38.6 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಬೆಳ್ತಂಗಡಿ

ಧರ್ಮಸ್ಥಳದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಉದ್ದಿಮೆದಾರರ ಕಾರ್ಯಗಾರ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಧಮ೯ಸ್ಥಳ ಇದರ ವತಿಯಿಂದ ಮಾ.8ರಂದು ಧರ್ಮಸ್ಥಳದ ಮಹೋತ್ಸವ ಸಭಾ ಭವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದಭ೯ದಲ್ಲಿ ʻಮಹಿಳಾ ಉದ್ದಿಮೆದಾರರ ಕಾಯಾ೯ಗಾರʼ ಹಮ್ಮಿಕೊಳ್ಳಲಾಗಿದೆ ಎಂದು ಯೋಜನೆಯ ಕಾಯ೯ನಿವಾ೯ಹಕ ನಿದೇ೯ಕ ಡಾ| ಎಲ್‌. ಹೆಚ್‌ ಮಂಜುನಾಥ್‌ ಹೇಳಿದರು.


ಅವರು ಮಾ.6ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕಳೆದೆರಡು ದಶಕಗಳಿಂದ ಯೋಜನೆಯು ಮಹಿಳಾ ಸಬಲೀಕರಣ ಕಾರ್ಯಕ್ರಮದ ಅಂಗವಾಗಿ ಮಹಿಳೆಯರಲ್ಲಿ ಸ್ವಉದ್ಯೋಗ ಮತ್ತು ಉದ್ದಿಮೆಶೀಲತೆಯನ್ನು ಬೆಳೆಸುವ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳುತ್ತಾ ಬಂದಿದೆ. ಇದರಿಂದ ಕರ್ನಾಟಕದಾದ್ಯಂತ ಸುಮಾರು 10 ಲಕ್ಷಕ್ಕೂ ಮಿಕ್ಕಿದ ಮಹಿಳೆಯರು ವಿವಿಧ ರೀತಿಯ ಸ್ವಉದ್ಯೋಗಗಳನ್ನು ಪ್ರಾರಂಭಿಸಿದ್ದಾರೆ, ಇವರಿಗೆ ಹಣಕಾಸಿನ ನೆರವು ಸುಲಭವಾಗಿ ದೊರೆಯುವಲ್ಲಿ ಸಿಡ್ಡಿ ಸಂಸ್ಥೆಯು ಜಾರಿಗೆ ತಂದಿರುವ ‘ಪ್ರಯಾಸ್ ಯೋಜನೆ’ಯನ್ನು ರಾಜ್ಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಅನುಷ್ಠಾನಿಸುತ್ತಿದ್ದು, ಕಳೆದೆರಡು ವರ್ಷಗಳಲ್ಲಿ 22,500 ಮಹಿಳಾ ಉದ್ದಿಮೆದಾರರಿಗೆ ಸ್ವಉದ್ಯೋಗಗಳನ್ನು ಕೈಗೊಳ್ಳಲು ಸುಮಾರು ರೂ. 700 ಕೋಟಿಯವರೆಗಿನ ನೆರವನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ಅಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಕಾಯ೯ಕ್ರಮನ್ನು ಉದ್ಘಾಟಿಸಲಿದ್ದು, ಭಾರತೀಯ ಸಣ್ಣ ಉದ್ದಿಮೆಗಳ ಬ್ಯಾಂಕ್ (ಸಿಡ್ಬಿ)ಯ ಅಧ್ಯಕ್ಷ ಶಿವಸುಬ್ರಮಣ್ಯಂ ರಾಮನ್‌ರವರು “ಅಮೃತ ಸಿಂಚನ ಪ್ರಯಾಸ್ ಯೋಜನಾ” ಎನ್ನುವ ಮಹಿಳಾ ಉದ್ದಿಮೆದಾರರ ಯಶೋಗಾಥೆಗಳ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಿದ್ದಾರೆ, ಶ್ರೀಮತಿ ಹೇಮವತಿ ಹೆಗ್ಗಡೆ ಮತ್ತು ಸಿಡ್ಡಿ ಸಂಸ್ಥೆಯ ಮುಖ್ಯ ಕಾಯ೯ನಿವಾ೯ಹಣಾಧಿಕಾರಿ ರವಿತ್ಯಾಗಿ ಮುಖ್ಯ ಅತಿಥಿಗಳಾಗಿರುವರು. ಕಾರ್ಯಗಾರದಲ್ಲಿ ಮಹಿಳಾ ಉದ್ದಿಮೆದಾರರಿಗೆ ಲೆಕ್ಕಪತ್ರಗಳ ನಿರ್ವಹಣೆ, ಲೆಕ್ಕಪರಿವೀಕ್ಷಣೆ, ಇನ್‌ಕಮ್ ಟ್ಯಾಕ್ಸ್ ನಿಯಮಗಳು ಮತ್ತು ಜಿಎಸ್‌ಟಿ ನಿಯಮಗಳ ಬಗ್ಗೆ ಮಾಹಿತಿಯನ್ನು ತಜ್ಞರುಗಳು ನೀಡಲಿದ್ದಾರೆ. ಮಹಿಳೆಯರ ಉದ್ದಿಮೆಶಿಲತೆ ಮನೋಭಾವ ವೈಶಿಷ್ಟ್ಯತೆಗಳ ಕುರಿತಾಗಿಯೂ ಕೂಡಾ ಮಾಹಿತಿಯನ್ನು ಒದಗಿಸಲಾಗುವುದು. ಕಾರ್ಯಗಾರದಲ್ಲಿ ವಿವಿಧ ತಂತ್ರಾಂಶಗಳ ಕುರಿತಾಗಿಯೂ ವಿಸ್ತ್ರತವಾದ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಂಜೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಬ್ಯಾಂಕ್ ಆಫ್ ಬರೋಡಾದ ಮಂಗಳೂರು ವಿಭಾಗದ ಮಹಾಪ್ರಬಂಧಕಿ ಶ್ರೀಮತಿ ಗಾಯತ್ರಿಯವರು ಮುಖ್ಯ ಭಾಷಣವನ್ನು ಮಾಡಲಿದ್ದಾರೆ. ಶ್ರೀಮತಿ ಹೇಮಾವತಿ ಹೆಗ್ಗಡೆಯವರು ಸಮಾರೋಪ ಭಾಷಣವನ್ನು ಮಾಡಲಿದ್ದಾರೆ. ಇದೇ ಸಂದರ್ಭ ಪ್ರಯಾಸ್ ಯೋಜನೆಯಲ್ಲಿ ಅರ್ಜಿ ಸಲ್ಲಿಸಿರುವ ಆಯ್ದ ಫಲಾನುಭವಿಗಳಿಗೆ ಪ್ರಯಾಸ್ ಸಾಲ ಮಂಜೂರಾತಿ ಪತ್ರವನ್ನು ವಿತರಿಸಲಾಗುವುದು, ಮುಂದಿನ ದಿನಗಳಲ್ಲಿ ಪ್ರಯಾಸ್ ಯೋಜನೆಯನ್ನು ಇನ್ನಷ್ಟು ವಿಸ್ತರಿತ ರೂಪದಲ್ಲಿ ಕೈಗೊಳ್ಳಲು ಧರ್ಮಸ್ಥಳ ಯೋಜನೆ ಮತ್ತು ಸಿಡ್ಡಿ ಸಂಸ್ಥೆಗಳು ನಿರ್ಧರಿಸಿದ್ದು, ಮುಂದಿನ ವರ್ಷಕ್ಕೆ ರೂ. 500 ಕೋಟಿ ಬೇಡಿಕೆಯನ್ನು ಈಗಾಗಲೇ ಸಿದ್ಧಿ ಸಂಸ್ಥೆಗೆ ನೀಡಲಾಗಿದೆ ಎಂದು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಿದೇ೯ಶಕ ವಸಂತ್‌, ನಿರಂತರ ಪತ್ರಿಕೆಯ ಚಂದ್ರಹಾಸ ಚಾಮಾ೯ಡಿ, ಯೋಜನಾಧಿಕಾರಿ ಸುರೇಂದ್ರ ಉಪಸ್ಥಿತರಿದ್ದರು.

