28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿ

ಶ್ರೀ ದೇವಿ ಭಗವತಿ ಅಮ್ಮನವರ ಬ್ರಹ್ಮಕಲಶೋತ್ಸವ, ದೇವರ ವಿಗ್ರಹದ ಮೆರವಣಿಗೆ : ಹೊರಕಾಣಿಕೆ ಸಮರ್ಪಣೆ

ಮೇಲಂತಬೆಟ್ಟು: ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಎ.4 ರಂದು ಬೆಳಗ್ಗೆ ಲಾಯಿಲ ಶ್ರೀ ವೆಂಕಟರಮಣ ದೇವಸ್ಥಾನದಿಂದ ಮೇಲಂತಬೆಟ್ಟು ಭಗವತಿ ದೇವಸ್ಥಾನಕ್ಕೆ ಭಕ್ತರಿಂದ ಹೊರಕಾಣಿಕೆ ಸಮರ್ಪಣೆ ಹಾಗೂ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಗೊಳ್ಳಲಿರುವ ನೂತನ ಗಣಪತಿ ವಿಗ್ರಹ ಹಾಗೂ ಶ್ರೀ ನಾರಾಯಣ ಗುರುಗಳ ಪೀಠದ ಮೆರವಣಿಗೆ ನಡೆಯಿತು.

ಲಾಯಿಲ ವೆಂಕಟರಮಣ ದೇವಸ್ಥಾನದ ಎದುರು ಹೊರಕಾಣಿಕೆ ಮೆರವಣಿಗೆಯನ್ನು ದೇವಸ್ಥಾನದ ಸುದೇಶ್ ಕಾಮತ್ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿಯವರು ಮೆರವಣಿಗೆಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಲಾಯಿಲದಿಂದ ಮೇಲಂತಬೆಟ್ಟು ತನಕ ಬೆಳ್ತಂಗಡಿ ಮುಖ್ಯ ಪೇಟೆಯಲ್ಲಿ ಮೆರವಣಿಗೆ ಸಾಗಿತು. ನಂತರ ದೇವಸ್ಥಾನದಲ್ಲಿ ಉಗ್ರಾಣದ ಉದ್ಘಾಟನೆಯನ್ನು ತನ್ನೋಜಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಲೇಜಿ ಅಧ್ಯಕ್ಷ ಕೆ.ಎಸ್ ಯೋಗೀಶ್ ಕುಮಾರ್ ನಡಕರ ಹಾಗೂ ಕಾರ್ಯಾಲಯವನ್ನು ಬೆಳಾಲು ಮಂಜನೊಟ್ಟು ನಾರಾಯಣ ಸುವರ್ಣ ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಆಡಳಿತ ಮೊಕ್ತೇಸರ ಯೋಗೀಶ್ ಪೂಜಾರಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಡಾ. ಎಂ.ಎಂ ದಯಾಕರ್ ಭಟ್ ಉಜಿರೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಭ್ರಾಮರಿ ಮಾಪಲಾಡಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಯಾನಂದ ಲಾಯಿಲ, ಕಾರ್ಯಾಧ್ಯಕ್ಷ ನಾರಾಯಣ ಪೂಜಾರಿ ಬರೆಮೇಲು, ಪ್ರಧಾನ ಕಾರ್ಯದರ್ಶಿ ರಾಜೀವ ಸಾಲಿಯಾನ್ ಮುಂಡೂರು, ಕೋಶಾಧಿಕಾರಿ ಪ್ರಶಾಂತ್ ಕುದ್ಯಾಡಿ, ಪೂಜಾ ಸಮಿತಿ ಅಧ್ಯಕ್ಷ ರಮೇಶ್ ಬಂಗೇರ ಅಂಕಾಜೆ, ಪ್ರಧಾನ ಕಾರ್ಯದರ್ಶಿ ಮೋಹನ್ ಬಟ್ಯರಡ್ಡ, ಸ್ವಾಗತ ಸಮಿತಿ ಸಂಚಾಲಕ ಚಂದ್ರರಾಜ್ ನೂಜೆಲು, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಯೋಗೀಶ್ ಕುಲಾಲ್ ಪಕ್ಕಿದಕಲ, ಪ್ರಧಾನ ಅರ್ಚಕ ಯಶವಂತ ಶಾಂತಿ, ಭಜನಾ ಸಮಿತಿ ಅಧ್ಯಕ್ಷ ತಿಮ್ಮಪ್ಪ ಪೂಜಾರಿ ಮಾಪಲಾಡಿ, ಧರ್ಮಸ್ಥಳ ಯೋಜನೆ ನಿರ್ದೇಶಕ ಸತೀಶ್ ಶೆಟ್ಟಿ, ಯೋಜನಾಧಿಕಾರಿಗಳಾದ ಸುರೇಂದ್ರ ಬೆಳ್ತಂಗಡಿ, ಯಶವಂತ್ ಗುರುವಾಯನಕೆರೆ, ನ್ಯಾಯವಾದಿ ಭಗೀರಥ ಜಿ, ನಾರಾಯಣ ಸುವರ್ಣ ಮಂಜನೊಟ್ಟು, ಯೋಗೀಶ್ ಕುಲಾಲ್ ಸಂದೀಪ್ ಅನುಗ್ರಹ, ಹೊರಕಾಣಿಕೆ ಸಮಿತಿಯ ಸಂಚಾಲಕ ಹರೀಶ್ ಮೇಲ್ವಿಚಾರಕರು, ರಮಾನಂದ ಸಾಲ್ಯಾನ್ ವಿವಿಧ ಸಮಿತಿಗಳ ಸಂಚಾಲಕರು, ಸಹ ಸಂಚಾಲಕರು, ಗ್ರಾಮಸ್ಥರು ಹಾಗೂ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಎಕ್ಸೆಲ್ ಪುಟಾಣಿಗಳ ” ನಡೆ ಪ್ರಕೃತಿಯ ಕಡೆ” ಕಾರ್ಯಕ್ರಮ

Suddi Udaya

ಬಂಟರ ಸಂಘ ಉಜಿರೆ ವಲಯ ಪದಾಧಿಕಾರಿಗಳ ಆಯ್ಕೆ

Suddi Udaya

ಪಜಿರಡ್ಕ ಸಂಗಮ ಕ್ಷೇತ್ರ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಧ್ವಜಸ್ತಂಬ ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವ ಹಾಗೂ ಪ್ರತಿಷ್ಠಾ ದಿನಾಚರಣೆ, ವಾರ್ಷಿಕ ಜಾತ್ರೆ ರಥೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಅಶಕ್ತರಿಗೆ ಆರ್ಥಿಕ ಸಹಕಾರ, 500 ಗಿಡಗಳ ವಿತರಣೆಯೊಂದಿಗೆ ವಿಶಿಷ್ಟ ರೀತಿಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಗೆ ಶೇ. 98.61

Suddi Udaya

ಬೆಳ್ತಂಗಡಿ: ಬೃಹತ್ ಕಾರ್ಮಿಕ ಜಾಗೃತಿ ಆಂದೋಲನವನ್ನು ಆಯೋಜಿಸುವ ಕುರಿತು ಸಮಾಲೋಚನ ಸಭೆ

Suddi Udaya
error: Content is protected !!