November 26, 2026
ಗ್ರಾಮಾಂತರ ಸುದ್ದಿಬೆಳ್ತಂಗಡಿವರದಿ

ಮುಂಡಾಜೆ ಗ್ರಾಮ ಸಭೆ: ಮುಂಡಾಜೆ ಸರಕಾರಿ ಆಸ್ಪತ್ರೆಗೆ ಖಾಯಂ ವೈದ್ಯರು ಬೇಕು: ಗ್ರಾಮಸ್ಥರ ಆಗ್ರಹ

ಬೆಳ್ತಂಗಡಿ; 6 ಗ್ರಾಮಗಳ ವಿಶಾಲ ವ್ಯಾಪ್ತಿಯೊಳಗೊಂಡ ಮುಂಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರು ಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಮುಂಡಾಜೆ ಗ್ರಾಮ ಪಂಚಾಯತ್‌ನ ಗ್ರಾಮ ಸಭೆಯು ಆಡಳಿತಾಧಿಕಾರಿ, ಪಶು ಸಂಗೋಪನೆ ಇಲಾಖೆಯ ಡಾ. ರವಿ ಕುಮಾರ್.ಅವರ ಅಧ್ಯಕ್ಷತೆಯಲ್ಲಿ ನ. 25 ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಪಂಚಾಯತ್ ರಾಜ್ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಗಣೇಶ್ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಗ್ರಾಮದಲ್ಲಿ ಮಂಗಗಳು, ಜಿಂಕೆ,‌ ನವಿಲು‌ ಇತ್ಯಾಧಿ ಕಾಡು ಪ್ರಾಣಿಗಳ ಉಪಟಳ ಜೋರಾಗಿದೆ. ದೂಂಬೆಟ್ಟು ಭಾಗದಲ್ಲಿ ಕಾಡಾನೆಯ ಸಂಚಾರವೂ ಇದೆ. ಇದರಿಂದಾಗಿ‌ ಕೃಷಿಕರ ಭವಣೆ ಹೇಳತೀರದಾಗಿದೆ. ಇದಕ್ಕೆ ಅರಣ್ಯ ಇಲಾಖೆಯಿಂದ ಏನಾದರೂ ಕ್ರಮ ಜರುಗಿಸಿ ಎಂಬ ಬೇಡಿಕೆ ಕೇಳಿ ಬಂತು.‌ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿತ್ಯಾಜ್ಯ‌ ಘಟಕಕ್ಕೆ ಸ್ಥಳ‌ ನಿಗದಿಗೊಳಿಸಲಾಗಿದ್ದು ಕಡತ ಡಿಸಿ ಕೋರ್ಟ್ ನಲ್ಲಿದೆ. ಒಂದು ವೇಳೆ ಅರಣ್ಯ ಇಲಾಖೆಗೆ ವರದಿ‌ ಕೇಳಿದರೆ ಗ್ರಾಮದ ಸದುದ್ದೇಶದಿಂದ ಇದಕ್ಕೆ ವಿರೋಧ ವ್ಯಕ್ತಪಡಿಸಬಾರದು ಎಂದು ಸಭೆಯಲ್ಲಿ ವಿನಂತಿಸಿಕೊಳ್ಳಲಾಯಿತು.‌

