November 26, 2026
ಗ್ರಾಮಾಂತರ ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನ ವತಿಯಿಂದ ರಾಷ್ಟ್ರೀಯ ಸಂವಿಧಾನ ದಿನಾಚರಣೆ ಪ್ರಯುಕ್ತ ‘ತಿಳಿಯೋಣ ಬಾ ನಮ್ಮ ಸಂವಿಧಾನ’ ಅರಿವು ಕಾರ್ಯಕ್ರಮ 

ಉಜಿರೆ: ಇಲ್ಲಿನ ಎಸ್ ಡಿ. ಎಂ ಪದವಿ ಪೂರ್ವ ಕಾಲೇಜಿನ  ವ್ಯುತ್ಪತ್ತಿ ಸಂಘದ ವತಿಯಿಂದ ರಾಷ್ಟ್ರೀಯ ಸಂವಿಧಾನ ದಿನಾಚರಣೆಯ ಅಂಗವಾಗಿ ‘ತಿಳಿಯೋಣ ಬಾ ನಮ್ಮ ಸಂವಿಧಾನ’ ಎಂಬ ವಿನೂತನ ಮಾಹಿತಿ ಕಾರ್ಯಕ್ರಮವನ್ನು ಸರಕಾರಿ ಪ್ರೌಢ ಶಾಲೆ ಕಲ್ಮಜ ಹಾಗೂ ಶ್ರೀ ಧ ಮಂ ಅನುದಾನಿತ ಸೆಕೆಂಡರಿ ಶಾಲೆ ಉಜಿರೆ ಇಲ್ಲಿ ಹಮ್ಮಿಕೊಳ್ಳಲಾಯಿತು. 

ಕಾಲೇಜಿನ ವಿದ್ಯಾರ್ಥಿನಿಯರಾದ ರಕ್ಷಿತಾ,ತುಳಸಿ ಹಾಗೂ ಸ್ಪೂರ್ತಿ ಸಂವಿಧಾನ ರಚನಾ ಸಭೆ,ಪ್ರಸ್ತಾವನೆ ಮತ್ತು ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ  ಸಂಕ್ಷಿಪ್ತವಾಗಿ ವಿವರಿಸಿ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಇದೇ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳು ಸಂವಿಧಾನದ ಪ್ರಸ್ತಾವನೆ ಯನ್ನು ಸುಶ್ರಾವ್ಯವಾಗಿ ಹಾಡಿ ದ್ಯೇಯ ಉದ್ದೇಶಗಳನ್ನು ಅನುಸರಿಸುವ ಪ್ರತಿಜ್ಞೆಯನ್ನು ಸ್ವೀಕರಿಸಿದರು ಕಾಲೇಜಿನ ಪ್ರಾಚಾರ್ಯರಾದ ಪ್ರಮೋದ್ ಕುಮಾರ್ ಬಿ ಮಾರ್ಗದರ್ಶನ ನೀಡಿದ್ದರು ರಾಜ್ಯಶಾಸ್ತ್ರ ಉಪನ್ಯಾಸಕಿ ದಿವ್ಯ ಕುಮಾರಿ ಸಹಕರಿಸಿದರು ಉಭಯ ಶಾಲೆಗಳ ಅದ್ಯಾಪಕರು ಉಪಸ್ಥಿತರಿದ್ದರು.

Related posts

ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಗಡಿಪಾರು ನೋಟೀಸ್

Suddi Udaya

ನಾವೂರು: ನಿoರ್ದಿ ಬಳಿ ರಸ್ತೆಗೆ ಬಿದ್ದ ಮರ ಗ್ರಾ.ಪಂ. ನಿಂದ ತೆರವು ಕಾರ್ಯ

Suddi Udaya

ಬಿಜೆಪಿ ಮಹಿಳಾ ಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ರಾಷ್ಟ್ರಮಟ್ಟದ ವೆಯ್ಟ್ ಲಿಫ್ಟರ್ ತೇಜಸ್ವಿನಿ ಪೂಜಾರಿಯವರಿಗೆ ಸನ್ಮಾನ

Suddi Udaya

ಮರೋಡಿ: ನ್ಯುಮೋನಿಯದಿಂದ 7ವರ್ಷದ ಬಾಲಕಿ ನಿಧನ

Suddi Udaya

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿ ರಚನೆ

Suddi Udaya

ಎಸ್‌.ಡಿ‌.ಎಂ. ನ್ಯಾಚುರೋಪಥಿ ಮತ್ತು ಯೋಗ ಸೈನ್ಸ್‌ ಕಾಲೇಜಿನಲ್ಲಿ ವಿಶ್ವ ಏಡ್ಸ್‌ ದಿನಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮ

Suddi Udaya
error: Content is protected !!