November 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬ: ಗುಂಡೂರಿ ಶ್ರೀ ಗುರುಚೈತನ್ಯ ವಯೋವೃದ್ಧರ ಸೇವಾಶ್ರಮಕ್ಕೆ ಹಣ್ಣುಹಂಪಲು ಹಾಗೂ ದಿನಸಿ ಸಾಮಾಗ್ರಿಗಳ ವಿತರಣೆ

ವೇಣೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಸೇವಾ ದಿನ ಆಚರಣೆ ಅಂಗವಾಗಿ ಹೊಸಂಗಡಿ ಹಾಗೂ ಗರ್ಡಾಡಿ ವಲಯದ ವತಿಯಿಂದ ಗುಂಡೂರಿ ಶ್ರೀ ಗುರುಚೈತನ್ಯ ವಯೋವೃದ್ಧರ ಸೇವಾಶ್ರಮಕ್ಕೆ ಹಣ್ಣುಹಂಪಲು ಹಾಗೂ ದಿನಸಿ ಸಾಮಾಗ್ರಿಗಳ ವಿತರಣೆ ಕಾರ್ಯಕ್ರಮ ನಡೆಯಿತು.

ಯೋಜನೆಯ ಗುರುವಾಯನಕೆರೆ ತಾಲೂಕು ಯೋಜನಾಧಿಕಾರಿ ಹರೀಶ್ ಅವರು ಮಾತನಾಡಿ, ಖಾವಂದರರ ಆಶಯದಂತೆ ಗ್ರಾಮಾಭಿವೃದ್ಧಿ ಯೋಜನೆಯು ಸದಾ ಬಡವರ ಏಳಿಗೆಗೆ ಶ್ರಮಿಸುತ್ತಿವೆ. ರಾಜ್ಯದ 6 ಕೋಟಿ ಜನಸಂಖ್ಯೆಯಲ್ಲಿ ಸುಮಾರು ಐದು ಕೋಟಿಯಷ್ಟು ಜನ ಧರ್ಮಸ್ಥಳ ಗ್ರಾಮಾಭಿವೃಧಿ ಯೋಜನೆಯ ಪ್ರತ್ಯಕ್ಷ ಹಾಗೂ ಪರೋಕ್ಷ ಫಲಾನುಭವಿಗಳೇ ಆಗಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಜನ ಧಾರ್ಮಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದಾರೆ. ವಾಸ್ತಲ್ಯ ಯೋಜನೆಯ ಮೂಲಕ ಆಸಕ್ತರಿಗೆ ಈಗಾಗಲೇ ಏಳು ಮನೆಗಳನ್ನು ನಿರ್ಮಿಸಿಕೊಡುವ ಬಹುದೊಡ್ಡ ಕಾರ್ಯ ನಡೆಯುತ್ತಿದೆ. ನಿರ್ಗತಿಕ ವಯೋವೃದ್ಧರನ್ನು ಸಾಕಿ ಸಲಹುತ್ತಿರುವುದು ಸೇವಾಶ್ರಮದ ಮಹಾನ್ ಕಾರ್ಯ ಎಂದರು. ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಗಿರೀಶ್ ಕೆ.ಎಸ್. ಅವರು ಮಾತನಾಡಿ, ಡಾ. ಹೆಗ್ಗಡೆಯವರ ಜನ್ಮದಿನದ ಪ್ರಯುಕ್ತ ಮಾಡುವ ಇಂತಹ ಸಮಾಜಮುಖಿ ಕಾರ್ಯಕ್ರಮದಿಂದ ಅವರ ಆಶಯ ಈಡೇರಿಸಿದಂತಾಗುತ್ತದೆ ಎಂದರು.

ಜನಜಾಗೃತಿ ಸಮಿತಿ ಸದಸ್ಯ ಹರೀಶ್ ಕುಮಾರ್ ಪೊಕ್ಕಿ ಆಗಮಿಸಿದ್ದರು. ಪ್ರಗತಿಪರ ಕೃಷಿಕ ಹಿರಿಯರಾದ ಉಗ್ಗಪ್ಪ ಮೂಲ್ಯ, ಹೊಸಂಗಡಿ ವಲಯ ಮೇಲ್ವಿಚಾರಕಿ ವಿನಯಲತಾ, ಹೊಕ್ಕಾಡಿಗೋಳಿ ಒಕ್ಕೂಟದ ಅಧ್ಯಕ್ಷ ಹರೀಶ್ ಆಚಾರ್ಯ, ಸೇವಾಪ್ರತಿನಿಧಿ ದಿನೇಶ್, ಹೊಸಂಗಡಿ ಎ ಒಕ್ಕೂಟದ ಸೇವಾಪ್ರತಿನಿಧಿ ಸೌಮ್ಯ, ಗರ್ಡಾಡಿ ವಲಯ ಮೇಲ್ವಿಚಾರಕಿ ಯೋಶೋದ, ಸೇವಾಪ್ರತಿನಿಧಿಗಳಾದ ಹೇಮಲತಾ, ವನಿತಾ, ರೇಷ್ಮಾ, ವಿದ್ಯಾವತಿ, ಗುಂಡೂರಿ-ಹೊಕ್ಕಾಡಿಗೋಳಿ ಶೌರ್ಯ ವಿಪತ್ತು ಘಟಕದ ಸದಸ್ಯರು ಉಪಸ್ಥಿತರಿದ್ದರು. ಶ್ರೀ ಗುರು ಚೈತನ್ಯಾ ಸೇವಾಶ್ರಮದ ವ್ಯವಸ್ಥಾಪಕರಾದ ಹೊನ್ನಯ್ಯ ಕಾಟಿಪಳ್ಳ ಸ್ವಾಗತಿಸಿದರು. ಸೇವಾಪ್ರತಿನಿಧಿ ಹರೀಶ್ ಪೂಜಾರಿ ಬಾಡಾರು ವಂದಿಸಿದರು.

Related posts

ಉಜಿರೆ ಹಳೆಪೇಟೆ ನವೀಕೃತ ಶಾಲೆ ಹಸ್ತಾಂತರ

Suddi Udaya

ಬೆಳ್ತಂಗಡಿ ಬಿಎಂಎಸ್ ರಿಕ್ಷಾ ಚಾಲಕರ ಸಂಘದಿಂದ ಸಹಾಯಧನ ಹಸ್ತಾಂತರ

Suddi Udaya

ಶಿಶಿಲ: ಉಚಿತ ನೇತ್ರ ಚಿಕಿತ್ಸಾ ಶಿಬಿರ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ, ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘದ ಮಹಿಳಾ ಘಟಕ ಪದಾಧಿಕಾರಿಗಳ ಆಯ್ಕೆ

Suddi Udaya

ಬೆಳ್ತಂಗಡಿ 45ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವಕ್ಕೆ ಚಾಲನೆ

Suddi Udaya

ಬಿಜೆಪಿ ಶಿಶಿಲ ಶಕ್ತಿ ಕೇಂದ್ರದ ಪ್ರಮುಖ್ ರಾಗಿ ಸಂದೀಪ್ ಆಯ್ಕೆ

Suddi Udaya
error: Content is protected !!