29.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ಬೆಳ್ತಂಗಡಿ ಶ್ರೀ ಕುತ್ಯಾರು ಸೋಮನಾಥೇಶ್ವರ ದೇವಸ್ಥಾನದ ಜಾತ್ರೋತ್ಸವ

ಬೆಳ್ತಂಗಡಿ: ದೇವರು ಪ್ರತಿಯೊಬ್ವರುಗೂ ಒಂದೊಂದು ಅವಕಾಶವನ್ನು ಕೊಡುತ್ತಾನೆ.ಇದನ್ನು ಸದುಯುಪಯೋಗಿಸಿದವರು ಉತ್ತಮ ಬದುಕನ್ನು ರೂಪಿಸುತ್ತಾರೆ.ಕೆಲವರು ಸರಿಯಾದ ಮಾರ್ಗದರ್ಶನ ಇಲ್ಲದೆ ಬಡತನದಲ್ಕಿ ಉಳಿಯುತ್ತಾರೆ ಅಂತವರಿಗೆ ನೆರವು ನೀಡಿ ಸಮಾಜದ ಮುಖ್ಯ ವಾಹಿನಿಗೆ ತರುವ ಕಾರ್ಯ ಮಾಡಬೇಕು ಆಗ ಸುಂದರ ಸಮಾಜ ನಿರ್ಮಾಣ ಸಾದ್ಯ.ಸುಂದ ಸಮಾಜಕ್ಕಾಗಿ ಪ್ರತಿಯೊಬ್ಬರಲ್ಲು ಸಮಾಜ ಸೇವೆ ಮಾಡುವ ತುಡಿತ ಬರಬೇಕು ಎಂದು ಉದ್ಯಮಿ ಬದುಕು ಕಟ್ಟೋಣ ತಂಡದ ಸಂಚಾಲಕ ಮೋಹನ್ ಕುಮಾರ್ ಹೇಳಿದರು

. ಅವರು ಸೋಮವಾರ ಬೆಳ್ತಂಗಡಿ ಅಯ್ಯಪ್ಪ ಗುಡಿ ಬಳಿ ಶ್ರಿ ಕುತ್ಯಾರು ಸೋಮನಾಥೇಶ್ವರ ದೇವಸ್ಥಾನದ ಪ್ರಯುಕ್ತ ನವಶಕ್ತಿ ಪ್ರೆಂಡ್ಸ್ ಬೆಳ್ತಂಗಡಿ ಅರ್ಪಿಸುವ ಕಾಶಿ ಪ್ಯಾಲೇಸ್ ಪ್ರಾಯೋಜಕತ್ವದ ಯೋದರಿಗೊಂದು ನಮನ ಹಾಗೂ ಸಂಗೀತ ಕಾರ್ಯಕ್ರಮದಲ್ಲಿ ಯೋದರನ್ನು ಗೌರವಿಸಿ ಮಾತನಾಡಿ ಚಾರ್ಮಾಡಿ ಭಾಗದಲ್ಲಿ ನೆರೆ ಬಂದ ಸಂದರ್ಭದಲ್ಲಿ ಅಲ್ಲಿನ ಜನರ ನೋವುಗಳನ್ನು ಕಂಡು ಅವರಿಗೆ ನೆರವಾಗಬೇಕು ಎಂಬ ಸಂಕಲ್ಪ ಹೊಂದಿ ಪ್ರಾರಂಬವಾದ ಸೇವೆಗೆ ಬದುಕು ಕಟ್ಟೋಣ ತಂಡ ಪ್ರಾರಂಭವಾಯಿತು.ತದ ನಂತರ ನೂರಾರು ಯುವಕರು ಜೊತೆ ಸೇರಿದಾಗ ಅನೇಕ ಸಮಾಜ ಸೇವೆ ಮಾಡುವ ಭಾಗ್ಯ ಒದಗಿತು.ಮುಂದೇಯೂ ಅನೇಕ ಕಾರ್ಯಕ್ರಮ ಮಾಡಲಿದ್ದೇವೆ.ಇಂದು ಉದ್ಯಮಿ ಶಶಿದರ ಶೆಟ್ಟಿಯವರು ದೇಶ ಕಾಯುವ ಯೋದರನ್ನು ಗುರುತಿಸುವ ಕಾರ್ಯಮಾಡುತ್ತಿರುವುದು ಯುವಕರಿಗೆ ದೇಶ ಸೇವೆ ಮಾಡುವು ಚಿಂತನೆ ಬರಲು ಸಹಕಾರಿಯಾಗಿದೆ ಅಲ್ಲದೆ ಯೋದರಿಗೆ ಮಾನಸಿಕ ಸ್ಥೈರ್ಯ ತುಂಬಿಸುತ್ತಿದ್ದಾರೆ ಎಂದರು. ದಾರ್ಮಿಕ ಚಿಂತಕ ಡಾ ಪ್ರದೀಪ್ ನಾವೂರ ಮಾತನಾಡಿ ಜಾತ್ರೋತ್ಸವದಲ್ಲಿ ದರ್ಮಕಟ್ಟುವ ಜೊತೆ ಯೋದರನ್ನು ಗೌರವಿಸಿ ದೇಶ ಕಟ್ಟು ಕಾರ್ಯ ಉದ್ಯಮಿ ಶಶಿದರ ಶೆಟ್ಟಿ ಮಾಡುತ್ತಿದ್ದಾರೆ. ಇಂತಹ ಕಾರ್ಯಕ್ರಮ ನಿರಂತರವಾಗಿ ನಡೆದಾಗ ಸುಸಂಸ್ಕೃತ ಸಮಾಜ ನಿರ್ಮಾಣ ಸಾದ್ಯ ಎಂದರು. ಮಾಜಿ ಸೈನಿಕರ ಸಂಘದ ಅದ್ಯಕ್ಷ ಸುನಿಲ್ ಶೈಣೈ ಮಾತನಾಡಿ ಯುವ ಸಮಾಜ ದೇಶ ಸೇವೆಗೆ ಮುಂದಾಗಬೇಕು ಇದಕ್ಕೆ ಹೆತ್ತವರು ಪ್ರೋತ್ಸಾಹ ನೀಡಬೇಕು.ಸೈನ್ಯಕ್ಕೆ ಸೇರಿದರೆ ಭವಿಷ್ಯ ರೂಪುಗೊಳ್ಳುವುದರ ಜೊತೆ ದೇಶ ಸೇವೆಯ ಅವಕಾಶ ಸಿಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಅದ್ಯಕ್ಷೆ ರಜನಿ ಕುಡ್ವ,ಉಪಾಧ್ಯಕ್ಷ ಜಯಾನಂದ ಗೌಡ,ಉದ್ಯಮಿ ಸಂತೋಷ್ ಕುಮಾರ್ ಜೈನ್, ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹುತಾತ್ಮ ಯೋದ ಕ್ರುಷ್ಣಪ್ಪ ಗೌಡ ನಡ ಇವರ ಕುಟುಂಬಿಕರನ್ನು ಗೌರವಿಸಲಾಯಿತು.ಮಾಜಿ ಸೈನಿಕರಾದ ಪರಶುರಾಮ ಗೌಡ ನೇಜಿಕಾರು,ಯೋಗೀಶ್ ನಡ ಇವರನ್ನು ಹಾಗೂ ಇತ್ತಿಚೆಕೆ ಸೈನ್ಯಕ್ಕೆ ಸೇರಿದ ಕುಟುಂಬಿಕರನ್ನು ಗೌರವಿಸಲಾಯಿತು.ಇತ್ತೀಚಿಗೆ ಅಗಲಿದ ಗಣ್ಯರಿಗೆ ಸಂತಾಪ ಸಲ್ಲಿಸಲಾಯಿತು.ಜಗದೀಶ್ ಜೈನ್ ಸ್ವಾಗತಿಸಿದರು. ನಗರ ಪಂಚಾಯತ್ ನಾಮ ನಿರ್ದೇಶನ ಸದಸ್ಯ ಪ್ರಕಾಶ್ ಅಚಾರ್ಯ ವಂದಿಸಿದರು.ಶಿಕ್ಷಕ ದರಣೇಂದ್ರ ಜೈನ್ ,ಸ್ಮಿತೇಶ್ ಬಾರ್ಯ ಸಹಕರಿಸಿದರು.ವಿ ಜಿ ಮದುರಾಜ್ ಗುರುಪುರ ಕಾರ್ಯಕ್ರಮ ನಿರುಪಿಸಿದರು.

