ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದಾಗಿ ಸಮಾಜದಲ್ಲಿ ಆರ್ಥಿಕ ಸ್ವಾವಲಂಬನೆ ಮೂಡಿದ್ದು, ವಿಶೇಷವಾಗಿ ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಮಹಿಳಾ ಶಶಕ್ತೀಕರಣ ನಡೆದಿದೆ. ಹಿಂದೆ ಕುಟುಂಬದಲ್ಲಿ ಇದ್ದ ಉಣ್ಣುವ ಬಾಯಿ ಅಧಿಕವಿದ್ದದ್ದು ಈಗ ಪ್ರತೀ ಮನೆಯಲ್ಲೂ ದುಡಿಯುವ ಕೈಗಳೂ ಕೂಡ ಅಧಿಕಗೊಂಡಿವೆ ಎಂದು ಗ್ರಾ. ಯೋ. ಉಡುಪಿ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಹೇಳಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜ್ಞಾನ ವಿಕಾಸ ಮಹಿಳಾ ಯೋಜನೆಯ ಸೃಜನಶೀಲ ಕಾರ್ಯಕ್ರಮದಡಿ ಮುಂಡಾಜೆ ವಲಯದ ಮಹಿಳಾ ಸದಸ್ಯೆಯರಿಗೆ ಹಮ್ಮಿಕೊಂಡಿದ್ದ ಚೆಂಡೆ ತರಬೇತಿಯ ಸಮಾರೋಪ ಹಾಗೂ “ಕುಡುಮಶ್ರೀ ಮಹಿಳಾ ಚೆಂಡೆ ಬಳಗ” ದ ನಾಮಫಲಕವನ್ನು ನ.28ರಂದು ಮುಂಡಾಜೆ ಗ್ರಾ. ಪಂ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅನಾವರಣಗೊಳಿಸಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಧರ್ಮಸ್ಥಳ ಯಕ್ಷಗಾನ ಮೇಳದ ಕಲಾವಿದ ಹಾಗೂ ಚೆಂಡೆ ತರಬೇತು ಗುರುಗಳಾದ ಜಗದೀಶ ಚಾರ್ಮಾಡಿ ವಹಿಸಿದ್ದರು.
ಮುಖ್ಯ ಅತಿಥಿಯಾಗಿದ್ದ ಜನಜಾಗೃತಿ ವೇದಿಕೆಯ ಮುಂಡಾಜೆ ವಲಯಾಧ್ಯಕ್ಷ ನಾಮದೇವ ರಾವ್, ತಾಲೂಕು ಸಮಿತಿ ಸದಸ್ಯ ಅಶ್ರಫ್ ಆಲಿಕುಂಞಿ ಮುಂಡಾಜೆ, ಗ್ರಾಮ ಸಮಿತಿ ಅಧ್ಯಕ್ಷ ಬಾಬು ಪೂಜಾರಿ ಕೂಳೂರು ಶುಭ ಹಾರೈಸಿದರು.
ವೇದಿಕೆಯಲ್ಲಿ ತಾ. ಯೋಜನಾಧಿಕಾರಿ ಯಶೋಧರ, ದೇವಸ್ಯ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಪುಷ್ಪರಾಜ ರೈ ಉಪಸ್ಥಿತರಿದ್ದರು.
ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದ ತಾ. ಸಮನ್ವಯಾಧಿಕಾರಿ ಮಧುರಾ ಕಾರ್ಯಕ್ರಮ ನಿರೂಪಿಸಿದರು. ಮುಂಡಾಜೆ ವಲಯದ ಮೇಲ್ವಿಚಾರಕಿ ಪೂರ್ಣಿಮಾ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಜಿಶಾ ವಂದಿಸಿದರು.
ಜ್ಞಾನ ವಿಕಾಸದ ಸದಸ್ಯರು ಮತ್ತು ಗ್ರಾ. ಯೋ ಸೇವಾ ಪ್ರತಿನಿಧಿಗಳೂ ಸೇರಿ 15 ಮಂದಿ 45 ದಿನಗಳ ತರಬೇತಿ ಪಡೆದಿದ್ದು, ಅವರಿಂದ ಪ್ರಥಮ ಸಾರ್ವಜನಿಕ ಪ್ರದರ್ಶನ ನಡೆಯಿತು. ಚೆಂಡೆ ಗುರುಗಳಾದ ಜಗದೀಶ ಚಾರ್ಮಾಡಿ ಅವರಿಗೆ ಗುರುವಂದನೆ ನಡೆಸಲಾಯಿತು. ತರಬೇತಿಗೆ ತಮ್ಮ ಮನೆಯಲ್ಲಿ ಅವಕಾಶ ಒದಗಿಸಿಕೊಟ್ಟ ಗಣೇಶ್ ಆಚಾರ್ಯ ಮತ್ತು
ಶಕುಂತಲಾ ದಂಪತಿಯನ್ನು ಗೌರವಿಸಲಾಯಿತು. ತರಬೇತಿ ಪಡೆದ ಹೇಮಾವತಿ ಮತ್ತು ಶಕುಂತಲಾ ಅನಿಸಿಕೆ ವ್ಯಕ್ತಪಡಿಸಿದರು.













