24.3 C
ಪುತ್ತೂರು, ಬೆಳ್ತಂಗಡಿ
May 20, 2025
ಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ಬಳಂಜ: ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ಶ್ರೀ ಗುರು ಪೂಜಾ

ಬಳಂಜ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಬಳಂಜ, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಬಳಂಜ,ನಾಲ್ಕೂರು,ತೆಂಕಕಾರಂದೂರು ಇದರ ಆಶ್ರಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆ,ಶ್ರೀ ಗುರುಪೂಜೆ,ಶ್ರೀ ಸರ್ವೇಶ್ವರಿ ದೇವಿಯ ಪೂಜೆ ಹಾಗೂ ಧಾರ್ಮಿಕ ಸಭೆಯು ನಡೆಯಿತು.

ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್.ಎಸ್.ವಹಿಸಿದ್ದರು.

ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಧಾರ್ಮಿಕ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿ ಕುಮಾರ ಚಂದ್ರ, ಬೆಳ್ತಂಗಡಿ ಶ್ರೀ ಗು. ನಾ. ಸೇ. ಸಂಘದ ಅಧ್ಯಕ್ಷರು,ಭಾರತೀಯ ಮಜ್ದೂರು ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು, ಮಂಗಳೂರು ಮಂಗಳಾದೇವಿ ಬಿಲ್ಲವ ಸಂಘದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಬೆಳ್ತಂಗಡಿ ತಾಲೂಕು ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಿತೀಶ್ ಕೋಟ್ಯಾನ್, ಯುವವಾಹಿನಿ ವೇಣೂರು ಘಟಕಾಧ್ಯಕ್ಷೆ ಹರಿಣಿ ಕರುಣಾಕರ್, ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಗೌರವಾಧ್ಯಕ್ಷ ಹೆಚ್.ಧರ್ಣಪ್ಪ ಪೂಜಾರಿ,ಗೌರವ ಮಾರ್ಗದರ್ಶಕ ಕೆ.ವಸಂತ ಸಾಲಿಯಾನ್, ಬೆಳ್ತಂಗಡಿ ಶ್ರೀ ಗುರುನಾರಾಯಣ ಸೇವಾ ಸಂಘದ ನಿರ್ದೇಶಕ ರಂಜಿತ್ ಹೆಚ್.ಡಿ, ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಪಿ ಕೋಟ್ಯಾನ್,ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಪ್ರವೀಣ್ ಕೋಟ್ಯಾನ್, ಕಾರ್ಯದರ್ಶಿ ಶರತ್ ಅಂಚನ್, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಪುಷ್ಪಾ ಗೀರೀಶ್,ಕಾರ್ಯದರ್ಶಿ ಕಲಾವತಿ ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ಯತೀಶ್ ವೈ.ಎಲ್ ಪ್ರಾಸ್ತಾವಿಸಿ,ಸ್ವಾಗತಿಸಿದರು. ಯುವ ಸಾಹಿತಿ ಚಂದ್ರಹಾಸ ಬಳಂಜ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಕೋಶಾಧಿಕಾರಿ ದಿನೇಶ್ ಕೋಟ್ಯಾನ್,ಜತೆ ಕಾರ್ಯದರ್ಶಿ ಜಗದೀಶ್ ಬಳ್ಳಿದಡ್ಡ,ನಿರ್ದೇಶಕರಾದ ಸಂತೋಷ್ ಕುಮಾರ್ ಕಾಪಿನಡ್ಕ, ಬಾಲಕೃಷ್ಣ ಪೂಜಾರಿ ಯೈಕುರಿ,ಸುರೇಶ್ ಪೂಜಾರಿ ಜೈಮಾತ,ಪ್ರವೀಣ್ ಪೂಜಾರಿ ಲಾಂತ್ಯಾರು,ಯೋಗೀಶ್ ಪೂಜಾರಿ ಕೊಂಗುಳ,ರವೀಂದ್ರ ಬಿ.ಅಮೀನ್,ಸದಾನಂದ ಪೂಜಾರಿ ಬೊಂಟ್ರೊಟ್ಟು,ಜನಾರ್ಧನ ಪೂಜಾರಿ ರಾಮನಗರ,ನಿತೇಶ್ ಕುಮಾರ್ ಕಾಪಿನಡ್ಕ,ಜಗದೀಶ್ ಪೂಜಾರಿ ತಾರಿಪಡ್ಪು,ಯೋಗೀಶ್ ಆರ್ ಯೈಕುರಿ ಸಹಕರಿಸಿದರು.

