವಾ ಪ್ರತಿನಿಧಿ ಸುಜಾತ ರವರು ಉಪಸ್ಥಿತರಿದ್ದರು.













