April 6, 2025
ಪ್ರಮುಖ ಸುದ್ದಿ

ಅಳದಂಗಡಿಯಲ್ಲಿ ಸೌಮ್ಯ ರೆಸಿಡೆನ್ಸಿ ಬೋರ್ಡಿಂಗ್ & ಲಾಡ್ಜಿಂಗ್ ಲೋಕಾರ್ಪಣೆ

ಬೆಳ್ತಂಗಡಿ: ಅಳದಂಗಡಿ ಸೂಳಬೆಟ್ಟು ರಸ್ತೆಯಲ್ಲಿ ನೂತನವಾಗಿ ಪ್ರಾರಂಭಿಸಿದ ಸೌಮ್ಯ ರೆಸಿಡೆನ್ಸಿ ಬೋರ್ಡಿಂಗ್ ಮತ್ತು ಲಾಡ್ಜಿಂಗ್, ರೀಜೆಂಟ್ ಫ್ಯಾಮಿಲಿ ರೆಸ್ಟೋರೆಂಟ್ ಇದರ ಶುಭಾರಂಭವು ಮಾ.29 ರಂದು ನಡೆಯಿತು.

ಸೌಮ್ಯ ರೆಸಿಡೆನ್ಸಿಯ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ನೇರವೇರಿಸಿದರು.
ಅಳದಂಗಡಿ ಅರಮನೆಯ ಶಿವಪ್ರಸಾದ ಅಜಿಲ ದೀಪ ಪ್ರಜ್ವಲನೆ ಮಾಡಿದರು.ರೆಸ್ಟೋರೆಂಟ್ ನ ಉದ್ಘಾಟನೆಯನ್ನು ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ನೇರವೇರಿಸಿದರು.

ವೇದಿಕೆಯಲ್ಲಿ ಅಳದಂಗಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸದಾನಂದ ಪೂಜಾರಿ ಉಂಗೀಲಬೈಲು,ಸಂತೋಷ್ ಘರ್ ಕಾಂಪ್ಲೆಕ್ಸ್ ಮಾಲಕ ಎಡ್ವರ್ಡ್ ಪಾಯಸ್,ಮಂಗಳೂರು ನಿವೃತ ಅಬಕಾರಿ ಅಧೀಕ್ಷಕ ಎಂ.ಸದಾಶಿವ ಹೆಗ್ಡೆ, ಅಳದಂಗಡಿ ಸಿ.ಎ ಬ್ಯಾಂಕ್ ಅಧ್ಯಕ್ಷ ಶಿವ ಭಟ್ ಕಟ್ಟೂರು,ಶಾರದಾ ಕುಮಾರ ಹೆಗ್ಡೆ ಕೊಕ್ರಾಡಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ ಮತ್ತು ಬಿಲ್ಡಿಂಗ್ ನ್ನು ಸುಂದರವಾಗಿ ನಿರ್ಮಿಸಿದ ದಯಾನಂದ ಕುಲಾಲ್ ಅವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಮಾಲಕರಾದ ಸುಂದರ ಹೆಗ್ಡೆ ಮತ್ತು ಶ್ರೀಮತಿ ಸೌಮ್ಯ ಹೆಗ್ಡೆ, ಸೌರಭ್ ಹೆಗ್ಡೆ, ಸೌಮಿನಿ ಹೆಗ್ಡೆ ಅತಿಥಿ ಗಣ್ಯರನ್ನು ಆತ್ಮೀಯವಾಗಿ ಬರಮಾಡಿಕೊಂಡು ಸ್ವಾಗತಿಸಿದರು.

ಜೆಸಿ ಪೂರ್ವವಲಯ ಅಧ್ಯಕ್ಷೆ ಸೌಜನ್ಯ ಹೆಗ್ಡೆ ಹಾಗೂ ವಿಜಯ ಕುಮಾರ್ ಜೈನ್ ನಿರೂಪಿಸಿದರು.

Related posts

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಟ್ರಸ್ಟ್ ವತಿಯಿಂದ ಟ್ರಸ್ಟ್ ಸದಸ್ಯತ್ವ ನೇಮಕಾತಿ ಸಭೆ

Suddi Udaya

ಬೆಳ್ತಂಗಡಿ: ಚುನಾವಣೆ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಬಿಗಿ : 24 ಗಂಟೆಯೂ ಸಂಚರಿಸುವ ವಾಹನಗಳ ಪರಿಶೀಲನೆ

Suddi Udaya

ಉಜಿರೆ: ಅನುಗ್ರಹ ಶಾಲಾ ವಾರ್ಷಿಕ ಕ್ರೀಡಾಕೂಟ

Suddi Udaya

ಕಣಿಯೂರು ಮಹಾಶಕ್ತಿ ಕೇಂದ್ರದ ಚುನಾವಣಾ ಪೂರ್ವಭಾವಿ ಸಭೆ

Suddi Udaya

ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡು 14 ವರ್ಷ ಜೀವನ್ಮರಣ ಹೋರಾಟ ನಡೆಸಿದ ಶಿಕ್ಷಕಿ ಭಾರತಿ ನಿಧನ

Suddi Udaya

ಸೆ.14: ಗುರುವಂದನ ಕಾರ್ಯಕ್ರಮಕ್ಕೆ ಬಹರೈನ್ ಹಾಗೂ ದುಬೈಗೆ ಶ್ರೀರಾಮ ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಶ್ರೀಗಳ ಯಾತ್ರೆ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