September 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ:ಮಹಿಳಾ ವೃಂದದ ನೂತನ ಕಟ್ಟಡ ಉದ್ಘಾಟನೆ

ಬೆಳ್ತಂಗಡಿ: ಐ.ಬಿ.ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮಹಿಳಾ ವೃಂದದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಮಾ.6ರಂದು ನಡೆಯಿತು.

ಶಾಸಕ ಹರೀಶ್ ಪೂಂಜ ನೂತನ ಕಟ್ಟಡ ಹಾಗೂ ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರಿದರು.

ಮಹಿಳಾ ವೃಂದದ ಅಧ್ಯಕ್ಷೆ ಶ್ರೀಮತಿ ಆಶಾ ಸತೀಶ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ನಗರ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಉಜಿರೆ ಉದ್ಯಮಿ ಮೋಹನ್ ಕುಮಾರ್, ಧರ್ಮಸ್ಥಳ ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರಾಜೇಶ್ ಕೆ, ಮಹಿಳಾ ವೃಂದದ ಸ್ಥಾಪಕ ಕಾರ್ಯದರ್ಶಿ ಶಶಿಕಲಾ ಪಿ. ರಾವ್, ಕಾರ್ಯದರ್ಶಿ ವೀಣಾವಿನೋದ್ ಕುಮಾರ್ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಮಹಿಳಾ ವೃಂದದ ಪೂರ್ವಾಧ್ಯಕ್ಷೆ ಜಯಶ್ರೀ ಪಿ ನಾಯಕ್ ಹಾಗೂ ನ.ಪಂ. ಸದಸ್ಯ ಶರತ್ ಶೆಟ್ಟಿ ಯವರನ್ನು ಸನ್ಮಾನಿಸಲಾಯಿತು.

ಸಂಧ್ಯಾ ಪ್ರಾರ್ಥಿಸಿ, ರಶ್ಮಿ ಪಟವರ್ಧನ್ ಸ್ವಾಗತಿಸಿ, ಹೇಮಾವತಿ ಕಾರ್ಯಕ್ರಮ ನಿರೂಪಿಸಿ,ಉಮಾ ಪಿ ರಾವ್ ಪ್ರಾಸ್ತಾವಿಕ ಮಾತನಾಡಿದರು.

Related posts

ಪದ್ಮುಂಜದಲ್ಲಿ 12 ಗಂಟೆಗಳ ಮ್ಯಾರಥಾನ್ ಯೋಗ ತರಬೇತಿ ಶಿಬಿರದ ಸಮಾರೋಪ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಾಧಕಿ ಕುಮಾರಿ ಅದಿತಿ ಮುಗೆರೋಡಿ ರವರಿಗೆ ಸನ್ಮಾನ

Suddi Udaya

ಹಾಸನದಿಂದ ತಪ್ಪಿಸಿಕೊಂಡು ಬಂದ ಬಾಲಕ : ಉಪ್ಪಿನಂಗಡಿ ಪೊಲೀಸರಿಗೆ ಒಪ್ಪಿಸಿದ ಬೆಳ್ತಂಗಡಿ ಶಿಕ್ಷಕಿಯರು

Suddi Udaya

ಕೊಕ್ಕಡ, ಅರಸಿನಮಕ್ಕಿಯಲ್ಲಿ ಹರೀಶ್ ಪೂಂಜರ ಬಿರುಸಿನ ಪ್ರಚಾರ ಸಭೆ

Suddi Udaya

ಬೆಳ್ತಂಗಡಿ: ನ್ಯಾಯಲಯದ ಸಿಬ್ಬಂದಿ ಪ್ರದೀಪ್ ಡಿ.ಎಸ್ ಹೃದಯಾಘಾತದಿಂದ ನಿಧನ

Suddi Udaya

ಬೆಳಾಲು ಶ್ರೀ ಧ.ಮಂ.ಅ.ಪ್ರೌಢ ಶಾಲೆಯಲ್ಲಿ ಆಟಿದ ಲೇಸು ಮತ್ತು ಅಭಿನಂದನಾ ಕಾರ್ಯಕ್ರಮ

Suddi Udaya

ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಣಾಹ೯ ಪೋಸ್ಟ್ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲು

Suddi Udaya
error: Content is protected !!