Related posts

ಕುವೆಟ್ಟು ಸ.ಉ.ಹಿ.ಪ್ರಾ ಶಾಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ತಂಡದಿಂದ ಕಮ್ಮಟ – ಬೀದಿ ನಾಟಕ ಪ್ರದರ್ಶನ

Suddi Udaya

ಉಜಿರೆ: ಶ್ರೀ. ಧ.ಮಂ.ಆಂಗ್ಲ ಮಾಧ್ಯಮ ಶಾಲಾ ಪ್ರಾರಂಭೋತ್ಸವದ ಸಂಭ್ರಮ -ಮಕ್ಕಳಿಗೆ ಅದ್ದೂರಿಯ ಸ್ವಾಗತ

Suddi Udaya

ನಂದಿಬೆಟ್ಟ ಬಳಿ ಬೈಕ್ ಮತ್ತು ಬಸ್ ನಡುವೆ ಭೀಕರ ರಸ್ತೆ ಅಪಘಾತ: ಹುಟ್ಟುಹಬ್ಬದ ದಿನದಂದೆ ಓಡೀಲುವಿನ ಯುವಕ ದೀಕ್ಷಿತ್ ಬಲಿ

Suddi Udaya

ಮಡಂತ್ಯಾರು ಗ್ರಾ. ಪಂ. ನಲ್ಲಿ ಸ್ವಚ್ಛ ಸಂಕೀರ್ಣದ ಉದ್ಘಾಟಣೆ

Suddi Udaya

ಶೈಕ್ಷಣಿಕ ವರ್ಷದಲ್ಲಿ 8 ರಿಂದ 10ನೇ ತರಗತಿ ಮಕ್ಕಳಿಗೆ ತೆರೆದ ಪುಸ್ತಕ ಪರೀಕ್ಷೆ

Suddi Udaya

ಮಚ್ಚಿನ ಗ್ರಾ.ಪಂ.ನಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭಾವಿಗಳಿಗೆ ನೋಂದಾವಣೆ ಪತ್ರ ವಿತರಣೆ

Suddi Udaya
error: Content is protected !!