Related posts

ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಉಜಿರೆ ಮಹಾಶಕ್ತಿಕೇಂದ್ರದ ಸಭೆ

Suddi Udaya

ಪ್ರಸನ್ನ ಕಾಲೇಜ್ ಆಫ್ ಫಾರ್ಮಸಿ ವಿದ್ಯಾರ್ಥಿಗಳಿಂದ ಶೇ. 100 ಫಲಿತಾಂಶ ದಾಖಲೆ

Suddi Udaya

ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವರ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ: ಭಕ್ತರ ಗಮನ ಸೆಳೆದ ಶ್ರೀ ಮಹಾಲಿಂಗೇಶ್ವರ ದೇವರ ಸೆಲ್ಪಿ ಪ್ಯೊಂಟ್ ಮತ್ತು ಪವರ್ ಆನ್ ಸಂಸ್ಥೆಯ ಲಕ್ಕಿ ಸ್ಟಾರ್ ಮಳಿಗೆ ಶಾಸಕ ಹರೀಶ್ ಪೂಂಜರಿಂದ ಉದ್ಘಾಟನೆ, ಶೀತಲ್ ಜೈನ್ ಮಾಲೀಕತ್ವದ ಪವರ್ ಆನ್ ಸಂಸ್ಥೆಯ ಪ್ರಾಯೋಜಕತ್ವ

Suddi Udaya

ಚಾರ್ಮಾಡಿ ಗ್ರಾ.ಪಂ.ನಲ್ಲಿ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯೆಡೆಗೆ , ಮತ್ತು ಮನೆ ಮನೆ ಜಾಥಾ ಅಭಿಯಾನದಡಿ ಉದ್ಯೋಗ ಖಾತರಿ ವಿಶೇಷ ಗ್ರಾಮ ಸಭೆ, ಜಾಥಾ

Suddi Udaya

ಉಜಿರೆ ಹಳೆಪೇಟೆ ಮಸೀದಿಯಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ

Suddi Udaya

ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಟಿಡೊಂಜಿ ದಿನ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