September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿನಿಧನ

ವೇಣೂರು: ಬರ್ಕಜೆ ದೆತ್ತರ ನದಿಗೆ ಸ್ನಾನಕ್ಕೆ ತೆರಳಿದ ಮೂವರು ವಿದ್ಯಾರ್ಥಿಗಳು ನೀರುಪಾಲು

ವೇಣೂರು: ಸ್ನಾನಕ್ಕೆ ತೆರಳಿದ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ನ. 27ರಂದು ಸಂಜೆ ವೇಣೂರು ಬರ್ಕಜೆ ಎರುಗುಂಡಿ ದೆತ್ತರ ನದಿಯಲ್ಲಿ ಸಂಭವಿಸಿದೆ.

ಘಟನೆಯಲ್ಲಿ ಮೂವರ ಮೃತದೇಹ ಪತ್ತೆಯಾಗಿದೆ.ಮಡಂತ್ಯಾರು ಪರಿಸರದ ಸೂರಜ್, ವಗ್ಗ ನಿವಾಸಿ ಜೋಯಿಸನ್,ಎಡಪದವು ಮೂಲದ ಲಾರೆನ್ಸ್ ಎಂದು ತಿಳಿದು ಬಂದಿದೆ.

ವೇಣೂರು ಪ್ರದೇಶದಲ್ಲಿ ಚರ್ಚಿನ ಸಾಂತ್ ಮಾರಿ ಹಬ್ಬವಿದ್ದ ಕಾರಣ ನಡ್ತಿಕಲ್ಲು ವಾಲ್ಟರ್ ಮೊಂತೇರು ಅವರ ಮನೆಗೆ ನೆಂಟರಾಗಿ ಬಂದಿದ್ದರು. ಹಬ್ಬ ಆಚರಿಸುತ್ತ ಮೂವರು ಜೊತೆಯಾಗಿ ಪಕ್ಕದಲ್ಲಿರುವ ಬರ್ಕಜೆ ನದಿಗೆ ಸ್ನಾನಕ್ಕೆ ತೆರಳಿದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.ಘಟನಾ ಸುದ್ದಿ ತಿಳಿಯುತ್ತಿದ್ದಂತೆ ಊರಿನವರು,ಸಂಭಂದಿಕರು ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.

ವೇಣೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

ಮಲವಂತಿಗೆ : ಕಜಕ್ಕೆ ಸ.ಹಿ.ಪ್ರಾ. ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಕ್ಲಸ್ಟರ್ ಮಟ್ಟದ ಕಬ್ಬಡಿಯಲ್ಲಿ ವೇಣೂರು ಸರ್ಕಾರಿ ಪ್ರೌಢಶಾಲೆಗೆ ಗೆಲುವು

Suddi Udaya

ವೇಣೂರು ಐಟಿಐ : ಟೊಯೋಟೊ ನೇಮಕಾತಿ ಶಿಬಿರ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ: ಕಾಯ್ದಿರಿಸಿದ ತೀರ್ಪು-ಏ.29ರವರೆಗೆ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಆದೇಶ

Suddi Udaya

ಪಡಂಗಡಿ: ನಿಶಾಂತ್ ಸೇವಾ ಬ್ರಿಗೇಡ್ ಹಾಗೂ ವೆನ್ಲಾಕ್ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ವತಿಯಿಂದ ರಕ್ತದಾನ ಶಿಬಿರ

Suddi Udaya

ಬೆಳ್ತಂಗಡಿ ತಾಲೂಕಿನಲ್ಲಿಯೇ ದಾಖಲೆ ಮಟ್ಟದಲ್ಲಿ 11,000 ಚ.ಅಡಿಯ ಮೇಲ್ಚಾವಣಿಯ ನೀರನ್ನು ಬೋರ್ವೆಲ್ ಗೆ ನೀರಿಂಗಿಸುವ ಜಲ ಜಲಮರುಪುರಣಕ್ಕೆ ಚಾಲನೆ

Suddi Udaya
error: Content is protected !!