ಕಾರ್ಯಕ್ರಮದಲ್ಲಿ
ಕಾರ್ಯಕ್ರಮದಲ್ಲಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸಾಧಕ ಚಂದ್ರಹಾಸ ಬಳಂಜ,ರಾಷ್ಟ್ರೀಯ ಕ್ರೀಡಾಪಟು ಕು.ಸುಷ್ಮಾ ಬಿ ಪೂಜಾರಿ,ಕ್ರೀಡಾಪ್ರತಿಭೆ ಕೀರ್ತಿ ಪೂಜಾರಿ,ಮೋಟೋಕ್ರಾಸ್ ಸಾಧಕ ಸಂತೋಷ್ ಕಂಪುಂರ್ಜ ಹಾಗೂ ಪಂಚಶ್ರೀ ಮಹಿಳಾ ಭಜನಾ ತಂಡ ಮತ್ತು ಬ್ರಹ್ಮಶ್ರೀ ಕುಣಿತಾ ಭಜನಾ ತಂಡದ ಸದಸ್ಯರನ್ನು ಗೌರವಿಸಲಾಯಿತು.

Related posts

ಬಳಂಜ: ಅಟ್ಲಾಜೆ ಸರ್ವೋದಯ ಫ್ರೆಂಡ್ಸ್ ಕ್ಬಬ್ ನಿಂದ ಆಟೋಟ ಸ್ಪರ್ದೆ, ಸಾಧಕರಿಗೆ ಸನ್ಮಾನ, ನೂತನ ಮನೆಗೆ ಚಾಲನೆ

Suddi Udaya

ಮಿತ್ತ ಬಾಗಿಲು ಹಾಲು ಉತ್ಪಾದಕರ ಸಂಘಕ್ಕೆ ಜಿಲ್ಲಾ ಮಟ್ಟದ ಸಾಧನಾ ಪ್ರಶಸ್ತಿ,

Suddi Udaya

ಶ್ರೀ ಧ .ಮಂ. ಪ್ರೌಢ ಶಾಲೆಯಲ್ಲಿ ಭೌತಶಾಸ್ತ್ರ ಶಿಕ್ಷಕರ ಕಾರ್ಯಾಗಾರ

Suddi Udaya

ಬಿಜೆಪಿ ಶಿಶಿಲ ಶಕ್ತಿಕೇಂದ್ರದ ಕಾರ್ಯಕರ್ತರ ಸಭೆ

Suddi Udaya

ಸುದೆಮುಗೇರು ವೃದ್ಧಾಶ್ರಮದಲ್ಲಿ. ದೇಶದ ಪ್ರಥಮ ಮಹಿಳಾ ಪ್ರಧಾನಿ , ಭೂಸುಧಾರಣಾ ಕಾಯ್ದೆಯ ರೂವಾರಿ ಶ್ರೀಮತಿ ಇಂದಿರಾ ಗಾಂಧಿಯವರ ಜನ್ಮದಿನಾಚರಣೆ

Suddi Udaya

ಕರಾವಳಿ ಪ್ರವಾಸೋದ್ಯಮ ಕುರಿತು ವಿಧಾನಸಭಾ ಕಲಾಪದಲ್ಲಿ ಧ್ವನಿ ಎತ್ತಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ

Suddi Udaya
error: Content is protected !!