November 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ

ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ತಂಗಡಿಯ ಐಕ್ಯೂಎಸಿ, ರಾಜ್ಯಶಾಸ್ತ್ರ ಸಂಘ, ಮಾನವ ಹಕ್ಕುಗಳ ಸಂಘ ಹಾಗೂ ಮತದಾರರ ಸಾಕ್ಷಾರತಾ ಸಮಿತಿ ಇವುಗಳ ಜಂಟಿ ಆಶ್ರಯದಲ್ಲಿ ಸಂವಿಧಾನ ದಿನವನ್ನು ಆಚರಿಸಲಾಯಿತು.

ಡಾ. ಚಂದ್ರಾವತಿ, ಪ್ರಾಂಶುಪಾಲರು ಗ್ರೇಡ್ – 1, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಯುವ ಜನತೆಯಲ್ಲಿ ಸಂವಿಧಾನ ಹಾಗೂ ಕಾನೂನಿನ ಅರಿವು ಇದ್ದಾಗ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದರು.

ರಾಜ್ಯಶಾಸ್ತ್ರ ಸಂಘದ ಸಂಚಾಲಕರಾದ ಪ್ರೊ. ರೊನಾಲ್ಡ್ ಪ್ರವೀಣ್ ಕೊರೆಯ ಪ್ರಾಸ್ತಾವಿಕವಾಗಿ ಮಾತನಾಡಿ ಸಂವಿಧಾನವು ನಮಗೆ ಜೀವನ ಮೌಲ್ಯಗಳನ್ನು ನೀಡುತ್ತದೆ. ಪ್ರಜಾಸತ್ತಾತ್ಮಕ ಮೌಲ್ಯಗಳಾದ ಸ್ವಾತಂತ್ರ್ಯ ಸಮಾನತೆ, ನ್ಯಾಯ ಭ್ರಾತೃತ್ವ, ಸರ್ವಧರ್ಮ ಸಮಾಭಾವ ಹಾಗೂ ಪ್ರಜಾಸತ್ತಾತ್ಮಕ ಜೀವನ ಕ್ರಮಕ್ಕೆ ಸಹಕಾರಿ ಎಂದರು. ಮುಂದುವರೆದು, ಇವರು ಭಾರತ ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞಾ ವಿಧಿ ಕಾರ್ಯಕ್ರಮವನ್ನು ನೆರವೇರಿಸಿದರು. ಡಾ. ದಿವ್ಯ ಪ್ರಭು ಪಿ, ನಿರ್ವಹಣಾ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರು ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿ, ವಂದಿಸಿದರು. ಕಾಲೇಜಿನ ಬೋಧಕ ವೃಂದ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related posts

ಬೆಳಾಲು: ಅನಂತೋಡಿ ಅನಂತ ಪದ್ಮನಾಭ ದೇವಸ್ಥಾನದಲ್ಲಿ 11ನೇ ವರ್ಷದ ವರಮಹಾಲಕ್ಷ್ಮಿ ಪೂಜೆ

Suddi Udaya

ಬಳಂಜದಲ್ಲಿ ಎಸ್ ಎನ್ ಮೂಡಬಿದ್ರೆ ಪಾಲಿಟೆಕ್ನಿಕ್ ನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ

Suddi Udaya

ಜೆಸಿಐ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ವಲಯ ನಿರ್ದೇಶಕರಾಗಿ ರಂಜಿತ್ ಎಚ್ ಡಿ ಬಳಂಜ ಆಯ್ಕೆ

Suddi Udaya

ಕರಾಯ: ಸೈಕಲ್ ರಿಪೇರಿ ಮಾಡಿಸಿಕೊಟ್ಟಿಲ್ಲ ಎಂದು ನೇಣಿಗೆ ಶರಣಾದ ಹೈಸ್ಕೂಲ್ ವಿದ್ಯಾರ್ಥಿ

Suddi Udaya

ನಾರಾವಿ:ಸಂತ ಅಂತೋನಿ ಶಿಕ್ಷಣ ಸಂಸ್ಥೆಯಲ್ಲಿ ಚಿಣ್ಣರ ಕಲರವ – ಕ್ರೀಡಾಸಂಗಮ

Suddi Udaya

ಭಜನಾ ಕಮ್ಮಟ; ಆರೋಗ್ಯ ರಕ್ಷಣೆಗೆ ಭಜನೆ ಸಹಕಾರಿ: ವಿವೇಕ್  ಪಾಯಸ್

Suddi Udaya
error: Content is protected !!