ಗ್ರಾಮ ಆಡಳಿತಾಧಿಕಾರಿಯವರು ಆದಾಯ ಪ್ರಮಾಣ ಪತ್ರದಲ್ಲಿ ಕನಿಷ್ಠ 80 ಸಾವಿರ ನಮೂದಿಸಿಕೊಡುತ್ತಿದ್ದು ಇದರಿಂದಾಗಿ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಪಡೆಯಲು ಕಷ್ಟವಾಗಿದೆ. 45 ಸಾವಿರ ಆದಾಯ ವಿದ್ದರೆ ಮಾತ್ರ ಸ್ಕಾಲರ್ಶಿಪ್ ದೊರೆಯುತ್ತದೆ. ಸರಕಾರ ಆದೇಶ ಮಾಡುವಾಗ ಎಲ್ಲಾ ಕಡೆಗೂ ಅನ್ವಯವಾಗುವಂತೆ ಆದೇಶ ಜಾರಿ ಮಾಡಿದರೆ ಉತ್ತಮ ಎಂದು ಸಭೆಯಲ್ಲಿ ಕಳಕಳಿ ಕೇಳಿಬಂತು. ಪತಿ ಮೃತರಾದರೆ ಪತ್ನಿಗೆ ಸಿಗುವ ರಾಷ್ಟ್ರೀಯ ಕುಟುಂಬ ಪರಿಹಾರ ಯೋಜನೆಯ 20 ಸಾವಿರ ರೂ. ಪಡೆಯುವ ಬಗ್ಗೆ ಹಾಗೂ ವಿಧವೆಯರ ಮಾಶಾಸನ ದೊರಕಿಸಿಕೊಡುವಲ್ಲಿ ಸದ್ರಿ ಕುಟುಂಬವನ್ನು ಗ್ರಾಮ ಆಡಳಿತಾಧಿಕಾರಿ ಕಚೇರಿಯಿಂದಲೇ ಸಂಪರ್ಕಿಸಿ ಸೌಲಭ್ಯ ದೊರಕಿಸಿಕೊಡುವಂತೆ ಮಾಡಬೇಕು.‌ “ನನ್ನ ಬಳಿ ಬಂದರೆ ಮಾಡಿಕೊಡುತ್ತೇನೆ” ಎಂದು ಸರಕಾರಿ ನೌಕರರು ಯಾವತ್ತೂ ಹೇಳಬಾರದು. ಸೇವೆಯಲ್ಲಿ ಮಾನವೀಯತೆ ಬಹಳ ಮುಖ್ಯ. ಜನರ ಬಳಿಗೇ ಆಡಳಿತ ಕೊಂಡೊಯ್ಯಬೇಕು ಎಂದು ಗ್ರಾಮಸ್ಥರು ತಿಳಿಸಿದರು.

ಭಾಗ್ಯ ಲಕ್ಷ್ಮೀ ಯೋಜನೆಗೆ ಹೆಣ್ಣು ಮಗು ಹುಟ್ಟಿದವರು ಅರ್ಜಿ ಸಲ್ಲಿಸಬೇಕಾದರೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಆಡಳತ ವೈದ್ಯಾಧಿಕಾರಿಯ ತಂಬ್ ಕೀ ಸಮಸ್ಯೆ ಇದೆ ಎಂದು ಮಗುವಿಗೆ 6 ತಿಂಗಳಾದರೂ ಜನನ ಪ್ರಮಾಣ ಪತ್ರ ದೊರೆತಿಲ್ಲ. ಇಂತಹಾ ತಾಂತ್ರಿಕ ಸಮಸ್ಯೆಯಿಂದ ಸರಕಾರದ ಯೋಜನೆಯ ಪ್ರಯೋಜನ ಫಲಾನುಭವಿಗೆ ಸಿಗದಂತಾಗುತ್ತದೆ. ಇದನ್ನು ಶೀಘ್ರ ಸರಿಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಜಲಜೀವನ ಮೆಷಿನ್ ಯೋಜನೆ ಅನುಷ್ಠಾನದಲ್ಲಿ ಹಲವು ಲೋಪಗಳಾಗಿದೆ. ಕೆಲವು ಭಾಗಗಳಿಗೆ ಪೈಪ್ ಲೈನ್ ಕೆಲಸವೇ ಮಾಡಲಾಗಿಲ್ಲ. ಆದರೆ ಕಾಮಗಾರಿ ಪೂರ್ಣಗೊಂಡಿದೆ ಎಂಬ ವರದಿ ನೀಡಲಾಗಿದೆ. ಸದ್ರಿ ಗುತ್ತಿಗೆದಾರರನ್ನು ಮುಂಡಾಜೆಗೆ ಕರೆಸಿ ಗ್ರಾಮಸ್ಥರ ಎದುರು ಮಹಜರು ನಡೆಸಬೇಕು. ಲೋಪ ಎಸಗಿದ್ದಕ್ಕಾಗಿ ಅವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಪಂಚಾಯತ್ ಸಿಬ್ಬಂದಿ ದಿಲೀಪ್ ವಾರ್ಡ್ ವಾರು ಬೇಡಿಕೆ ವರದಿ ವಾಚಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ ಕಳೆದ ಸಭೆಯ ಅನುಪಾಲನಾ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು.

