ಬೆಳ್ತಂಗಡಿ: ಪ್ರಸ್ತುತ ದಕ್ಷಿಣ ಕನ್ನಡ ,ಉಡುಪಿ ,ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡದ ವಿವಿಧ ಭಾಗಗಳಲ್ಲಿ ರಬ್ಬರ್ ಬೆಳೆಯನ್ನು ಬೆಳೆಯುತ್ತಿದ್ದು 10 ಸಾವಿರಕ್ಕಿಂತಲೂ ಮಿಕ್ಕಿ ಕಾರ್ಮಿಕರು ರಬ್ಬರ್ ಟ್ಯಾಪಿಂಗ್ ಕೃಷಿಯನ್ನು ಆಶ್ರಯಿಸಿ ಜೀವನ ಸಾಗಿಸುತ್ತಿದ್ದಾರೆ. ಸದ್ರಿ ನಮ್ಮ ರಾಜ್ಯದಲ್ಲಿ ಕಳೆದ ವರ್ಷ ಕೆಜಿಗೆ 175 ರಿಂದ 250 ರ ತನಕ ಬೆಲೆಯಿದ್ದು ರಬ್ಬರ್ ಧಾರಣೆ 130ಕ್ಕೆ ಇಳಿದಿದ್ದು ರಬ್ಬರ್ ಕೃಷಿಕರು ರಬ್ಬರನ್ನು ಟ್ಯಾಪಿಂಗ್ ಮಾಡಿಸಲು ನಿರಾಸಕ್ತರಾಗಿ ರಬ್ಬರ್ ಮರಗಳನ್ನು ಕಡಿದು ಬೇರೆ ಕೃಷಿಯತ್ತ ವಾಲುತ್ತಿದ್ದಾರೆ. ಇದರಿಂದ ತಲೆ – ತಲಾಂತರದಿಂದ ರಬ್ಬರ್ ಟ್ಯಾಪಿಂಗ್ ಕೃಷಿ ಕಾರ್ಮಿಕರು ನಿರುದ್ಯೋಗದಿಂದ ಬಳಲುತ್ತಿದ್ದಾರೆ.
ಈ ಬೆಲೆ ಕುಸಿತದ ಲಾಭವು ಟೈಯರ್ ಕಂಪನಿಗಳು ಪಡೆದುಕೊಂಡಿದೆ.250 ರೂಪಾಯಿ ಕಚ್ಚಾ ರಬ್ಬರ್ ಬೆಲೆ ಇರುವಾಗ ಇದ್ದ ಟೈರ್ ಬೆಲೆಯೇ ಇದೀಗ ರಬ್ಬರ್ ಗೆ 130 ಇರುವಾಗಲೂ ಇದೆ .ಈ ಬಗ್ಗೆ ಸರಕಾರ ಗಮನಿಸಿ ಈ ಲಾಭವನ್ನು ಕೃಷಿಕರಿಗೆ ಮತ್ತು ಕಾರ್ಮಿಕರಿಗೆ ದೊರಕುವಂತೆ ಮಾರ್ಗಸೂಚಿಗಳನ್ನು ನೀಡುವಂತೆ ಕೋರಲಾಯಿತು.
ಕೇಂದ್ರ ಸರಕಾರದ ಅಧೀನದಲ್ಲಿ ಬರುವ ರಬ್ಬರ್ ಬೋರ್ಡ್ ನಲ್ಲಿ ರಬ್ಬರ್ ಕೃಷಿ ಕಾರ್ಮಿಕರಿಗೆ ಅಲ್ಪಮೊತ್ತದ ಸವಲತ್ತು ಇದ್ದು ಇದನ್ನು ಕರ್ನಾಟಕ ಸರಕಾರದ ಕಟ್ಟಡ ಮಂಡಳಿಯಲ್ಲಿ ನೀಡಲಾಗುವ ಯೋಜನೆಗಳಂತೆ ಜಾರಿಗೆ ತರಬೇಕು ಮತ್ತು ರಬ್ಬರ್ ಮಂಡಳಿಗೆ ರಾಜ್ಯ ಸರ್ಕಾರವು ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಯೋಜನೆಗಳನ್ನು ಪ್ರಕಟಿಸಬೇಕು. ಅಲ್ಲದೇ ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳನ್ನು ಕಾರ್ಮಿಕರಿಗೆ ಉಚಿತವಾಗಿ ಜಾರಿ ಮಾಡಬೇಕು ಅಪಘಾತ ಮತ್ತು ಜೀವ ವಿಮೆ ಜಾರಿಗೊಳಿಸಬೇಕು.ವ್ರದ್ದಾಪ್ಯ ಪಿಂಚಣಿ ಜಾರಿಗೊಳಿಸಬೇಕು, ವಿದ್ಯಾರ್ಥಿ ವೇತನ ಮನೆ ನಿರ್ಮಾಣಕ್ಕೆ ಸಹಾಯಧನ ಜಾರಿಗೊಳಿಸಬೇಕು. ರಬ್ಬರ್ ಹಾಗೂ ಇತರೆ ಕೃಷಿ ಕಾರ್ಮಿಕರ ಏಳಿಗೆಗೆ ಬೇಕಾಗುವ ಮೇಲೆ ವಿನಂತಿಸಿದ ಯೋಜನೆಗಳನ್ನು ಜಾರಿಗೆ ತರುವಂತೆ ಹಾಗೂ ರಬ್ಬರ್ ಬೆಂಬಲ ಬೆಲೆ ಕೂಡ ಘೋಷಿಸುಂತೆ ಈ ಮೂಲಕ ಕೋರಲಾಗಿದೆ.
ಈ ಸಂದರ್ಭದಲ್ಲಿ ಭಾರತೀಯ ಮಜ್ದೂರು ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು, ರಬ್ಬರ್ ಟ್ಯಾಪರ್ ಮಜ್ದೂರ್ ಸಂಘದ ಅಧ್ಯಕ್ಷ ಸುರೇಶ್ ದಯಾನಂದ್, ಜಿಲ್ಲಾ ಉಪ ಪ್ರಧಾನ ಕಾರ್ಯದರ್ಶಿ ಸುರೇಶ್ ಡಿ, ಪುತ್ತೂರು ತಾಲೂಕು ಅಧ್ಯಕ್ಷರಾದ ಅಚುತ್ತಪ್ರಭು, ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಯೋಗೀಶ್ ಹಾಗೂ ಕಾರ್ಯದರ್ಶಿ ರೂಬೆನ್ ಇವರು ಬಿಎಂಎಸ್ ನ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಅವರ ನಿರ್ದೇಶನದಂತೆ ಮನವಿಯನ್ನು ಜಿಲ್ಲಾಧಿಕಾರಿಯವರಿಗೆ ತಲುಪಿಸಲಾಯಿತು.