September 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ಮದ್ದಡ್ಕರಾಮನವಮಿ ಕಾರ್ಯಕ್ರಮ

ಬೆಳ್ತಂಗಡಿ: ರಾಮನನ್ನು ದಿನನಿತ್ಯ ಸ್ತುತಿಸಿದರೆ ರಾಮನ ಅನುಗ್ರಹದಿಂದ ದೇಶ ರಾಮರಾಜ್ಯವಾಗುವುದು ರಾಮನ ಸ್ಮರಣೆಯಿಂದ ತಾಪ ಪಾಪ ಅಜ್ಞಾನವನ್ನು ದೂರವಾಗಿಸಬಹುದು ಎಂದು ಶ್ರೀ ನಾರಾಯಾಣ ಗುರು ಪದವಿ ಪೂರ್ವ ಕಾಲೇಜು ಮಂಗಳೂರು ಇದರ ಉಪನ್ಯಾಸಕ ಕೇಶವ ಬಂಗೇರ ನುಡಿದರು ಮದ್ದಡ್ಕ ಶ್ರೀರಾಮ ಸೇವಾ ಸಮಿತಿ ಬಜರಂಗದಳ ವಿಶ್ವಹಿಂದೂ ಪರಿಷತ್ ಇದರ ಅಶ್ರಯದಲ್ಲಿ ರಾಮ ನವಮಿ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು

ಶ್ರೀ ರಾಮ ಸೇವಾ ಸಮಿತಿ ಅಧ್ಯಕ್ಷ ರಾಜ್ ಪ್ರಕಾಶ್ ಪಡ್ಡೈಲು ಅಧ್ಯಕ್ಷತೆ ವಹಿಸಿದ್ದರು ವೇದಿಕೆಯಲ್ಲಿ‌ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ. ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಪ್ರಖಂಡ ಅಧ್ಯಕ್ಷರು ದಿನೇಶ್ ಚಾರ್ಮಾಡಿ. ಭಜರಂಗದಳ ಬೆಳ್ತಂಗಡಿ ಪ್ರಖಂಡ ಸಂಚಾಲಕರು ಸಂತೋಷ್ ಅತ್ತಾಜೆ. ವಿಶ್ವ ಹಿಂದೂ ಪರಷತ್ ಮದ್ದಡ್ಕ ಘಟಕ ಅಧ್ಯಕ್ಷ ಗಣೇಶ್ ಶೆಟ್ಟಿ ಅರ್ಕಜೆ. ಯುವ ಉದ್ಯಮಿ ಸುದೀಪ್ ಶೆಟ್ಟಿ ಮೂಡೈಲು. ಸಂಪತ್ ಶೆಟ್ಟಿ ಪಣಕಜೆ .ಬಜರಂಗದಳ ಸಂಚಾಲಕರು ಯಶೋಧರ ಶೆಟ್ಟಿ ಅರ್ಕಜೆ . ಶ್ರೀ ಕಿರಾತ ಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನ ಮೈರಲ್ಕೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗೋಪಾಲ ಶೆಟ್ಟಿ ಕೋರ್ಯಾರು. ಶ್ರೀರಾಮ ಸೇವಾ ಸಮಿತಿ ಕಾರ್ಯಧರ್ಶಿ ಮನೋಹರ ಕೇದಳಿಕೆ. ವಿನೋದ್ ಶೆಣೈ ಉಪಸ್ಥತರಿದ್ದರು ಪ್ರಭಾಕರ ಶೆಟ್ಟಿ ಸ್ವಾಗತಿಸಿ ವಿಠಲ್ ಶೆಟ್ಟಿ  ಉಪ್ಪಡ್ಕ ಕಾರ್ಯಕ್ರಮ ನಿರೂಪಿಸಿದರು  ಬೆಳಿಗ್ಗೆ ಓಡೀಲು ಮಹಾಲಿಂಗೇಶ್ವರ ಪ್ರಧಾನ ಅರ್ಚಕರು ರಘರಾಮ್ ಭಟ್‌ ಮಠ  ನೇತ್ರತ್ವದಲ್ಲಿ ಗಣಹೋಮ ವಿವಿದ ಭಜನಾ ಮಂಡಳಿಗಳಿಂದ  ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ವಿಶೇಷ ಭಜನಾ ಕಾರ್ಯಕ್ರಮಕ್ಜೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮ ಜರಗಿತು (ವರದಿ ಚಿತ್ರ ಮನು ಮದ್ದಡ್ಕ

Related posts

ಗುರುವಾಯನಕೆರೆ ಶಕ್ತಿ ನಗರದ ಬಳಿ ನಿಯಂತ್ರಣ ತಪ್ಪಿ ಕಾರು ಪಲ್ಟಿ: ಓರ್ವ ಸಾವು, ಇಬ್ಬರು ಗಂಭೀರ ಗಾಯ

Suddi Udaya

ಕನ್ಯಾಡಿ ಸರ್ಕಾರಿ ಶಾಲೆಗೆ ಹಸಿರು ನೈರ್ಮಲ್ಯ ಅಭ್ಯುದಯ ಪ್ರಶಸ್ತಿ

Suddi Udaya

ಅರಸಿನಮಕ್ಕಿ: ವಲಯ ಮಟ್ಟದ ಪ್ರಗತಿಬಂಧು ಒಕ್ಕೂಟಗಳ ಪದಗ್ರಹಣ ಸಮಾರಂಭ ಹಾಗೂ ಸಾಧನಾ ಸಮಾವೇಶ

Suddi Udaya

ಗುರುವಾಯನಕೆರೆ:ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ )ಕರ್ನಾಟಕ ಕೇಂದ್ರ ಕಚೇರಿ ತುಮಕೂರು ನೇತ್ರಾವತಿ ವಲಯ ಮಂಗಳೂರು:ಉಪ್ಪಿನಂಗಡಿ ತಾಲೂಕು ಶ್ರೀ ಪಾಂಡುರಂಗ ಶಾಖೆ ಗುರುವಾಯನಕೆರೆ – ವಾರ್ಷಿಕೋತ್ಸವ ವೈಭವ

Suddi Udaya

ಇತಿಹಾಸ ಪ್ರಸಿದ್ಧ ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಬ್ರಹ್ಮಕುಂಭಾಭಿಷೇಕ: ಸಾಯಿ ಕುಮಾರ್ ಶೆಟ್ಟಿ ನವಶಕ್ತಿ ಇವರಿಂದ ಕಾಯಾ೯ಲಯದ ಉದ್ಘಾಟನೆ

Suddi Udaya

ಅಕ್ರಮ ಮರಳು ದಾಸ್ತಾನು ಅಡ್ಡೆ ಪತ್ತೆಹಚ್ಚಿದ ವೇಣೂರು ಪೊಲೀಸರು

Suddi Udaya
error: Content is protected !!