ಸಿಬ್ಬಂದಿ ಸಹಕರಿಸಿದರು. ವೇದಿಕೆಯಲ್ಲಿ ತಾ. ಕೆಡಿಪಿ‌ ಸದಸ್ಯ ನಾಮದೇವ ರಾವ್ ಮುಂಡಾಜೆ ಉಪಸ್ಥಿತರಿದ್ದರು. ಸಭೆಯಲ್ಲಿ ಗ್ರಾಮಸ್ಥರಾದ ಅಗರಿ ರಾಮಣ್ಣ ಶೆಟ್ಟಿ, ಬಾಬು ಪೂಜಾರಿ‌ ಕೂಳೂರು, ಗಣೇಶ್ ಬಂಗೇರ ಕೂಳೂರು, ಅಶ್ರಫ್ ಆಲಿಕುಂಞಿ ಮುಂಡಾಜೆ, ಬಿಜು ಥೋಮಸ್ ಅಗರಿ, ಹಮೀದ್‌ ನೆಕ್ಕರೆ, ನಾಗರಾಜ‌ ನಾಯ್ಕ್ ಒಂಜರೆಬೈಲು, ಮೃತ್ಯುಂಜಯ ಫಡಕೆ ಮೊದಲಾದವರು ಗ್ರಾಮದ ಅಭಿವೃದ್ದಿಯ ದೃಷ್ಟಿಯಿಂದ ಪ್ರಶ್ನೆಗಳನ್ನು ಕೇಳಿದರು.

Related posts

ಜಿಲ್ಲಾ ಮಟ್ಟದ ಪ್ರಶಸ್ತಿ ಪತ್ರವನ್ನು ಜಿಲ್ಲಾಧಿಕಾರಿ ಡಾ ರವಿಕುಮಾರ್ ವಿತರಿಸಿದರು.

Suddi Udaya

ಬಂಟರಯಾನೆ ನಾಡವರ ಸಂಘ ಬೆಳ್ತಂಗಡಿ, ತಾಲೂಕು ಮಹಿಳಾ ಬಂಟರ ವಿಭಾಗ ಹಾಗೂ ತಾಲೂಕು ಯುವ ಬಂಟರ ವಿಭಾಗ ನೇತೃತ್ವ ಗುರುವಾಯನಕೆರೆಯಲ್ಲಿ ಸಂಭ್ರಮದ ಬಂಟೋತ್ಸವ

Suddi Udaya

ಮೂಡುಕೋಡಿಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆ

Suddi Udaya

ಕೊಯ್ಯೂರು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವಾರ್ಷಿಕ ಮಹಾಸಭೆ

Suddi Udaya

ಧರ್ಮಸ್ಥಳ: ಗಾಳಿ ಮಳೆಗೆ ವಿದ್ಯುತ್ ಲೈನ್ ಮೇಲೆ ಬಿದ್ದ ಮರ

Suddi Udaya

ಮರೋಡಿ: ಕೂಕ್ರಬೆಟ್ಟು ಶಾಲೆಗೆ “ಸರಕಾರಿ ಶಾಲೆ ಉಳಿಸಿ ಬೆಳೆಸಿ” ಸಮಿತಿ ರಾಜ್ಯಾಧ್ಯಕ್ಷ ಪ್ರಕಾಶ್ ಅಂಚನ್ ಭೇಟಿ

Suddi Udaya
error: Content is protected !!